ಬೆಳಗಾವಿ- ಇತ್ತೀಚಿಗೆ ಬೆಳಗಾವಿಯ ಶಾಸ್ತ್ರೀ ನಗರದಲ್ಲಿ ನರಿ ಪ್ರತ್ಯಕ್ಷವಾದ ಬೆನ್ನಲ್ಲಿಯೇ ಬೆಳಗಾವಿಯ ವೀರಭದ್ರ ನಗರದಲ್ಲಿ ನರಿ ದಾಳಿ ಮಾಡಿದ್ದು ಇಬ್ಬರು ಗಾಯಗೊಂಡಿದ್ದಾರೆ.
ನಿನ್ನೆ ರಾತ್ರಿ ಇಬ್ಬರು ಬೈಕ್ ಸವಾರರ ಮೇಲೆ ನರಿಯೊಂದು ದಾಳಿ ಮಾಡಿದ್ದು ಕಾಲಿಗೆ ಕಚ್ಚಿ ಪರಾರಿಯಾಗಿದೆ.ನರಿ ದಾಳಿಯಿಂದ ಅಲ್ಪ ಗಾಯಗೊಂಡ ಇಬ್ಬರು ಬೆಳಗಾವಿಯ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಆಗಿದ್ದಾರೆ.
ರಾತ್ರಿ ಹೊತ್ತು ವೀರಭದ್ರ ನಗರದಲ್ಲಿ ಇಬ್ಬರು ಬೈಕ್ ಮೇಲೆ ಹೋಗುತ್ತಿರುವಾಗ ನರಿ ಏಕಾ ಏಕಿ ದಾಳಿ ಮಾಡಿದ್ದರಿಂದ ಈ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಚಿಕ್ಕ ಮಕ್ಕಳ. ಸುರಕ್ಷತೆಗಾಗಿ ತುರ್ತಾಗಿ ಮುಂಜಾಗ್ರತೆ ವಹಿಸಿ ಕ್ರಮ ಜರುಗಿಸುವದು ಅತ್ಯಗತ್ಯವಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ