Breaking News

ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ,ಮಗ,ಇಬ್ಬರ ದಾರುಣ ಸಾವು…

ಬೆಳಗಾವಿ-ಬೆಳಗಾವಿಯಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ ತಂದೆ-ಮಗ ದಾರುಣವಾಗಿ ಸಾವನ್ನೊಪ್ಪಿದ ಘಟನೆ,ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಉಡಿಕೇರಿ ಗ್ರಾಮದಲ್ಲಿ ನಡೆದಿದೆ.

ಪ್ರಭು ಹುಂಬಿ(69) ಮಂಜುನಾಥ ಹುಂಬಿ(29) ಮೃತ ದುರ್ದೈವಿಗಳಾಗಿದ್ದಾರೆ.ಮನೆ ಮುಂದಿರುವ ವಿದ್ಯುತ್ ಕಂಬದ ತಂತಿ ಸ್ಪರ್ಶಿಸಿ ಒಂದೇ ಕುಟುಂಬದ ಇಬ್ಬರು ಸಾವನ್ನೊಪ್ಪಿದ್ದಾರೆ.ಹೆಸ್ಕಾಂ ನಿರ್ಲಕ್ಷ್ಯ ದಿಂದಾಗಿ ಈ ಘಟನೆ ನಡೆದಿದೆ ಎಂದು ಆರೋಪಿಸಲಾಗಿದೆ.ಮನೆಯ ಮುಂದಿನ‌ ಕಸ ತೆಗೆಯುವಾಗ ಈ ದುರ್ಘಟನೆ ನಡೆದಿದೆ.

ವಿದ್ಯುತ್ ಸ್ಪರ್ಶಿಸಿದ್ದ ತಂದೆ ಪ್ರಭು ಹುಂಬಿಯನ್ನು ಬಿಡಿಸಲು ಹೋಗಿ ಮಗ ಕೂಡ ಸಾವನ್ನೊಪ್ಪಿದ್ದಾನೆ.ದೊಡವಾಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *