ಬೆಳಗಾವಿ- ಅಮವಾಸ್ಯೆ ಬಂದ್ರೆ ಸಾಕು ರಸ್ತೆಗಳಲ್ಲಿ ನಿಂಬೆ ಹಣ್ಣು ಮೆಣಸಿನಕಾಯಿ,ಅರಷಿನ,ಕುಂಕುಮ,ಕುಂಬಳಕಾಯಿ ಕಾಣಿಸಿಕೊಳ್ಳುವದು ಸಾಮಾನ್ಯ ಆದ್ರೆ ಈ ಅಮವಾಸ್ಯೆಯ ಬೆಳಗಿನ ಜಾವ ಮನೆ ಅಂಗಳದಲ್ಲಿ ತಲೆ ಬುರುಡೆ ಎಸೆದು ಅದರ ಮೇಲೆ ಕುಂಕುಮ ಅರಷಿನ ಹಾಕಿ ಭಯನಾಕವಾಗಿ ಮಾಟ ಮಂತ್ರ ಮಾಡಿಸಿದ ಘಟನೆ ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ.
ಅಮವಾಸ್ಯೆ ಹಿನ್ನೆಲೆಯಲ್ಲಿ ಭಯಾನಕ ಮಾಟಮಂತ್ರ ಮಾಡಲಾಗಿದೆ.ಮನೆಯ ಮುಂದೆ ತಲೆ ಬುರುಡೆ, ನಿಂಬೆಹಣ್ಣು ಇಟ್ಟು ಮಾಟಮಂತ್ರ ಮಾಡಲಾಗಿದ್ದು ಈ ಘಟನೆ
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಸಾವಳಗಿ ಗ್ರಾಮದಲ್ಲಿ ನಡೆದಿದೆ.
ಬಸವ್ವ ಚನ್ನಯ್ಯ ಮಠಪತಿ ಎನ್ನುವರ ಮನೆಯ ಮುಂದೆ ಮಾಟಮಂತ್ರ ನಡೆದಿದ್ದು.ಬೆಳಗ್ಗೆ ಎದ್ದು ನೋಡಿದಾಗ ಮನೆಯ ಮುಂದೆ ತಲೆ ಬುರುಡೆ, ನಿಂಬೆಹಣ್ಣು ಸೇರಿ ವಸ್ತುಗಳ ಪತ್ತೆ.ನಿಂಬೆಹಣ್ಣಿನ ಮೇಲೆ ಮನೆಯವರ ಹೆಸರುಗಳು ಬರೆದು ದುಷ್ಕರ್ಮಿಗಳು ಮಾಟಮಂತ್ರ ಮಾಡಿದ್ದಾರೆ.
ಮದ್ಯರಾತ್ರಿ ಈ ಮಾಟಮಂತ್ರ ಮಾಡಿರೋ ದುಷ್ಕರ್ಮಿಗಳ ಈ ಕೃತ್ಯದಿಂದ ಸಾವಳಗಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ