Breaking News

ಪಾಲಿಕೆ ಅಧಿಕಾರಿ ಮನೆ ಮೇಲೆ, ಲೋಕಾಯುಕ್ತ ದಾಳಿ,ಅಲ್ಲಿ ಸಿಕ್ಕದ್ದೇ ಬೇರೆ…!!

ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯ ಅಧಿಕಾರಿ ,ಸಂತೋಷ ಅನಿಶೆಟ್ಟರ್ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು ಅಲ್ಲಿ ಸಿಕ್ಕಿದ್ದೇ ಬೇರೆ,

ಬೆಳಗಾವಿ ಮಹಾನಗರ ಪಾಲಿಕೆ ಸಹಾಯಕ ಆಯುಕ್ತರಾಗಿದ್ದ ಸಂತೋಷ ಅವರ ಮನೆ ಮೇಲೆ ಇಂದು ಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ.ಸಂತೋಷ ಮನೆಯ ಪರಿಶೀಲನೆ ವೇಳೆ ಸ್ಕಾಚ್ ಮದ್ಯದ ಬಾಟಲಿ ಪತ್ತೆಯಾಗಿವೆ.

ಬೆಳಗಾವಿಯ ಸುಭಾಷ್ ನಗರದ ಅಪಾರ್ಟ್ಮೆಂಟ್‌ನಲ್ಲಿ ಬಾಡಿಗೆಯಿದ್ದ ಸಂತೋಷ ಅನಿಶೆಟ್ಟರ್ ಅವರ ಮನೆಯಲ್ಲಿ,ಬ್ಲ್ಯಾಕ್ ಆ್ಯಂಡ್ ವೈಟ್, ರಾಯಲ್ ಸ್ಟ್ಯಾಗ್, ತಂಪು ಪಾನೀಯ ಬಾಟಲಿ ಪತ್ತೆಯಾಗಿದ್ದು ಜೊತೆಗೆದುಬಾರಿ ಬೆಲೆಯ ಮದ್ಯ, ಬ್ರ್ಯಾಂಡೆಡ್ ಬೆಲ್ಟ್‌ಗಳು ಜಪ್ತಿ ಮಾಡಿಕೊಳ್ಳಲಾಗಿದೆ.

ಲೋಕಾಯುಕ್ತ ಪೊಲೀಸರ ಪರಿಶೀಲನೆ ವೇಳೆ ಆಸ್ತಿ ಪತ್ರಗಳು ಪತ್ತೆಯಾಗಿವೆ ಎಂಬ ಮಾಹಿತಿ ಲಭಿಸಿದ್ದುಲೋಕಾಯುಕ್ತ ಪಿಐ ಉಸ್ಮಾನ್ ನೇತೃತ್ವದಲ್ಲಿ ಶೋಧಕಾರ್ಯ ಮುಂದುವರೆದಿದೆ.

Check Also

ವೀರ ಮದಕರಿ ಪುತ್ಥಳಿ ಸ್ಥಾಪನೆ- ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚನೆ:

ಪರಿಶಿಷ್ಟರ ದೂರು ನಿವಾರಣೆಗೆ ತ್ವರಿತ ಕ್ರಮ ಕೈಗೊಳ್ಳಲು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಸೂಚನೆ ಬೆಳಗಾವಿ, -: ಪರಿಶಿಷ್ಟ ಜಾತಿ/ವರ್ಗಗಳ ದೌರ್ಜನ್ಯ …

Leave a Reply

Your email address will not be published. Required fields are marked *