ಬೆಳಗಾವಿ-ದರ್ಗಾ ದರ್ಶನಕ್ಕೆ ಬಂದಿದ್ದ ಯುವಕ ಕೃಷ್ಣಾ ನದಿಯಲ್ಲಿ ನೀರುಪಾಲಾದ ಘಟನೆ,ಕುಡಚಿ ಹೊರವಲಯ ಗಡ್ಡೆ ಪ್ರದೇಶ ಬಳಿ ಕೃಷ್ಣಾ ನದಿ ತೀರದಲ್ಲಿ ನಿನ್ನೆ ಸಂಜೆ ನಡೆದಿದೆ.
ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಈ ಘಟನೆ ನಡೆದಿದೆ.ಬೆಳಗಾವಿಯ ಗಾಂಧಿನಗರ ನಿವಾಸಿ ಹುಸೇನ್ ಅರಕಟ್ಟಿ ನೀರುಪಾಲಾದ ಯುವಕನಾಗಿದ್ದಾನೆ.
ಕುಟುಂಬಸ್ಥರು, ಸ್ನೇಹಿತರ ಜೊತೆ ಕುಡಚಿಯ ದರ್ಗಾಗೆ ಬಂದಿದ್ದ ಹುಸೇನ್,ಕುಡಚಿ ಹೊರವಲಯ ಗಡ್ಡೆ ಪ್ರದೇಶದ ಹಜರತ್ ಶೇಖ್ ಶಿರಾಜುದ್ದೀನ್ ಜುನೈದಿ ದರ್ಗಾದಲ್ಲಿ ದರ್ಶನ ಪಡೆದ ಬಳಿಕಈ ವೇಳೆ ನದಿ ತೀರದಲ್ಲಿ ಬಾಲಕರಿಬ್ಬರ ಜೊತೆ ಕುಳಿತಿದ್ದ,ಈ ವೇಳೆ ಆಯತಪ್ಪಿ ನದಿಗೆ ಮೂವರು ಬಿದ್ದಿದ್ದಾರೆ.
ಸ್ಥಳೀಯರಿಂದ ಇಬ್ಬರು ಬಾಲಕರ ರಕ್ಷಣೆ ಮಾಡಲಾಗಿದ್ದುಓರ್ವ ನೀರುಪಾಲಾಗಿದ್ದಾನೆ.ನಿನ್ನೆ ಸಂಜೆ ಕತ್ತಲಾದ ಬಳಿಕ ಶೋಧಕಾರ್ಯ ಸ್ಥಗಿತಗೊಳಿಸಲಾಗಿತ್ತು.ಇಂದು ಮತ್ತೆ ಕುಡಚಿ ಪೊಲಿಸ್ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿ ಶೋಧಕಾರ್ಯ ಮುಂದುವರೆಸಿದ್ದಾರೆ.ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ