Breaking News
Home / Breaking News / ಬೆಳಗಾವಿ ಭಾರತ ಜೋಡೋ ನೆನಪಿನ ಯಾತ್ರೆಯಲ್ಲಿ ಭಾಗಿಯಾದ ರಾಹುಲ್….!!

ಬೆಳಗಾವಿ ಭಾರತ ಜೋಡೋ ನೆನಪಿನ ಯಾತ್ರೆಯಲ್ಲಿ ಭಾಗಿಯಾದ ರಾಹುಲ್….!!

ಬೆಳಗಾವಿ- ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್ ಜೋಡೋ ಯಾತ್ರೆ ನಡೆದು ವರ್ಷವಾಯಿತು ವಿವಿಧತೆಯಲ್ಲಿ ಏಕತೆ ಸಾರಿದ ರಾಹುಲ್ ಗಾಂಧಿ ಅವರ ನೇತ್ರತ್ವದಲ್ಲಿ ನಡೆದ ಈ ಯಾತ್ರೆಯ ವರ್ಷದ ನೆನಪಿಗಾಗಿ ಕಾಂಗ್ರೆಸ್ ಕಾರ್ಯಕರ್ತರೂ ಬೆಳಗಾವಿಯಲ್ಲಿ ಪಾದಯತ್ರೆ ನಡೆಸಿ ಎಲ್ಲರ ಗಮನ ಸೆಳೆದರು.

ಬೆಳಗಾವಿಯ ಕಾಂಗ್ರೆಸ್ ಭವನದಿಂದ ಆರಂಭವಾದ ಭಾರತ್ ಜೋಡೋ ನೆನಪಿನ ಯಾತ್ರೆ ಚನ್ನಮ್ಮ ವೃತ್ತದವರೆಗೂ ಸಾಗಿತು.ಈ ಯಾತ್ರೆಯಲ್ಲಿ ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ರಾಜು ಸೇಠ,ಬೈಲಹೊಂಗಲ ಶಾಸಕ ಮಹಾಂತೇಶ್ ಕೌಜಲಗಿ,ರಾಹುಲ್ ಜಾರಕಿಹೊಳಿ,ವಿನಯ ನಾಲಗಟ್ಟಿ,ರಾಜಾ ಸಲೀಂ ಕಾಶೀಂನವರ,ಬಸವರಾಜ್ ಶೇಗಾವಿ,ಅನಂತಕುಮಾರ್ ಬ್ಯಾಕೋಡ,ಆರ್ ಪಿ ಪಾಟೀಲ,ಅಜೀಂ ಪಟವೇಗಾರ ಪ್ರದೀಪ್ ಎಂ.ಜೆ ಸೇರಿದಂತೆ ಹಲವಾರು ಜನ ಕಾಂಗ್ರೆಸ್ ಮಹಿಳಾ ನಾಯಕಿಯರು, ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು.

ಶಾಸಕ ರಾಜು ಸೇಠ ಮಾತನಾಡಿ, ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆ ವಿವಿಧತೆಯಲ್ಲಿ ಏಕತೆಯನ್ನು ಸಾರುವ ಮೂಲಕ ಭಾರತದ ಎಲ್ಲ ಸಮಾಜಗಳನ್ನು ವರ್ಗಗಳನ್ನು ಒಗ್ಗೂಡಿಸಿ ಎಲ್ಲರಲ್ಲಿ ಐಕ್ಯತೆ ಮೂಡಿಸಿದೆ.ಎಂದು ಹೇಳಿದ್ರು.

ಶಾಸಕ ಮಹಾಂತೇಶ್ ಕೌಜಲಗಿ ಅವರು ಮಾತನಾಡಿ, ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆಯ ಫಲವಾಗಿ, ದೇಶದ ಜನ ಅನುಭವಿಸುತ್ತಿರುವ ಕಷ್ಟಗಳು,ರಾಹುಲ್ ಗಾಂಧಿ ಅವರ ಗಮನಕ್ಕೆ ಬಂದ ಕಾರಣ ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿ ಎಲ್ಲ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನ ಮಾಡುತ್ತಿದೆ.ಎಂದರು.

ಕಾಂಗ್ರೆಸ್ ಯುವನಾಯಕ ರಾಹುಲ್ ಜಾರಕಿಹೊಳಿ ಅವರು ಮಾತನಾಡಿ ರಾಹುಲ್ ಗಾಂಧಿ ಅವರ ಸಾವಿರಾರು ಕಿಲೋ ಮೀಟರ್ ಪಾದಯಾತ್ರೆ ದೇಶದ ಒಗ್ಗಟ್ಟಿಗೆ ಕಾರಣವಾಗಿದೆ.ಎಲ್ಲ ಮನಸ್ಸುಗಳನ್ನು ಒಂದುಗೂಡಿಸಿದ ಈ ಯಾತ್ರೆ ವಿಶ್ವದಲ್ಲೇ ಹೊಸ ಇತಿಹಾಸ ನಿರ್ಮಿಸಿದ್ದು,ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪತಾಕೆ ಹಾರಲಿದೆ. ಎಂದು ವಿಶ್ವಾಸ ವ್ಯಕ್ತಪಡಿಸಿದರು.

Check Also

ಮೇ 2 ರಂದು ಏಕನಾಥ, 3 ರಂದು ಅಮೀತ್ ಶಾ ಬೆಳಗಾವಿಗೆ….

ಬೆಳಗಾವಿ- ಬೆಳಗಾವಿ ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆ ರಂಗೇರಿದೆ, ಮತಬೇಟೆಗಾಗಿ ಮೇ 2 ರಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ, ಮೇ …

Leave a Reply

Your email address will not be published. Required fields are marked *