ಬೆಳಗಾವಿ-ಮೂಡಲಗಿಯ ಖಾನಟ್ಟಿ-ಶಿವಾಪುರ ಭಾಗದಲ್ಲಿ ಚಿರತೆ ಪ್ರತ್ಯೇಕ್ಷವಾಗಿದೆ ಎನ್ನುವ ಸುದ್ದಿ ಸಾಕಷ್ಟು ಪ್ರಚಾರ ಪಡೆದಿತ್ತು,ಆದ್ರೆ ಟ್ರ್ಯಾಪ್ ಕ್ಯಾಮರಾಗೆ ಸೆರೆಸಿಕ್ಕದ್ದು ಚಿರತೆಯಲ್ಲ, ಕಿರುಬು ಬೆಕ್ಕು ಅನ್ನೋದು ಸ್ಪಷ್ಟವಾಗಿದೆ.
ಚಿರತೆ ಪ್ರತ್ಯಕ್ಷ ವದಂತಿ ಬೆನ್ನಲ್ಲೇ
ಮೂಡಲಗಿ ಅರಣ್ಯ ಇಲಾಖೆ ಅಧಿಕಾರಿಗಳಿಂದ ಟ್ರ್ಯಾಪ್ ಕ್ಯಾಮರಾ ಅಳವಡಿಕೆ ಮಾಡಿದ್ರು,ಚಿರತೆಯ ಚಲನವಲನ ಪತ್ತೆಗೆ ಮೂರು ಟ್ರ್ಯಾಪ್ ಕ್ಯಾಮರಾ ಅಳವಡಿಕೆ ಮಾಡುವ ಮೂಲಕ ಅರಣ್ಯ ಇಲಾಖೆಯ ಅಧಿಕಾರಿಗಳು ಚಿರತೆ ಪತ್ತೆಗೆ ತ್ವರಿತವಾಗಿ ಕಾರ್ಯಾಚರಣೆ ಶುರು ಮಾಡಿದ್ದರು.
ಆದರೆ ಚಿರತೆ ಬದಲು ಟ್ರ್ಯಾಪ್ ಕ್ಯಾಮರಾ ಕಣ್ಣಿಗೆ ಬಿದ್ದ ಕಿರುಬು ಬೆಕ್ಕು,ಎನ್ನುವದು ಗೊತ್ತಾಗಿದ್ದು ಮೂಡಲಗಿ ತಾಲ್ಲೂಕಿನ ಖಾನಟ್ಟಿ ಗ್ರಾಮದ ಜನ ಈಗ ನಿರಾಳವಾಗಿದ್ದಾರೆ.ಮುನ್ನೆಚ್ಚರಿಕೆ ಕ್ರಮವಾಗಿ ಖಾನಟ್ಟಿ-ಶಿವಾಪುರ ಭಾಗದಲ್ಲಿ ನಾಲ್ವರು ಅರಣ್ಯ ಇಲಾಖೆ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಎರಡು ದಿನಗಳ ಹಿಂದೆ ಕಬ್ಬಿನ ಗದ್ದೆಯಲ್ಲಿ ಪ್ರತ್ಯಕ್ಷವಾಗಿದ್ದ ಚಿರತೆಯ ವಿಡಿಯೋ ವೈರಲ್ ಆಗಿತ್ತು.ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಖಾನಟ್ಟಿ-ಶಿವಾಪುರ ಗ್ರಾಮಗಳಲ್ಲಿ ಆತಂಕ ಎದುರಾಗಿತ್ತು.