Breaking News

ಆರೋಪಿಗಳ ಬಂಧನಕ್ಕೆ ಕುಟುಂಬಸ್ಥರ ಬಿಗಿಪಟ್ಟು…

ಬೆಳಗಾವಿ- ನಿನ್ನೆ ರಾತ್ರಿ ಬೆಳಗಾವಿ ಮಹಾನಗರದ ಶಿವಬಸವ ನಗರ ಬಡಾವಣೆಯಲ್ಲಿ ಸ್ಪಂದನ ಆಸ್ಪತ್ರೆ ಬಳಿ ಯುವಕನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಮೃತ ಯುವಕನ ಕುಟುಂಬಸ್ಥರು ಪಟ್ಟು ಹಿಡಿದಿದ್ದಾರೆ.

ನಿನ್ನೆ ರಾತ್ರಿ ಹತ್ಯೆಯಾದ ಬೆಳಗಾವಿಯ ನಿವಾಸಿ ನಾಗರಾಜ್ ಗಾಡಿವಡ್ಡರ್ ಯುವಕನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ  ಶವಾಗಾರಕ್ಕೆ ತರಲಾಗಿದ್ದು,ಆರೋಪಿಗಳನ್ನು ಬಂಧಿಸುವವರೆಗೂ ಅಂತ್ಯಸಂಸ್ಕಾರ ಮಾಡೋದಿಲ್ಲ ಎಂದು ಯುವಕನ ಸಂಬಂಧಿಗಳು ಪಟ್ಟು ಹಿಡಿದಿದ್ದು ಪೋಲೀಸರು ಮನವರಿಕೆ ಮಾಡುತ್ತಿದ್ದಾರೆ.ಈಗ ಮರಣೋತ್ತರ ಪರೀಕ್ಷೆ ಮುಗಿದಿದ್ದು ನಿನ್ನೆ ರಾತ್ರಿ ಹತ್ಯೆಯಾದ ಯುವಕನ ಅಂತ್ಯಸಂಸ್ಕಾರ ನಡೆಸುವಂತೆ ಯುವಕನ ಕುಟುಂಬಸ್ಥರಿಗೆ ಪೋಲೀಸ್ ಅಧಿಕಾರಿಗಳು ಮನವರಿಕೆ ಮಾಡುವ ಪ್ರಯತ್ನ ಮುಂದುವರೆಸಿದ್ದಾರೆ.

ಪೋಲೀಸರಿಗೆ ಸಿಸಿಟಿವ್ಹಿ ಪೋಟೇಜ್ ಸುಳಿವು. ..

ನಿನ್ನೆ ರಾತ್ರಿ ನಡೆದ ಯುವಕನ ಹತ್ಯೆ ಪ್ರಕರಣವನ್ನು ಬೆಳಗಾವಿಯ ಮಾಳಮಾರುತಿ ಪೋಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ.ಮೂರು ಜನ ಬೈಕ್ ಮೇಲೆ ಬಂದು ಯುವಕನ ಬರುವಿಕೆಯನ್ನು ವಾಚ್ ಮಾಡಿ,ಯುವಕ ಬಂದ ನಂತರ ಹಿಂದಿನಿಂದ ಹೋಗಿ ಕಲ್ಲಿನಿಂದ ತಲೆಗೆ ಹೊಡೆದು,ಆತ ಬಿದ್ದ ನಂತರ ಕಲ್ಲಿನಿಂದ ತಲೆಯನ್ನು ಜಜ್ಜಿ ಕೊಲೆ ಮಾಡಿದ ಬಳಿಕ ಮೂರು ಜನ ಹಂತಕರು ಪರಾರಿಯಾಗಿರುವ ದೃಶ್ಯಗಳು ಸಿಸಿಟಿವ್ಹಿಯಲ್ಲಿ ಸೆರೆಯಾಗಿವೆ.ಈ ಸಿಸಿಟಿವ್ಹಿ ಪೋಟೇಜ್ ಆಧರಿಸಿ ಪೋಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು ಇಂದು ಸಂಜೆ ಹೊತ್ತಿಗೆ ಪೋಲೀಸರು ಈ ಕೊಲೆ ಪ್ರಕರಣವನ್ಬು ಭೇಧಿಸುವ ಸಾಧ್ಯತೆ ಇದೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *