ಬೆಳಗಾವಿ- ಬೆಳಗಾವಿಯ ಹಿಂಡಲಗಾ ಜೈಲಿಗೆ ಭೇಟಿ ನೀಡಿದ ಮುಂಬಯಿ ಪೋಲೀಸ್ರು, ಉಗ್ರ ಸಂಘಟನೆಯ ಜೊತೆ ನಂಟು ಹೊಂದಿದ್ದ ಅಪ್ಸರ್ ಪಾಷಾ ಎಂಬಾತನನ್ನು ಮುಂಬಯಿಗೆ ಕರೆದುಕೊಂಡು ಹೋಗಿದ್ದಾರೆ.
ಹಿಂಡಲಗಾ ಜೈಲಿನಿಂದಲೇ ಕೇಂದ್ರ ಸಚಿವ ನೀತಿನ್ ಗಡ್ಕರಿ ಜೀವ ಬೆದರಿಕೆ ಪ್ರಕರಣ ಈಗ ಹೊಸ ಟ್ವಿಸ್ಟ್ ಪಡೆದುಕೊಂಡಿದೆ.ನಿತೀನ್ ಗಡ್ಕರಿ ಬೆದರಿಕೆ ಹಿಂದೆ ಲಷ್ಕರ್ ಇ ತೋಯ್ಬಾ ಸಂಘಟನೆ ಉಗ್ರನ ಪ್ರಚೋದನೆ ಇದೆ ಎನ್ನುವ ಮಾಹಿತಿ ಮುಂಬಯಿ ಪೋಲೀಸರಿಗೆ ಸಿಕ್ಕಿದೆ.ಲಷ್ಕರ್ ಇ ತೋಯ್ಬಾ ಸಂಘಟನೆ ಜೊತೆಗೆ ನಂಟು ಹೊಂದಿದ್ದ ಅಫ್ಸರ್ ಫಾಷಾ ಎನ್‌ಐಎ ತಂಡ ವಶಕ್ಕೆ ಪಡೆದುಕೊಂಡಿದೆ.
ಹಿಂಡಲಗಾ ಜೈಲಿನಿಂದ ಮುಂಬೈಗೆ ಅಪ್ಸರ್ ಫಾಷಾ ಕರೆದೊಯ್ದ ಎನ್ಐಎ ಅಧಿಕಾರಿಗಳು ತನಿಖೆ ಶುರು ಮಾಡಿದ್ದಾರೆ.ಬೆಳಗಾವಿಯಿಂದ ಮುಂಬೈವರೆಗೆ ರಸ್ತೆ ಮಾರ್ಗವಾಗಿ ಆರೋಪಿ ಅಪ್ಸರ್ ಪಾಷಾ ನನ್ನು ಕರೆದೊಯ್ದು ಎನ್ಐಎ ಅಧಿಕಾರಿಗಳು ನಿತೀನ್ ಗಡ್ಕರಿ ಅವರಿಗೆ ಜೀವ ಬೆದರಿಕೆ ಹಾಕಿದ ಪ್ರಕರಣದ. ತನಿಖೆಯನ್ನು ಚುರುಕುಗೊಳಿಸಿದ್ದಾರೆ.
ನಿನ್ನೆ ಇಡೀ ದಿನ ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಅಪ್ಸರ್ ಫಾಷಾ ನನ್ನು ಮುಂಬಯಿ ಪೋಲೀಸರು ತೀವ್ರ ವಿಚಾರಣೆ ನಡೆಸಿದ ಬಳಿಕ ಎನ್ಐಎ ಅಧಿಕಾರಿಗಳು,ಬಳಿಕ ಮಹಾರಾಷ್ಟ್ರದ ನಾಗ್ಪುರ ಪೊಲೀಸರಿಗೆ ಅಪ್ಸರ್ ಪಾಷಾ ಹಸ್ತಾಂತರಿಸಿದ್ದಾರೆ.
ವಿಶೇಷ ವಿಮಾನದ ಮೂಲಕ ಅಪ್ಸರ್ ಪಾಷಾ ಕರೆದೊಯ್ದ ಪೊಲೀಸರು,ಉಗ್ರ ಸಂಘಟನೆ ಲಷ್ಕರ್ ಇ ತೋಯ್ಬಾ ಸಂಘಟನೆ ಜೊತೆಗೆ ನಂಟು ಆರೋಪದಡಿ ಬಂಧಿತನಾಗಿದ್ದ ಅಪ್ಸರ್ ಫಾಷಾ,ಬೆಳಗಾವಿ ಹಿಂಡಲಗಾ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ.