ಯಶಸ್ಸಿಗೆ ವಯಸ್ಸಿಲ್ಲ ಎಂದು ಹೇಳಲಾಗುತ್ತದೆ. ಉತ್ಸಾಹ ಹೊಂದಿದ್ದರೆ, ಕಠಿಣ ಪರಿಶ್ರಮ ಪಟ್ಟರೆ ಯಾವುದೇ ವಯಸ್ಸಿನಲ್ಲಿ ಯಶಸ್ಸನ್ನು ಸಾಧಿಸಬಹುದು. ಭಾರತದ ಗ್ರ್ಯಾಂಡ್‌ಮಾಸ್ಟರ್ ಆರ್ ಪ್ರಜ್ಞಾನಂದ ಅವರ ವಿಚಾರದಲ್ಲಿ ಈ ಮಾತು ಅಕ್ಷರಃ ನಿಜವಾಗಿದೆ. ಕೇವಲ 18ರ ಹರೆಯದಲ್ಲಿ ಈ ಪ್ರತಿಭಾವಂತ ಬಾಲಕ ಇತಿಹಾಸ ಸೃಷ್ಟಿಸಿದ್ದಾರೆ.
ಭಾರತದ ಗ್ರ್ಯಾಂಡ್ ಮಾಸ್ಟರ್ ಆರ್ ಪ್ರಗ್ನಾನಂದ ಅವರು ಮಂಗಳವಾರ ಇಲ್ಲಿ ನಡೆದ ಫಿಡೆ ವಿಶ್ವಕಪ್ ಚೆಸ್ ಟೂರ್ನಿಯ ಫೈನಲ್‌ನ ಮೊದಲ ಕ್ಲಾಸಿಕಲ್ ಗೇಮ್‌ನಲ್ಲಿ ವಿಶ್ವದ ನಂ.1 ಮ್ಯಾಗ್ನಸ್ ಕಾರ್ಲ್‌ಸನ್ ವಿರುದ್ಧ ಡ್ರಾ ಸಾಧಿಸಿದ್ದಾರೆ.
ಈ ಪಂದ್ಯದ ಎರಡನೇ ಕ್ಲಾಸಿಕ್ ಗೇಮ್ ನಾಳೆ ನಡೆಯಲಿದ್ದು, ಇದರಲ್ಲಿ ಗೆದ್ದವರು ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಲಿದ್ದಾರೆ.
90 ನಿಮಿಷಗಳ ಮೊದಲ ಸುತ್ತಿನಲ್ಲಿ ಪ್ರಗ್ನಾನಂದ ನಾರ್ವೆಯ ಕಾರ್ಲ್ಸೆನ್ ಅವರನ್ನು ಆರಂಭದಲ್ಲೇ ಒತ್ತಡಕ್ಕೆ ಸಿಲುಕಿಸಿದ್ದರು. ಆದರೆ ಒಂದು ಹಂತ ದಾಟುತ್ತಿದ್ದಂತೆ ಪ್ರಗ್ನಾನಂದನ ಜಾಣ ನಡೆಗಳನ್ನು ಅರಿತ ಬಳಿಕ ರಕ್ಷಾಣತ್ಮಕ ಆಟಕ್ಕೆ ಒತ್ತು ನೀಡಿದ್ದರಿಂದ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡಿದೆ.
ಬೆಳೆದು ಬಂದ ಕಹಾನಿ….!!
ಚೆಸ್ ವಿಶ್ವಕಪ್‌ನಲ್ಲಿ ಫೈನಲ್ ಪ್ರವೇಶಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೂ ಪ್ರಜ್ಞಾನಂದ ಪಾತ್ರರಾಗಿದ್ದಾರೆ. ಬಹುತೇಕರಿಗೆ ಈ ಭಾರತೀಯ ಗ್ರ್ಯಾಂಡ್ ಮಾಸ್ಟರ್ ಯಾರು ಮತ್ತು ಚೆಸ್ ಆಟವನ್ನು ಎಲ್ಲಿಂದ ಕಲಿತರು ಎಂಬ ಕುತೂಹಲವಿದ್ದು, ಅವರ ಬಗ್ಗೆ ಇಲ್ಲಿ ವಿವರವಾಗಿದೆ ಕೊಡಲಾಗಿದೆ ಓದಿ…
ಆರ್ ಪ್ರಜ್ಞಾನಂದ ಭಾರತೀಯ ಚೆಸ್ ಆಟಗಾರನಾಗಿದ್ದು, ಆಗಸ್ಟ್ 5, 2005 ರಂದು ಜನಿಸಿದರು. ಭಾರತದ ಯುವ ಗ್ರ್ಯಾಂಡ್‌ಮಾಸ್ಟರ್ ಪ್ರಜ್ಞಾನಂದ ತಮ್ಮ ಚಿಕ್ಕ ವಯಸ್ಸಿನಲ್ಲೇ ಪ್ರತಿಭೆಯನ್ನು ಸಾಬೀತುಪಡಿಸಿದರು. 2022 ರಲ್ಲಿ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಗೆದ್ದರು. ಅಷ್ಟೇ ಅಲ್ಲ, 2013 ರಲ್ಲಿ 8 ವರ್ಷದೊಳಗಿನವರ ವರ್ಲ್ಡ್ ಯೂತ್ ಚೆಸ್ ಚಾಂಪಿಯನ್‌ಶಿಪ್ ಪ್ರಶಸ್ತಿ, ಏಳನೇ ವಯಸ್ಸಿನಲ್ಲಿ FIDE ಮಾಸ್ಟರ್ ಮತ್ತು 2015 ರಲ್ಲಿ 10 ವರ್ಷದೊಳಗಿನ ಪ್ರಶಸ್ತಿಯನ್ನು ಸಹ ಗೆದ್ದಿದ್ದಾರೆ. 2017 ರಲ್ಲಿ, ಮೊದಲ ಬಾರಿಗೆ ಗ್ರ್ಯಾಂಡ್ ಮಾಸ್ಟರ್ ಪ್ರಶಸ್ತಿಯನ್ನು ಗೆದ್ದರು. ಇದಲ್ಲದೇ ತಮ್ಮ ಚಿಕ್ಕ ವಯಸ್ಸಿನಲ್ಲೇ ಹಲವು ದಾಖಲೆಗಳನ್ನು ಮಾಡಿದ್ದಾರೆ.
ಚೆಸ್ ಆಟವನ್ನು ಯಾರಿಂದ ಕಲಿತರು?
ಆರ್ ಪ್ರಜ್ಞಾನಂದ ಚೆಸ್‌ನಲ್ಲಿ ಆಸಕ್ತಿ ತೋರಿಸಲು ಪ್ರಾರಂಭಿಸಿದಾಗ ಅವರಿಗೆ ಕೇವಲ 3.5 ವರ್ಷ. ತಮ್ಮ ಸಹೋದರಿ ವೈಶಾಲಿ ಅವರಿಂದ ಚದುರಂಗದ ಆಟ ಕಲಿತರು. ಸಹೋದರಿ ವೈಶಾಲಿ ಮೊದಲು ಚೆಸ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಈ ಆಟದಲ್ಲಿ ಅವರು ಕ್ರಮೇಣ ಅಂತರರಾಷ್ಟ್ರೀಯ ಚೆಸ್ ಆಟಗಾರರಾದರು. ಹಣಕಾಸಿನ ಅಡೆತಡೆಗಳಿಂದಾಗಿ, ಪ್ರಜ್ಞಾನಂದ ಅವರು ಚೆಸ್ ತರಗತಿಗಳನ್ನು ತೆಗೆದುಕೊಳ್ಳಲು ಸಾಧ್ಯವಾಗಲಿಲ್ಲ, ಇದಕ್ಕಾಗಿ ಅವರು ತಮ್ಮ ಸಹೋದರಿಯಿಂದ ಚೆಸ್ ಕಲಿಯುತ್ತಿದ್ದರು.
ಚೆಸ್ ಹೊರತುಪಡಿಸಿ ಕ್ರಿಕೆಟ್ ಇಷ್ಟ
ಆರ್ ಪ್ರಜ್ಞಾನಂದ ಅವರು ಚೆಸ್‌ನ ಹೊರತಾಗಿ ಕ್ರಿಕೆಟ್‌ನಲ್ಲಿ ತುಂಬಾ ಒಲವು ಹೊಂದಿದ್ದಾರೆ. #Chess