ಬೆಳಗಾವಿ- ಮದುವೆ ಕಾರ್ಯಕ್ರಮದಲ್ಲಿ ಬಿರ್ಯಾನಿನೋ ಇನ್ನೊಂದೋ ಮೌಂಸಾಹಾರಿ ಊಟ ಸೇವಿಸಿದ ನೂರಕ್ಕೂ ಹೆಚ್ಚು ಜನ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ ಘಟನೆ ಚಿಕ್ಕೋಡಿ ಪಕ್ಕದ ಹಿರೇಕೋಡಿ ಗ್ರಾಮದಲ್ಲಿ ನಡೆದಿದೆ.
ಮದುವೆಯಲ್ಲಿ ಮೌಂಸಾಹಾರಿ ಊಟ ಸೇವಿಸಿದವವರು ಮಾತ್ರ ಅಸ್ವಸ್ಥರಾಗಿದ್ದು ಶಾಖಾಹಾರಿ ಊಟ ಸೇವಿಸಿದವರು ಸೇಫ್ ಆಗಿದ್ದಾರೆ. ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮೀರಜ್ ಮೂಲದ ಬೀಗರು ಸಂಬಂಧಿಗಳು ಅಸ್ವಸ್ಥರಾಗಿದ್ದು ಸ್ಥಳಕ್ಕೆ ಪೋಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ.
ಮದುವೆ ಊಟ ಸೇವಿಸಿದ ನೂರಕ್ಕೂ ಹೆಚ್ಚು ಜನ ಅಸ್ವಸ್ಥ
ಮದುವೆ ಊಟ ಸೇವಿಸಿದ ಬಳಿಕ ನೂರಾರು ಜನ ಅಸ್ವಸ್ಥಗೊಂಡಿದ್ದಾರೆ.ಸೋಮವಾರ ಹಿರೇಕೋಡಿಯಲ್ಲಿ ಪಟೇಲ್ ಕುಟುಂಬದ ಮದುವೆ ಸಮಾರಂಭ ಇತ್ತು. ಮದುವೆಗೆ ಬಂದ ಜನರಿಗೆ ಸಸ್ಯಾಹಾರ, ಮಾಂಸಾಹಾರ ಊಟದ ವ್ಯವಸ್ಥೆ ಮಾಡಲಾಗಿತ್ತು
ರೈಸ್ ಮತ್ತು ಮಾಂಸಾಹಾರ ಸೇವಿಸಿದ ನೂರಕ್ಕೂ ಹೆಚ್ಚು ಜನರಿಗೆ ಸಂಜೆಯ ವೇಳೆಗೆ ವಾಂತಿ ಬೇಧಿ ಶುರುವಾಗಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಆರೋಗ್ಯ ಇಲಾಖೆ ಸಿಬ್ಬಂದಿ
ಹಿರೇಕೋಡಿ ಸರ್ಕಾರಿ ಶಾಲೆಯಲ್ಲಿ ಬೀಡುಬಿಟ್ಟು ಅಸ್ವಸ್ಥರ ಆರೋಗ್ಯ ತಪಾಸಣೆ ಮಾಡುತ್ತಿದ್ದಾರೆ.
ತೀವ್ರ ಅಸ್ವಸ್ಥಗೊಂಡವರನ್ನು ಚಿಕ್ಕೋಡಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸುತ್ತಿದ್ದಾರೆ.
ಮದುವೆಗೆ ಮೀರಜ್ ದಿಂದ ಬಂದಿದ್ದ ಹಲವರು ಅಸ್ವಸ್ಥಗೊಂಡಿದ್ದು, ಅಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದಾರೆ.