ಬೆಳಗಾವಿ -ಮಾಜಿ ಸಿಎಂ ಹೆಚ್‌ಡಿಕೆ ಪೆನ್‌ಡ್ರೈವ್ ಹೇಳಿಕೆ ವಿಚಾರವಾಗಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೊಸ ಬಾಂಬ್ ಸಿಡಿಸಿದ್ದು,ನನ್ನ ಹತ್ತಿರನೂ ಒಂದು ಪೆನ್‌ಡ್ರೈವ್ ಇದೆ ಎಂದು ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರಿಗೆ ಟಾಂಗ್ ಕೊಟ್ಟಿದ್ದಾರೆ.
ಅಥಣಿಯಲ್ಲಿ ಮಾದ್ಯಮಗಳ ಜೊತೆ ಮಾತನಾಡಿದ ಅವರು,ಬಹಳಷ್ಟು ಕಡೆ ಪೆನ್‌ಡ್ರೈವ್ ಇದಾವೆ, ನನ್ನ ಹತ್ತಿರನೂ ಒಂದು ಪೆನ್‌ಡ್ರೈವ್ ಇದೆ ಎಂದ ಸವದಿ,ಕಾಲಾನುಸಾರ, ಸಂದರ್ಭನುಸಾರ ನಾನು ಪೆನ್‌ಡ್ರೈವ್ ತೋರಿಸುವೆ ಎಂದು ಹೇಳಿಕೆ ನೀಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಬೆಳಗಾವಿ ಜಿಲ್ಲೆ ಅಥಣಿಯಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಈ ರೀತಿಯ ಹೇಳಿಕೆ ನೀಡಿರುವದು ಈಗ ಬೆಳಗಾವಿ ಜಿಲ್ಲೆಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ನಿಮ್ಮ ಹತ್ತಿರ ಪೆನ್‌ಡ್ರೈವ್ ಇರೋದು ಬಿಜೆಪಿಯದ್ದಾ, ಜೆಡಿಎಸ್‌ದ್ದಾ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು,ಅದು ಯಾರದು ಅಂತಾ ತೋರಿಸಿದಾಗ ನಿಮಗೆ ಗೊತ್ತಾಗುತ್ತೆ,ಯಾವಾಗ ಪೆನ್‌ಡ್ರೈವ್ ತೋರಿಸುತ್ತಿರಾ ಎಂದು ಮಾಧ್ಯಮಗಳ ಪ್ರಶ್ನೆಗೆ,ಸಂದರ್ಭ ಬರ್ತಿಲ್ಲ, ಸಂದರ್ಭಕ್ಕೆ ಕಾಯ್ತಿದೀನಿ ಎಂದ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ಪೆನ್‌ಡ್ರೈವ್‌ನಲ್ಲಿ ಇರೋ ದಾಖಲೆ ಬಿಡುಗಡೆ ಮಾಡಿದ್ರೆ ಅಲ್ಲೋಳ ಕಲ್ಲೋಳ ಆಗುತ್ತೆ ಅಂತಾ ಹೇಳ್ತಿದ್ದಾರೆ ಎಂದು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು,ಅಲ್ಲೋಲ ಕಲ್ಲೋಲ ಆಗಲು ಏನೂ ಹಗರಣ ಆಗಿಲ್ಲ, ಭ್ರಷ್ಟಾಚಾರದಲ್ಲಿ ಮುಳುಗಿಲ್ಲ,ಸಹಜವಾಗಿ ವಿಪಕ್ಷದಲ್ಲಿ ಪ್ರಚಾರಕ್ಕೆ ಇರಬೇಕು ಅಂತಾ,ವಿರೋಧ ಪಕ್ಷ ಇದ್ದೂ ಇಲ್ಲದಂಗಾಗಿದೆ,ಅದು ಚಾಲನೆಯಲ್ಲಿ ಇರಬೇಕು ವಿಪಕ್ಷ ಇದೆ ಅಂತಾ ಜನರಲ್ಲಿ ತೋರಿಸಲು ಅಂತಾ ವಿಚಾರ ಹೇಳ್ತಾರೆ,ಅವುಗಳನ್ನೆಲ್ಲ ನಾವು ಸಕಾರಾತ್ಮಕವಾಗಿ ತಗೆದುಕೊಳ್ಳುತ್ತೇವೆ ಎಂದ ಲಕ್ಷ್ಮಣ್ ಸವದಿ ಹೇಳಿಕೆ ನೀಡಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
