ಬೆಳಗಾವಿ- ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಗಾಂಜಾ,ಸಿಗರೆಟ್, ಮೋಬೈಲ್ ಬಳಕೆ,ಜೈಲಿನಿಂದಲೇ ಧಮಕಿ ಕೊಡುವ ಆಕ್ರಮ ಚಟುವಟಿಕೆಗಳ ಕುರಿತು ಮಾದ್ಯಮಗಳಲ್ಲಿ ವರದಿ ಪ್ರಸಾರವಾದ ಹಿನ್ನಲೆಯಲ್ಲಿ ಬೆಳಗಾವಿ ನಗರ ಪೋಲೀಸ್ ಆಯುಕ್ತರು ಜೈಲಿಗೆ ಧಿಡೀರ್ ಭೇಟಿ ನೀಡಿದ್ದಾರೆ.
ನಗರ ಪೋಲೀಸ್ ಆಯುಕ್ತರಾದ ಸಿದ್ರಾಮಪ್ಪ ಅವರು ಇಂದು ಹಿಂಡಲಗಾ ಜೈಲಿಗೆ surprise visit ಮಾಡಿದ್ದು ಜೈಲಿನಲ್ಲಿ ನಡೆಯುತ್ತಿದೆ ಎನ್ನಲಾದ ಆಕ್ರಮ ಚಟುವಟಿಕೆಗಳ ಕುರಿತು ಪರಶೀಲನೆ ನಡೆಸುತ್ತಿದ್ದಾರೆ.ಜೈಲಿನಲ್ಲಿ ಪರಶೀಲನೆ ಕಾರ್ಯಾಚರಣೆ ಮುಂದುವರೆದಿದೆ.
ಹಿಂಡಲಗಾ ಜೈಲಿನಿಂದಲೇ ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರಿಗೆ ಪ್ರಾಣ ಬೆದರಿಕೆ ಹಾಕುವ ದುಸ್ಸಾಹಸಕ್ಕೆ ಹಿಂಡಲಗಾ ಕೈದಿಯೊಬ್ಬ ಕೈಹಾಕಿದ್ದ,ಕೈದಿಗಳ ನಡುವೆ ಮಾರಾಮಾರಿ, ಜೈಲಿನಲ್ಲಿ ನಡೆಯುತ್ತಿರುವ ಕೈದಿಗಳ ವಿಲಾಸಿ ವ್ಯವಸ್ಥೆ ಕುರಿತು ದೃಶ್ಯ ಮಾದ್ಯಮಗಳಲ್ಲಿ ವರದಿ ಪ್ರಸಾರವಾದ ಬೆನ್ನಲ್ಲಿಯೇ ಬೆಳಗಾವಿ ನಗರ ಪೋಲೀಸ್ ಆಯುಕ್ತರು ಜೈಲಿಗೆ ಭೇಟಿ ನೀಡಿ ಪರಶೀಲನೆ ಮಾಡುತ್ತಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ