Breaking News

ಚಿಕ್ಕೋಡಿ ಬಿಜೆಪಿ ಟಿಕೆಟ್ ಗಾಗಿ ತ್ರೀಮೂರ್ತಿಗಳ ನಡುವೆ ಗುದ್ದಾಟ…!!

ಬೆಳಗಾವಿ-ಮಾಜಿ ಡಿಸಿಎಂ,ಅಥಣಿ ಶಾಸಕ ಲಕ್ಷ್ಮಣ ಸವದಿ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದಾಗ ಬೆಳಗಾವಿ ಜಿಲ್ಲೆಯಲ್ಲಿ ರಾಜಕೀಯ ಧ್ರುವೀಕರಣ ಆಗಿತ್ತು.ಈಗ ಬರುವ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮ ಧ್ರುವೀಕರಣ ಆಗೋದು ಶತಸಿದ್ಧ ಎನ್ನುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

ಲಕ್ಷ್ಮಣ ಸವದಿ ಬಿಜೆಪಿ ಬಿಟ್ಟಾಗ ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿಗೆ ದೊಡ್ಡ ಹಿನ್ನಡೆಯಾಗಿತ್ತು.ಈಗ ಬೆಳಗಾವಿ ಜಿಲ್ಲೆಯ ಪ್ರಭಾವಿ ಬಿಜೆಪಿ ನಾಯಕ ರಮೇಶ್ ಕತ್ತಿ ಸಹ ಸವದಿ ಸಾಲಿನಲ್ಲಿ ನಿಂತುಕೊಂಡಿದ್ದು, ಬರುವ ಲೋಕಸಭಾ ಚುನಾವಣೆಯಲ್ಲಿ ಚಿಕ್ಕೋಡಿಯಿಂದ ಸ್ಪರ್ದೆ ಮಾಡಲು ತಮಗೆ ಬಿಜೆಪಿ ಟಿಕೆಟ್ ಕೊಡದಿದ್ದರೆ ಅಭಿಮಾನಿಗಳ ಸಲಹೆ ಪಡೆದು ಅವರ ಮಾರ್ಗದರ್ಶನ ದಂತೆ ನಡೆಯಬೇಕಾಗುತ್ತದೆ.ಎನ್ನುವ ಸಂದೇಶವನ್ನು ಬಿಜೆಪಿ ಹೈಕಮಾಂಡ್ ಗೆ ರವಾನಿಸಿದ್ದಾರೆ ಎನ್ನುವ ಸುದ್ದಿ ಚಿಕ್ಕೋಡಿ ಲೋಕಸಭಾ ಕ್ಷೇತ್ರದಲ್ಲಿ ಸಾಕಷ್ಟು ಪ್ರಚಾರ ಪಡೆದುಕೊಂಡಿದ್ದು ರಮೇಶ್ ಕತ್ತಿ ಅವರಿಗೆ ಟಿಕೆಟ್ ಸಿಗದಿದ್ದರೆ ಅವರು ಬಿಜೆಪಿ ಬಿಟ್ಟು ಕಾಂಗ್ರೆಸ್ ಸೆರೋದು ಖಚಿತ ಎಂದು ಹೇಳಲಾಗುತ್ತಿದೆ.

ಚಿಕ್ಕೋಡಿ ಸಂಸದ ಅಣ್ಣಾ ಸಾಹೇಬ್ ಜೊಲ್ಲೆ ಅವರು ಈಗ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದು ನಮ್ಮ ಹಾಗೂ ರಮೇಶ್ ಜಾರಕಿಹೊಳಿ ಅವರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ.ಸಂತೋಷ ಜೀ ಅವರನ್ನು ಅವರೂ ಭೇಟಿಯಾಗಿದ್ದಾರೆ,ನಾವೂ ಭೇಟಿಯಾಗಿದ್ದೇವೆ.ನಾವು ನಿಮತ್ಯ ಮಾತ್ರ ಪಕ್ಷ ನಿಲ್ಲಿ ಅಂದ್ರೆ ನಿಲ್ತೀವಿ,ಬೇಡ ಅಂದ್ರೆ ಬಿಡ್ತೀವಿ ಟಿಕೆಟ್ ಯಾರಿಗೆ ಕೊಡಬೇಕು ಎನ್ನುವ ನಿರ್ಧಾರವನ್ನು ಬಿಜೆಪಿಯ ವರಿಷ್ಠ ನಾಯಕರು ಕೈಗೊಳ್ಳುತ್ತಾರೆ ಎಂದು ಅಣ್ಣಾಸಾಹೇಬ್ ಜೊಲ್ಲೆ ಹೇಳಿದ್ದಾರೆ.

ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ ಅವರೂ ಸಹ ಜನಸೇವೆ ಮಾಡಲು ಅಧಿಕಾರ ಬೇಕು,ಅಧಿಕಾರವಿದ್ರೆ ಸೇವೆ ಮಾಡಲು ಅನಕೂಲ ಆಗುತ್ತೆ. ನನಗೆ ಬೆಳಗಾವಿ ಅಥವಾ ಚಿಕ್ಕೋಡಿ ಎರಡರಲ್ಲಿ ಎಲ್ಲಿ ಬೇಕಾದಲ್ಲಿ ಟಿಕೆಟ್ ಕೊಟ್ರೆ ಸ್ಪರ್ದಿಸಲು ಸಿದ್ಧನಾಗಿದ್ದೇನೆ ಎಂದು ಹೇಳುವ ಮೂಲಕ ಮಹಾಂತೇಶ್ ಕವಟಗಿಮಠ ಚಿಕ್ಕೋಡಿ ಕ್ಷೇತ್ರದಲ್ಲೂ ಟಿಕೆಟ್ ಗಾಗಿ ಅರ್ಜಿ ಹಾಕಿದ್ದಾರೆ‌.

ರಮೇಶ್ ಕತ್ತಿ ಅವರ ಮೌನ, ಮಹಾಂತೇಶ್ ಕವಟಗಿಮಠ ಅವರ ನಡೆ,ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರ ಒಗ್ಗಟ್ಟಿನ ಮಂತ್ರ ಗಮನಿಸಿದರೆ‌,ಚಿಕ್ಕೋಡಿ ವಲಯದ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಅನ್ನೋದು ಗೊತ್ತಾಗುತ್ತದೆ.

ರಮೇಶ್ ಕತ್ತಿ ಮತ್ತು ಜಾರಕಿಹೊಳಿ ಸಹೋದರರ ನಡುವೆ ಉತ್ತಮ ಬಾಂಧವ್ಯ ಇದೆ. ಇಬ್ಬರೂ ಬೆಳಗಾವಿ ಡಿಸಿಸಿ ಬ್ಯಾಂಕಿನಲ್ಲಿ ದೋಸ್ತಿ ನಿಭಾಯಿಸುತ್ತಿದ್ದಾರೆ. ರಮೇಶ್ ಕತ್ತಿ ಅವರಿಗೆ ಟಿಕೆಟ್ ಕೊಡಿಸುವ ಕಾರ್ಯದಲ್ಲೂ ಈ ದೋಸ್ತಿ ವರ್ಕೌಟ್ ಆಗಬಹುದು. ಇಬ್ಬರೂ ಸೇರಿ ನನ್ನ ಟಿಕೆಟ್ ತಪ್ಪಿಸಬಹುದು ಎನ್ನುವ ಆತಂಕ ,ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ಇದೆ.ಹೀಗಾಗಿ ಜೊಲ್ಲೆ ಅವರೂ ರಾಜಕೀಯವಾಗಿ ಒಂದು ದೊಡ್ಡ ಆಡುತ್ತಿದ್ದಾರೆ. ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ರಮೇಶ್ ಜಾರಕಿಹೊಳಿ ಅವರ ಕೊರಳಿಗೆ ಹಾಕಲು ಬಿಜೆಪಿ ಹೈಕಮಾಂಡ್ ಮೇಲೆ ಒತ್ತಡ ಹೇರಿ ರಮೇಶ್ ಜಾರಕಿಹೊಳಿ ಅವರ ಮೈಂಡ್  ಡೈವೋರ್ಟ್ ಮಾಡುವ,ಬಿಗ್
ಪಾಲಿಟೀಕ್ಸ್ ಈಗ ಬೆಳಗಾವಿ ಜಿಲ್ಲೆಯಲ್ಲಿ ನಡೆಯುತ್ತಿದೆ. ಹಾಲಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಅವರಿಗೆ ಟಿಕೆಟ್ ತಪ್ಪಿಸುವುದು ಅಷ್ಟು ಸುಲಭವಿಲ್ಲ,ಯಾಕಂದ್ರೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ ಜೀ ಅವರ ಆಶೀರ್ವಾದ ಜೊಲ್ಲೆ ಅವರ ಮೇಲಿದೆ.

ಚಿಕ್ಕೋಡಿ ಕ್ಷೇತ್ರದ ಬಿಜೆಪಿ ಟಿಕೆಟ್ ಗಾಗಿ ಕತ್ತಿ ಹಾಗೂ ಜೊಲ್ಲೆ ಅವರ ನಡುವೆ ತಿಕ್ಕಾಟ ಜೋರಾಗಿ ನಡೆದ್ರೆ ಇಬ್ಬರ ಜಗಳದಲ್ಲಿ ನನಗೆ ಟಿಕೆಟ್ ಸಿಗಬಹುದು ಎನ್ನುವ ಲೆಕ್ಕಾಚಾರ ಮಹಾಂತೇಶ್ ಕವಟಗಿಮಠ ಅವರಿಗೆ ಇರಬಹುದು ಅದಕ್ಕಾಗಿಯೇ ಅವರು ಚಿಕ್ಕೋಡಿಯಿಂದ ಬಿಜೆಪಿ ಟಿಕೆಟ್ ಕೊಟ್ರೆ ಸ್ಪರ್ದಿಸಲು ಸಿದ್ಧ ಎನ್ನುವ ಹೇಳಿಕೆ ನೀಡಿದ್ದಾರೆ.

ಈ ಎಲ್ಲ ಬೆಳವಣಿಗೆಗಳನ್ನು ನೋಡಿದ್ರೆ ಬೆಳಗಾವಿ ಜಿಲ್ಲೆಯಲ್ಲಿ ಅತ್ಯಂತ ಪ್ರಭಾವಿ ನಾಯಕರ ನಡುವೆ ದೊಡ್ಡ ರಾಜಕೀಯ ಆಟ ನಡೆಯುತ್ತಿದೆ.ಈ ಆಟದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಅನ್ನೋದನ್ನು ಕಾಯ್ದು ನೋಡಬೇಕಷ್ಟೆ.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *