ಬೆಳಗಾವಿ- ಬೆಳಗಾವಿ DDPI ಖುರ್ಚಿಗಾಗಿ ಇವತ್ತಿಗೂ ಗುದ್ದಾಟ ಮುಂದುವರೆದಿದೆ.ಈ ರೀತಿಯ ಗುದ್ದಾಟ ಬಹುಶ ಯಾವ ಇಲಾಖೆಯಲ್ಲೂ ನಡೆದಿಲ್ಲ.ಆದ್ರೆ ಇಬ್ಬರ ನಡುವಿನ ತಿಕ್ಕಾಟ ತಾರಕ್ಕೇರಿದ್ದು ಈ ಗುದ್ದಾಟ ಅಪಹಾಸ್ಯಕ್ಕೆ ಗುರಿಯಾಗಿದೆ.
ಇಬ್ಬರ ನಡುವೆ ಹಲವಾರು ತಿಂಗಳು ಗಳಿಂದ ಖೋ.ಖೋ ಆಟ ನಡೆಯುತ್ತಲೇ ಇದೆ. ಪುಂಡಲೀಕ್ ಅವರು DDPI ಆಗಿ ಸ್ವಾತಂತ್ರ್ಯೋತ್ಸವದ ಧ್ವಜಾರೋಹನ ಮಾಡಿದ ಬಳಿಕ ಈಗ ಮತ್ತೆ ಅವರ ಖುರ್ಚಿಗೆ ಕುತ್ತು ಬಂದಿದೆ ಎನ್ನಲಾಗಿದೆ.KAT ಯಲ್ಲಿ ನಲತವಾಡ ಪರವಾಗಿ ತೀರ್ಪು ಹೊರಬಂದಿದೆ ಎನ್ನಲಾಗಿದ್ದು ನಲತವಾಡ ಅವರು kAT ಆದೇಶದ ಜೊತೆಗೆ ಬಂದು ಪುಂಡಲೀಕ್ ಅವರಿಗೆ ಮತ್ತೆ ಖೋ ಕೊಡಲಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ.
ಬೆಳಗಾವಿಯ ಮಾಜಿ DDPI ನಲತವಾಡ ಅವರು ಇವತ್ತು ಮತ್ತೆ ಚಾರ್ಜ್ ತೆಗೆದುಕೊಳ್ಳುತ್ತಾರೆ ಎನ್ನುವ ಮಾಹಿತಿ ಬೆಳಗಾವಿ ಸುದ್ದಿ ಡಾಟ್ ಕಾಮ್ ಗೆ ಲಭ್ಯವಾಗಿದ್ದು ಇವತ್ತು ನಲತವಾಡ ಅವರು ಅಧಿಕಾರ ಸ್ವೀಕಾರ ಮಾಡ್ತಾರೆ ಎಂದು ಹೇಳಲಾಗುತ್ತಿದೆ.
KAT ಯಲ್ಲಿ ನಲತವಾಡ ಅವರ ಪರವಾಗಿ ತೀರ್ಪು ಹೊರಬಿದ್ದಿದೆ ಈಗ KAT ಆದೇಶವನ್ನು ಸರ್ಕಾರ ಅನುಷ್ಠಾನ ಮಾಡುವದಷ್ಟೇ ಬಾಕಿ ಇದೆ. ಎಂದು ಹೇಳಲಾಗುತ್ತಿದೆ. KAT ಆದೇಶವನ್ನು ಪ್ರಶ್ನಿಸಿ ಪುಂಡಲೀಕ್ ಅವರು ಮತ್ತೆ ಹೈಕೋರ್ಟ್ ಗೆ ಹೋಗುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
ಒಟ್ಟಾರೆ ಬೆಳಗಾವಿ ಡಿಡಿಪಿಐ ಹುದ್ದೆ ಪುಂಡಲೀಕ್ ಮತ್ತು ನಲತವಾಡ ಇಬ್ಬರಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿದ್ದು ಈ ಪ್ರತಿಷ್ಠೆ ವರ್ಗಾವಣೆ ವ್ಯವಸ್ಥೆಯ ಮಾನ ಹರಾಜು ಮಾಡಿದೆ.