Breaking News

ನಿಜಗುಣಾನಂದ ಶ್ರೀಗಳಿಗೆ ಮತ್ತೆ ಜೀವ ಬೆದರಿಕೆ ಪತ್ರ…!

ಬೆಳಗಾವಿ – ಬೆಳಗಾವಿ ಜಿಲ್ಲೆಯ ಪ್ರಮುಖ ಲಿಂಗಾಯತ ಬಸವತತ್ವ, ಸ್ವಾಮೀಜಿಗೆ ಮತ್ತೆ ಜೀವ ಬೇದರಿಕೆ ಪತ್ರ ಬಂದಿದೆ.ಬಸವಣ್ಣನವರ ವಿಚಾರಧಾರೆಯ ಪ್ರಚಾರಕರಾಗಿರುವ ಬೈಲೂರು ನಿಷ್ಕಲ ಮಂಟಪದ ನಿಜಗುಣಾನಂದ ಶ್ರೀಗಳಿಗೆ ಜೀವ ಬೆದರಿಕೆ ಪತ್ರ ಬಂದಿದೆ.

ತಮ್ಮ ಖಡಕ್ ಮಾತುಗಳಿಂದಲೇ ರಾಜ್ಯದಲ್ಲಿ ಖ್ಯಾತಿಗಳಿಸಿರುವ ನಿಜಗುಣಾನಂದ ಶ್ರೀಗಳು
ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಬೈಲೂರು ನಿಷ್ಕಲ ಮಂಟಪದ ಶ್ರೀಗಳಾಗಿದ್ದಾರೆ. ಅವರಿಗೆ ಈಗ ಎರಡನೇಯ ಬಾರಿಗೆ ಜೀವ ಬೆದರಿಕೆ ಪತ್ರ ಬಂದಿರುವದು ಕಳವಳಕಾರಿ ಸಂಗತಿಯಾಗಿದೆ.

ನಿಷ್ಕಲ ಮಂಟದ ಮಠಾದೀಶ ನಿಜಗುಣಾಂದ ಶ್ರೀಗಳಿಗೆ ಬೇದರಿಕೆ ಪತ್ರ ಈ ಹಿಂದೆ,2020ರಲ್ಲಿ ನಿನ್ನ ಹತ್ಯೆ ತಪ್ಪಿರಬಹುದು 2023ರಲ್ಲಿ ತಪ್ಪಲ್ಲ‌,
ನಿನ್ನ ಪಾಪದ ಕೊಡ ತುಂಬಿದೆ ಆದಷ್ಟು ಬೇಗ ನಿನ್ನ ತಿಥಿ, ನಿನ್ನ ಭಕ್ತರಿಗೆ ಹೇಳು,ನಮ್ಮ ಧರ್ಮದ ದೇವತೆಗಳನ್ನು ನಿಂದಿಸುವ ನಿನಗೆ ಘೋರ ಹತ್ಯೆಯೆ ಬರುತ್ತೆ,ನಿನ್ನ ಅಂತಿಮ ದಿನಗಳು ಆರಂಭವಾಗಿವೆ, ಇನ್ನು ದಿನಗಳನ್ನ ಎಣಿಸು ಎಂದು ಪತ್ರದ ಮೂಲಕ ಬೇದರಿಕೆ ಹಾಕಲಾಗಿತ್ತು.ಮಠಕ್ಕೆ ಪೋಸ್ಟ್ ಮೂಲಕ ಈ ರೀತಿಯ ಜೀವ ಬೇದರಿಕೆ ಪತ್ರ ಬಂದಿತ್ತು.

ಹಲವು ದಿನಗಳ ಹಿಂದೆ ಜೀವ ಬೆದರಿಕೆ ಪತ್ರ ಬಂದ್ರೂ ದೂರು ದಾಖಲಿಸಿದ ಪೊಲೀಸರು.ದೂರು ದಾಖಲಿಸಿಕೊಳ್ಳದೇ ಕಿತ್ತೂರು ಪೊಲೀಸರ ನಿರ್ಲಕ್ಷ್ಯ ಮಾಡಿದ್ದರಿಂದ,
ಈ ಹಿಂದೆ 2020ರಲ್ಲಿ ಹತ್ಯೆ ಮಾಡುವುದಾಗಿ ಜೀವ ಬೆದರಿಕೆ ಪತ್ರ ಬಂದಿತ್ತು ಈಗ ಮತ್ತೆ ಪತ್ರ ಬಂದಿದೆ.
ಈ ವರೆಗೂ ಸ್ವಾಮೀಜಿಗೆ ಐದಕ್ಕೂ ಅಧಿಕ ಬಾರಿ ಜೀವ ಬೆದರಿಕೆ ಪತ್ರ ಬರೆದಿರುವ ದುಷ್ಕರ್ಮಿಗಳು

Check Also

ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಯುವಕನ ಆತ್ಮಹತ್ಯೆ

ಬೆಳಗಾವಿ-70 ಸಾವಿರ ಬೆಲೆಯ,ದುಬಾರಿ ಐಫೋನ್ ತಂದಿದ್ದನ್ನು ತಂದೆ ಪ್ರಶ್ನಿಸಿದ್ದಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಇಷ್ಟೊಂದು ದುಬಾರಿ ಐಪೋನ್ …

Leave a Reply

Your email address will not be published. Required fields are marked *