ಅದು ಇಲ್ಲಿಗೆ ಬಂದಿದ್ದು ಗೊತ್ತಿಲ್ಲ,ಅಲ್ಲಿಗೆ ಹೋಗಿದ್ದು ಗೊತ್ತಿಲ್ಲ.- ಸತೀಶ್ ಜಾರಕಿಹೊಳಿ
ಬೆಳಗಾವಿ-ಗೃಹಲಕ್ಷ್ಮಿ ಯೋಜನೆ ಚಾಲನೆ ಬೆಳಗಾವಿಯಿಂದ ಮೈಸೂರಿಗೆ ಶಿಫ್ಟ್ ಆದ ವಿಚಾರವಾಗಿ,ಬೆಳಗಾವಿಯಲ್ಲಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು,ಇದು ಮುಖ್ಯಮಂತ್ರಿಗಳ ತೀರ್ಮಾನ, ಸಿಎಂಕ್ಕಿಂತ ನಾವು ದೊಡ್ಡವರಲ್ಲ ಎಂದು ಹೇಳಿದ್ದಾರೆ.
ನಾವು ಜಿಲ್ಲಾ ಕೋರ್ಟ್ ಇದ್ದಂಗೆ ಅವರು ಹೈಕೋರ್ಟ್ ಮೇಲೆ ಸುಪ್ರೀಂ ಕೋರ್ಟ್ ಇದ್ದಂಗೆ,ಅಲ್ಲಿ ಏನಾಗಿದೆ ನಮಗೆ ಗೊತ್ತಿಲ್ಲ.ನೀವು ಸಿಎಂ ಅವರಿಗೆ ಹಾಗೂ ಅಧ್ಯಕ್ಷರಿಗೆ ಕೇಳಿ, ಅವರು ಉತ್ತರ ಕೊಡಬಹುದು,ಕಾರ್ಯಕ್ರಮ ಇಲ್ಲಿಗೆ ಬಂದಿದ್ದು ಗೊತ್ತಿಲ್ಲ, ಹೋಗಿದ್ದು ಗೊತ್ತಿಲ್ಲ! ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಇಲ್ಲಿ ಮಾಡು ಅಂದ್ರು ಮಾಡಲಿಕ್ಕೆ ರೆಡೀ ಆಗಿದ್ವಿ. ಈಗ ಇಲ್ಲ ಅಂದ್ರು ಮೈಸೂರಿಗೆ ಪ್ರಯಾಣ ಬೆಳೆಸುತ್ತೇವೆ.ಮೊನ್ನೆ ಕ್ಯಾಬಿನೆಟ್ ಅಲ್ಲಿ ಚರ್ಚೆ ಆಯ್ತು ಬೆಳಗಾವಿಯಿಂದ ಮೈಸೂರಿಗೆ ವರ್ಗ ಮಾಡೋದು,ಅದೇ ದಿನ ವೈನಾಡಿನಲ್ಲಿ ರಾಹುಲ್ ಗಾಂಧಿ ಕಾರ್ಯಕ್ರಮ ಇದೆ.ರಾಹುಲ್ ಗಾಂಧಿಗೆ ಹೋಗಲಿಕ್ಕೆ ಹತ್ರ ಆಗುತ್ತೆ ಅಂತ ಹೇಳಿದ್ರು,ರಾಜ್ಯದಲ್ಲಿ ಎಲ್ಲೆ ಮಾಡಿದ್ರು ಗೃಹಲಕ್ಷ್ಮೀ ನಮ್ಮದೇ ಆಗೋದು.ಅದು ಜಿಲ್ಲೆಯ ಕಾರ್ಯಕ್ರಮ ಅಲ್ಲ, ರಾಜ್ಯಕ್ಕೆ ಸಂಬಂಧಿಸಿದ ಕಾರ್ಯಕ್ರಮ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಜಿಲ್ಲಾ ಸ್ಥಾನಮಾನ ಕೇಳಲು ಎಲ್ಲರಿಗೂ ಅವಕಾಶ ಇದೆ.
ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಜಿಲ್ಲಾ ವಿಭಜನೆ ಚರ್ಚೆ ಮುನ್ನಲೆಗೆ,ಜಿಲ್ಲೆ ವಿಭಜಿಸುವುದಾದರೆ ಬೈಲಹೊಂಗಲಕ್ಕೆ ಜಿಲ್ಲಾ ಸ್ಥಾನಮಾನ ನೀಡುವಂತೆ ಹೆಚ್ಚಿದ ಒತ್ತಡ,ಬೆಳಗಾವಿಯಲ್ಲಿ ಈ ಕುರಿತು ಮಾಧ್ಯಮಗಳಿಗೆ ಸಚಿವ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು.ಜಿಲ್ಲಾ ಸ್ಥಾನಮಾನ ಕೇಳಲಿಕ್ಕೆ ಎಲ್ಲರಿಗೂ ಅವಕಾಶ ಇದೆ.ಆದರೆ ಅಂತಿಮವಾಗಿ ಸರ್ಕಾರ ತೀರ್ಮಾನ ತೆಗೆದುಕೊಳ್ಳುತ್ತೆ.ಜಿಲ್ಲೆಗಿಂತ ಮೊದಲು ಬೆಳಗಾವಿ ತಾಲೂಕು ವಿಭಜನೆ ಮಾಡಬೇಕಿದೆ.ಬೆಳಗಾವಿ ದಕ್ಷಿಣವನ್ನು ಬೇಗ ತಾಲೂಕು ಮಾಡುವುದಕ್ಕೆ ನಮಗೆ ಇಂಟ್ರೆಸ್ಟ್ ಇದೆ.ಬೆಳಗಾವಿ ತಾಲೂಕು ಮಾತ್ರ ಬೇಗ ವಿಭಜನೆ ಆಗಬೇಕು ಎಂಬ ಒತ್ತಡ ಇದೆ.ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಯಾರು ಬರಲಿದ್ದಾರೆ ಸಿಎಂ ಲೇವಲ್ ಗೆ ಮಾತ್ರ ಗೊತ್ತಿದೆ.
ವಲಸಿಗ ಕೆಲ ಶಾಸಕರು ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ ಚರ್ಚೆ ವಿಚಾರ,ನಮಗೆ ಅವರನ್ನು ತೆಗೆದುಕೊಳ್ಳುವ ಅನಿವಾರ್ಯತೆ ಏನಿಲ್ಲ.ಅವರು ಮರಳಿ ಕಾಂಗ್ರೆಸ್‌ಗೆ ಬರುತ್ತೇವೆ ಅಂತಿದ್ದಾರೆ,ಅವರು ಯಾವುದೋ ಸಂದರ್ಭದಲ್ಲಿ ಕಾಂಗ್ರೆಸ್ ಬಿಟ್ಟು ಹೋಗಿದ್ರಿ, ಈಗ ಬರ್ತವೆ ಅಂತಿದ್ದಾರೆ.ಅವರು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬಂದ್ರೆ ಸ್ವಾಗತ.ಯಾರು ಬರಲಿದ್ದಾರೆ ಎಂಬುದು ಸಿಎಂ, ಅಧ್ಯಕ್ಷರ ಲೇವಲ್‌ಗೆ ಮಾತ್ರ ಗೊತ್ತಿದೆ.ಉಳಿದವರಿಗೆ ಚರ್ಚೆ ಆಗೋದು ಮಾತ್ರ ಗೊತ್ತಿದೆ.ಯಾರು ಬರ್ತಾರೆ ಎಷ್ಟು ಜನ ಬರ್ತಾರೆ ನನಗೆ ಗೊತ್ತಿಲ್ಲ.ಬಿಜೆಪಿ, ಜೆಡಿಎಸ್ ಎರೆಡು ಪಕ್ಷದವರು ಸಂಪರ್ಕದಲ್ಲಿ ಇದ್ದಾರೆ.ಎಂದು ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಟೆಕೆಟ್ ಯಾರಿಗೆ ಶೀಘ್ರದಲ್ಲೇ ಸಭೆ...
ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ತಯಾರಿ ಬಗ್ಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದ್ದು,ಅಭ್ಯರ್ಥಿಗಳ ಆಯ್ಕೆ, ಪಕ್ಷ ಸಂಘಟನೆ ಸಂಬಂಧ ಶೀಘ್ರವೇ ಸಭೆ ಮಾಡುತ್ತೇವೆ.ಎಲ್ಲ ಕಾರ್ಯಕರ್ತರನ್ನು ಒಗ್ಗೂಡಿಸಿ ಚಿಕ್ಕೋಡಿ ಮತ್ತು ಬೆಳಗಾವಿಯಲ್ಲಿ ಸಭೆ ಮಾಡುತ್ತೇವೆ.ಜಾತಿ ಲೆಕ್ಕಾಚಾರ, ಗೆಲುವಿನ ಲೆಕ್ಕಾಚಾರ ನೋಡಿಕೊಂಡು ಅಭ್ಯರ್ಥಿಗಳ ಆಯ್ಕೆ ಆಗಲಿದೆ.
ಅಭ್ಯರ್ಥಿಗಳ ಬಗ್ಗೆ ಈ ತಕ್ಷಣ ಏನೂ ಹೇಳಲಿಕ್ಕೆ ಆಗಲ್ಲ, ಸಭೆ ಬಳಿಕ ನೋಡೋಣ.ಸದ್ಯಕ್ಕೆ ಶಾಸಕರಿಗೆ ಎಂಪಿ ಚುನಾವಣೆ ಟಿಕೆಟ್ ನೀಡುವ ವಿಚಾರ ಇಲ್ಲ.ನಿಮ್ಮ ಆಪ್ತ ವಲಯದಲ್ಲಿ ಯಾರಿಗೆ ಸಿಗಬಹುದು ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು,ಕಿರಣ್ ಸಾಧುನವರ ಸೇರಿ ಹಲವರು ಆಸಕ್ತಿ ತೋರಿದ್ದಾರೆ.ಯಾರಿಗೆ ಅವಕಾಶ ಸಿಗಲಿದೆ ಎಂಬುದನ್ನು ನೋಡೋಣ.ಪರಿಷತ್ ಸದಸ್ಯ ಪ್ರಕಾಶ ಹುಕ್ಕೇರಿ ಅವರು,ಚಿಕ್ಕೋಡಿ-ಬೆಳಗಾವಿ ಎರಡೂ ಕಡೆ ಟಿಕೆಟ್ ಕೇಳಿದ್ದಾರೆ.ನಿಮ್ಮ ಪುತ್ರಿ ಪ್ರಿಯಂಕಾ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಗೆ,ಈ ಬಗ್ಗೆ ಇನ್ನೂ ಚರ್ಚೆ ಆಗಿಲ್ಲ, ಸದ್ಯ ನಮ್ಮ ಕಾರ್ಯಕರ್ತರನ್ನು ಹುಡುಕುತ್ತಿದ್ದೇವೆ.ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಪುತ್ರನನ್ನು ಕಣಕ್ಕಿಳಿಸುವಂತೆ ತಮಗೆ ಕೇಳಿದ್ದಾರಾ?ಇದರ ಬಗ್ಗೆ ಚರ್ಚೆ ಆಗಿಲ್ಲ ಅವರೇನು ನಮಗೆ ಕೇಳಿಲ್ಲ.ಮುಂದಿನ ಸಭೆಯಲ್ಲಿ ಏನಾದ್ರು ಚರ್ಚೆ ಆದ್ರೆ ನೋಡೋಣ ಎಂದ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.