ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಗೆ ಅಶೋಕ ದುಡಗುಂಟಿ ಅವರು ಆಯುಕ್ತರಾಗಿ ಬಂದಾಗಿನಿಂದ ಹೊಸ ಹೊಸ ಪ್ರಯೋಗಗಳು ನಡೆಯುತ್ತಿವೆ.ಬೆಳಗಾವಿಯ ದೇವಾಲಯ ಗಳಲ್ಲಿ ಸಂಗ್ರಹವಾಗುವ ಹೂವಿನ ವೇಸ್ಟೇಜ್ ನಿಂದ ಉದಬತ್ತಿ ತಯಾರಿಸಲು ಪಾಲಿಕೆ ಹೊಸ ಯೋಜನೆ ರೂಪಿಸಿದೆ.
ಬೆಳಗಾವಿಯ ಹೋಲ್ ಸೇಲ್ ಫ್ಲವರ್ ಮಾರ್ಕೆಟ್ ನಲ್ಲಿ ದಿನನಿತ್ಯ ವೇಸ್ಟ್ ಫ್ಲವರ್ ಸಂಗ್ರಹವಾಗುತ್ತದೆ ಜೊತೆಗೆ ಬೆಳಗಾವಿಯ ಮಂದಿರ,ದರ್ಗಾ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ಹೂವಿನ ವೇಸ್ಟೇಜ್ ಬರುತ್ತದೆ.ಇದನ್ನು ಪ್ರತ್ಯೇಕವಾಗಿ ಸಂಗ್ರಹಿಸಿ ಇದನ್ನು ರೀಸೈಕಲ್ ಮಾಡಿ ಉದಬತ್ತಿ ತಯಾರಿಸುವದು ಬೆಳಗಾವಿ ಮಹಾನಗರ ಪಾಲಿಕೆಯ ಹೊಸ ಯೋಜನೆ ಆಗಿದೆ.
ಬೆಳಗಾವಿ ಮಹಾನಗರ ಪಾಲಿಕೆ ಈ ಘಟಕವನ್ನು ಬೆಳಗಾವಿ ನಗರದಲ್ಲಿರುವ ಅಶೋಕ ನಗರದ ಹೋಲ್ ಸೇಲ್ ಫ್ಲವರ್ ಮಾರ್ಕೆಟ್ ನಲ್ಲಿ ನಿರ್ಮಿಸಲು ನಿರ್ಧರಿಸಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ