Breaking News

ಜೈನಮುನಿಗಳ ಇಬ್ಬರು ಹಂತಕರು 7 ದಿನ ಪೋಲೀಸ್ ಕಸ್ಟಡಿಗೆ.

ಹಿರೇಕೋಡಿ ನಂದಿಪರ್ವತ ಆಶ್ರಮದ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು,ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಆರೋಪಿಗಳಿಗೆ ವೈದ್ಯಕೀಯ ಪರೀಕ್ಷೆ ಮಾಡಲಾಯಿತು.

ವೈದ್ಯಕೀಯ ಪರೀಕ್ಷೆ ಬಳಿಕ ಆರೋಪಿಗಳನ್ನು ಕೋರ್ಟ್‌ಗೆ ಕರೆ ತಂದ ಪೊಲೀಸರು,ಆರೋಪಿತರಾದ,ಎ1 ಆರೋಪಿ ನಾರಾಯಣ ಮಾಳಿ, ಎ2 ಆರೋಪಿ ಹಸನಸಾಬ್ ದಲಾಯತ್ ಕೋರ್ಟ್‌ಗೆ ಹಾಜರು ಪಡಿಸಲಾಯಿತು.ಚಿಕ್ಕೋಡಿ ಪ್ರಧಾನ ದಿವಾಣಿ ನ್ಯಾಯಾಲಯಕ್ಕೆ ಕರೆತಂದ ಪೊಲೀಸರು,ಬಿಗಿಪೊಲೀಸ್ ಭದ್ರತೆಯಲ್ಲಿ ಆರೋಪಿಗಳು ನ್ಯಾಯಾಲಯಕ್ಕೆ ಹಾಜರು ಪಡಿಸಿದರು.

ಜುಲೈ 17ರವರೆಗೆ ಇಬ್ಬರು ಆರೋಪಿಗಳು ಪೊಲೀಸ್ ಕಸ್ಟಡಿಗೆ ನೀಡಿದ ನ್ಯಾಯಾಲಯ,ಆರೋಪಿಗಳಿಬ್ಬರನ್ನು ಏಳು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶಿಸಿದೆ.ಎ1 ಆರೋಪಿ ನಾರಾಯಣ ಮಾಳಿ, ಎ2 ಆರೋಪಿ ಹಸನಸಾಬ್ ದಲಾಯತ್ 7 ದಿನ ಪೊಲೀಸ್ ಕಸ್ಟಡಿಗೆ ನೀಡಿ,ಚಿಕ್ಕೋಡಿ ಪ್ರಧಾನ ದಿವಾಣಿ ನ್ಯಾಯಾಲಯ ನ್ಯಾಯಾಧೀಶ ಚಿದಾನಂದ ಬಡಿಗೇರ ಆದೇಶಿಸಿದ್ದಾರೆ.

ಜೈನಮುನಿಗಳ ಹತ್ಯೆ ಮಾಡಿದ ಆರೋಪಿಗಳು ಇಂದಿನಿಂದ ಪೋಲೀಸ್ ಕಸ್ಟಡಿಯಲ್ಲಿದ್ದು,ಈ ಪ್ರಕರಣದ ನಿಜವಾದ ವಿಚಾರಣೆ ಇನ್ಮುಂದೆ ನಡೆಯಲಿದೆ.

ಡೈರಿ ಸುಟ್ಟ ಬಗ್ಗೆ,ಜೈನಮುನಿಗಳ ಅಣ್ಣ ಹೇಳಿದ್ದು.

ಹಿರೇಕೋಡಿ ನಂದಿಪರ್ವತ ಆಶ್ರಮದ ಜೈನಮುನಿ ಕಾಮಕುಮಾರ ನಂದಿ ಮಹಾರಾಜ ಹತ್ಯೆ ಪ್ರಕರಣದಲ್ಲಿ,ಹಂತಕ ಜೈನಮುನಿಗಳಿಗೆ ಸೇರಿದ ಡೈರಿ ಸುಟ್ಟು ಹಾಕಿದ ವಿಚಾರವಾಗಿ ಜೈನ ಮುನಿಗಳ ಅಣ್ಣ ಮಾದ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

*ಆ ಡೈರಿ ಅವರ ಪರ್ಸನಲ್ ಡೈರಿ ಇರಬಹುದು, ಅದನ್ನ ನಮಗೂ ತೋರಿಸಿರಲಿಲ್ಲ,ಎಂದು
ಹಿರೇಕೋಡಿಯಲ್ಲಿ ಜೈನಮುನಿಗಳ ಪೂರ್ವಾಶ್ರಮದ ಅಣ್ಣನ ಮಗ ಭೀಮಪ್ಪ ಉಗಾರೆ ಹೇಳಿದ್ದಾರೆ.ಕಾಮಕುಮಾರ ನಂದಿ ಮಹಾರಾಜ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷರೂ ಆಗಿರುವ ಭೀಮಪ್ಪ ಉಗಾರೆ ಡೈರಿ ಬಗ್ಗೆ ಹೇಳಿಕೆ ನೀಡಿದ್ದಾರೆ.ಜೈನಮುನಿಗಳು ಸನ್ಯಾಸಿ ಆಗಿದ್ದರಿಂದ ಅವರಿಗೆ ಸೈನಿಂಗ್ ಅಥಾರಿಟಿ ಇರಲ್ಲ,ಸಮಾಜದಲ್ಲಿ ನನ್ನಂತ ಒಬ್ಬನ ಇಟ್ಟುಕೊಂಡು ಟ್ರಸ್ಟ್ ನಡೆಸುತ್ತಿದ್ರು,ಇಷ್ಟೆಲ್ಲಾ ಕಟ್ಟಡ ಆಗಲು ಭಕ್ತರು ನೀಡಿದ ಕಾಣಿಕೆ ಕಾರಣ, ಕಾಣಿಕೆ ನೀಡಿದವರ ಹೆಸರೂ ಕೊಠಡಿಗಳ ಮೇಲಿದೆ,ಕಟ್ಟಡ ಕಾಮಗಾರಿಗೆ ಬೇಕಿದ್ದ ಸಾಮಗ್ರಿ ಆರೋಪಿ ನಾರಾಯಣ ಮಾಳಿ ತಂದು ಹಾಕುತ್ತಿದ್ದ,ಕಟ್ಟಡ ಕಟ್ಟುವಾಗ ಸಾಮಗ್ರಿ ಬೇಕೆಂದು ದುಡ್ಡು ಕೊಟ್ಟಿರಬಹುದು,ಅದನ್ನ ವಾಪಸ್ ಕೇಳಿದಾಗ ಈ ರೀತಿಯ ಕೃತ್ಯ ಮಾಡಿರಬಹುದು ಎಂದು ಟ್ರಸ್ಟ್ ಅದ್ಯಕ್ಷರಾದ ಉಗಾರೆ ಮಾದ್ಯಮಗಳ ಎದುರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮಹಾರಾಜರು ಎಲ್ಲ ಜಾತಿಯವರು ಇಲ್ಲಿ ಉಚಿತವಾಗಿ ಓದಲಿ ಎಂಬ ಆಸೆ ಇತ್ತು,ಜೈನಮುನಿಗಳು ನಾಪತ್ತೆ ಬಳಿಕ
ಎಲ್ಲರ ಜೊತೆ ಪ್ರಮುಖ ಆರೋಪಿ ನಾರಾಯಣ ಮಾಳಿ ಹುಡುಕಾಟ ನಡೆಸಿದ್ದ,ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು,ಸಾವಿರಾರು ಜನ ಬಂದು ಹೋಗುತ್ತಿರುತ್ತಾರೆ, ಯಾರ ಮೇಲೆ ಅಂತಾ ಸಂಶಯ ಪಡೋದು,ಆಯುರ್ವೇದಿಕ್ ಕಾಲೇಜು ಆಗುವ ಬಗ್ಗೆ ನನ್ನ ಬಳಿ ಕೇಳುತ್ತಿದ್ರು,ಆಯುರ್ವೇದಿಕ ಕಾಲೇಜು ಪ್ರೊಫೆಸರ್ ಇರುವುದರಿಂದ ಅದನ್ನ ಕಟ್ಟುವ ಕಷ್ಟ ಗೊತ್ತು,ಜೈನಮುನಿಗಳು ಪ್ರಾಥಮಿಕ ಶಾಲೆ ತೆರೆದು ಬಂದ್ ಮಾಡಿದ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಮುನಿಗಳ ಅಣ್ಣ,ಕೋವಿಡ್ ವೇಳೆ ಮಕ್ಕಳನ್ನು ಪಾಲಕರು ಕರೆತರೋದು ಕಷ್ಟವಾಗಿ ಆಗ ಬಂದ್ ಮಾಡಿದ್ರು ಎಂದು ಹೇಳಿದ್ದಾರೆ.

ಆ ಶಿಕ್ಷಣ ಸಂಸ್ಥೆ ಪುನರ್‌ಸ್ಥಾಪಿಸುವ ವಿಚಾರ ಇದೆ ಎಂದ ಭೀಮಪ್ಪ ಉಗಾರೆ,ಜೈನಮುನಿಗಳ ಕನಸು ಎಲ್ಲರೂ ಸೇರಿ ಈಡೇರಿಸಲೇಬೇಕು,ನಂದಿಪರ್ವತ ಆಶ್ರಮಕ್ಕೆ ನೂತನ ಮುನಿಗಳ ನೇಮಕ ವಿಚಾರ,ಕಾಮಕುಮಾರ ನಂದಿ ಮಹಾರಾಜರಿಗೆ ದೀಕ್ಷೆ ನೀಡಿದ
ಆಚಾರ್ಯ ಶ್ರೀ 108 ಕುಂತಿಸಾಗರ ಮಹಾರಾಜರು ಹೇಳಿದಂತೆ ಮುಂದುವರಿಯುತ್ತೆ ಎಂದ ಭೀಮಪ್ಪ ಉಗಾರೆ ತಿಳಿಸಿದ್ದಾರೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *