ಬೆಳಗಾವಿ- ಬೆಳಗಾವಿಯ ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ತಹಶೀಲ್ದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ, ಈ ಹಿಂದೆ ಲಕ್ಷ್ಮೀ ಹೆಬ್ಬಾಳಕರ ಅವರು ಶಾಸಕರಾಗಿದ್ದಾಗ ಅವರ ಆಪ್ತ ಸಹಾಯಕರಾಗಿದ್ದ,ಅಶೋಕ ಮನ್ನೀಕೇರಿ ಮದ್ಯರಾತ್ರಿ ಸಾವನ್ನೊಪ್ಪಿದ್ದಾರೆ.
ಅವರ ಸಾವಿಗೆ ನಿಖರ ಕಾರಣ ತಿಳಿದು ಬಂದಿಲ್ಲ, ಕೆಲವು ಮೂಲಗಳ ಪ್ರಕಾರ ಮಧ್ಯರಾತ್ರಿ ಅವರಿಗೆ ಹೃದಯಾಘಾತ ವಾದ ಕಾರಣ ಕೆಎಲ್ಇ ಆಸ್ಪತ್ರೆಗೆ ಸೇರಿಸಲಾಗಿತ್ತು, ಮದ್ಯರಾತ್ರಿ ಅವರು ಸಾವನ್ನೊಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಅತ್ಯಂತ ಸ್ನೇಹಜೀವಿ,ಭಾವಜೀವಿಯಾಗಿದ್ದ ಅಶೋಕ ಮನ್ನೀಕೇರಿ,ಸರ್ಕಾರಿ ಅಧಿಕಾರಿಯಾಗಿದ್ದರೂ ಸಹ , ಸಾರ್ವಜನಿಕರ ಜೊತೆ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದರು, ನಿಜವಾಗಿಯೂ ಅವರ ಸಾವಿನ ಸುದ್ದಿ ತಿಳಿದು ಆಘಾತವಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ