Breaking News

ರಮೇಶ್ ಜಾರಕಿಹೊಳಿ ಬಿ.ಎಲ್ ಸಂತೋಷ್, ಭೇಟಿ ಮಾಡಿದ್ದು ಯಾತಕ್ಕೆ ಗೊತ್ತಾ..??

ಬೆಳಗಾವಿ- ಈ ಹಿಂದೆ ಸಮ್ಮಿಶ್ರ ಸರ್ಕಾರವನ್ನೇ ಅಸ್ಥಿರಗೊಳಿಸಿ ರಾಷ್ಟ್ರದ ಗಮನ ಸೆಳೆದಿದ್ದ ಮಾಜಿ ಮಂತ್ರಿ ರಮೇಶ್ ಜಾರಕಿಹೊಳಿ ಅವರು ಈಗ ಸದ್ಯಕ್ಕೆ ಏನು ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆ ಸಹಜವಾಗಿ ಎಲ್ಲರನ್ನು ಕಾಡುತ್ತಿದೆ.

ರಮೇಶ್ ಜಾರಕಿಹೊಳಿ ಅವರು ಬಿಜೆಪಿ ನಾಯಕರನ್ನು ಕೇಂದ್ರದ ಮಂತ್ರಿಗಳನ್ನು ಭೇಟಿ ಮಾಡಿದ ಪೋಟೋಗಳು ಆಗಾಗ ವ್ಯಾಟ್ಸಪ್ ಗ್ರೂಪ್ ನಲ್ಲಿ ಹರಿದಾಡುತ್ತವೆ.ಎರಡು ದಿನದ ಹಿಂದೆ ರಮೇಶ್ ಜಾರಕಿಹೊಳಿ ಅವರು ಬಿಜೆಪಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ ಅವರನ್ನು ಭೇಟಿ ಮಾಡಿರುವ ಪೋಟೋ ವೈರಲ್ ಆಗಿದೆ.ಬೆಳಗಾವಿ ಜಿಲ್ಲೆಯ ಬಿಜೆಪಿ ಶಾಸಕರು,ಮಾಜಿ ಶಾಸಕರು ಮತ್ತು ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರು ರಮೇಶ್ ಜಾರಕಿಹೊಳಿ ಅವರ ಬಗ್ಗೆ ದೂರು ನೀಡಿದ್ದಾರೆ ಎನ್ನುವ ಸುದ್ದಿ ಮಾದ್ಯಮಗಳಲ್ಲಿ ಪ್ರಕಟವಾದ ಬೆನ್ನಲ್ಲಿಯೇ ರಮೇಶ್ ಜಾರಕಿಹೊಳಿ ಅವರು ಬಿ.ಎಲ್ ಸಂತೋಷ್ ಅವರನ್ನು ಭೇಟಿ ಮಾಡಿರುವ ವಿಚಾರ ಈಗ ಚರ್ಚೆಗೆ ಕಾರಣವಾಗಿದೆ.

ರಮೇಶ್ ಜಾರಕಿಹೊಳಿ ಅವರ ಬಗ್ಗೆ ಕೇಂದ್ರದ ಬಿಜೆಪಿ ನಾಯಕರಿಗೆ ದೂರು ನೀಡಿರುವ ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರಿಗೆ ಸಾಹುಕಾರ್ ಟಕ್ಕರ್ ಕೊಟ್ರಾ ? ದೂರಿಗೆ ಉತ್ತರ ಕೊಡಲು ಬೆಳಗಾವಿ ಜಿಲ್ಲೆಯ ಬಿಜೆಪಿ ಸಂಘಟನೆ ಯ ಸ್ಥಿತಿಗತಿಗಳ ರಿಯಾಲಿಟಿ ಕುರಿತು ಬಿ ಎಲ್ ಸಂತೋಷ್ ಅವರಿಗೆ ರಮೇಶ್ ಜಾರಕಿಹೊಳಿ ಅವರು ರಿಪೋರ್ಟ್ ಕೊಟ್ರಾ ? ಎನ್ನುವ ಚರ್ಚೆಗಳು ಈಗ ಬಿಜೆಪಿ ವಲಯದಲ್ಲಿ ಶುರುವಾಗಿವೆ.

ರಮೇಶ್ ಜಾರಕಿಹೊಳಿ ಹಠಮಾರಿ ನಾಯಕ,ಸುಮ್ಮನೇ ಕುಳಿತುಕೊಳ್ಳುವ, ವಿರೋಧಿಗಳು ಮಾಡುವ ಆರೋಪಗಳನ್ನು ಸರಳವಾಗಿ ಒಪ್ಪುವ,ನಾಯಕನಂತೂ ಅಲ್ಲ.ಇತ್ತೀಚಿಗೆ ರಮೇಶ್ ಜಾರಕಿಹೊಳಿ ಅವರು ಪದೇ ಪದೇ ಕೇಂದ್ರದ ಬಿಜೆಪಿ ನಾಯಕರನ್ನು ಭೇಟಿ ಮಾಡುತ್ತಿರುವ ವಿಚಾರ ಬೆಳಗಾವಿ ಜಿಲ್ಲೆಯ ಬಿಜೆಪಿ ವಲಯದಲ್ಲಿ ತೀವ್ರ ಕುತೂಹಲ ಮೂಡಿಸುವದರ ಜೊತೆಗೆ ಇವರ ರಾಜಕೀಯ ವಿರೋಧಿಗಳ ನಿದ್ದೆಗೆಡೆಸಿದ್ದು ಸತ್ಯ.

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬೆಳಗಾವಿ ಜಿಲ್ಲೆಯ ಬಿಜೆಪಿ ಜವಾಬ್ದಾರಿ ಯಾರಿಗೆ ಸಿಗುತ್ತೋ, ಬೆಳಗಾವಿ ಜಿಲ್ಲೆಯ ಬಿಜೆಪಿ ನೇತ್ರತ್ವ ಯಾರಿಗೆ ಸಿಗುತ್ತೋ ಎನ್ನುವ ವಿಚಾರವೇ ಈಗ ಮುಖ್ಯವಾಗಿದೆ. ಈ ಕುರಿತು ಬಿಜೆಪಿ ಹೈಕಮಾಂಡ್ ಸ್ಪಷ್ಟಪಡಿಸುವವರೆಗೂ ಬೆಳಗಾವಿ ಬಿಜೆಪಿಯಲ್ಲಿ ಆಂತರಿಕ ಕಲಹ ಗುಪ್ತವಾಗಿಯೇ ನಡೆಯಲಿದೆ.

ಬಿ.ಎಲ್ ಸಂತೋಷ್ ಅವರು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಸಂಘಟನಾ ಕಾರ್ಯದರ್ಶಿಯಾಗಿ  ಮುಂದುವರೆದ ಕಾರಣ ಅವರನ್ನು ರಮೇಶ್ ಜಾರಕಿಹೊಳಿ ಅವರು ಅಭಿನಂದಿಸಿದರು  ಬೆಳಗಾವಿ ಜಿಲ್ಲೆಯ ಬಿಜೆಪಿ ಸಂಘಟನೆಯ  ಕುರಿತು  ಸುದೀರ್ಘ ಚರ್ಚೆ ಈ ಸಂಧರ್ಭದಲ್ಲಿ ನಡೆಯಿತು.ಸಂತೋಷಜೀ ಅವರು ತಿರಂಗಾ ನೀಡಿದ್ರು ಎಂದು ರಮೇಶ್ ಜಾರಕಿಹೊಳಿ ಅವರ ಜೊತೆ ಸಂತೋಷ್ ಜೀ ಅವರನ್ನು ಭೇಟಿಯಾದ ರಮೇಶ್ ಜಾರಕಿಹೊಳಿ ಅವರ ಪರಮಾಪ್ತ ಕಿರಣ ಜಾಧವ ತಿಳಿಸಿದ್ದಾರೆ.

ಬೆಳಗಾವಿ ಬಿಜೆಪಿಯಲ್ಲಿ ವಿರಹ ಇರೋದು ನೂರು ತರಹ ಆದ್ರೆ ಈ ವಿರಹ ಯಾವ ತರಹ ಅನ್ನೋದು ಗೊತ್ತಾಗಬೇಕಾದ್ರೆ ಅದು ಹೊರಗೆ ಬಂದಾಗ ಮಾತ್ರ ಸಾಮಾನ್ಯ ಕಾರ್ಯಕರ್ತನಿಗೂ ಅದು ಅರ್ಥವಾಗುತ್ತದೆ.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *