ಬೆಳಗಾವಿಯ – ಬೆಳಗಾವಿಯ ಸುವರ್ಣಸೌಧದ ಬಳಿ ಕೆ.ಕೆ ಕೊಪ್ಪ ಸಿಬಿಟಿ
ಬಸ್ ಪಲ್ಟಿಯಾಗಿದ್ದು ಈ ಬಸ್ ನಲ್ಲಿ 40 ಕ್ಕೂ ಹೆಚ್ವು ಜನ ಪ್ರಯಾಣಿಸುತ್ತಿದ್ದರು.ಬಸ್ ನಿರ್ವಾಹಕಿ ಸೇರಿದಂತೆ ಇಬ್ಬರ ಪರಿಸ್ಥಿತಿ ಗಂಭೀರವಾಗಿದೆ.
ಪ್ರತ್ಯಕ್ಷ ದರ್ಶಿಗಳ ಪ್ರಕಾರ ಬಸ್ ಬೆಳಗಾವಿಯ ಸುವರ್ಣಸೌಧದ ಪಕ್ಕದ ಕಾಲುವೆಯಲ್ಲಿ ಪಲ್ಟಿಯಾಗಿದೆ. ಬಸ್ ನಲ್ಲಿ 40 ಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದು ಬಸ್ ಕಂಡೆಕ್ಟರ್ ಸೇರಿದಂತೆ ಇಬ್ಬರ ಸ್ಥಿತಿ ಚಿಂತಾಜನಕ ವಾಗಿದ್ದು ಇಬ್ಬರನ್ನೂ ಅಂಬ್ಯುಲೆನ್ಸ್ ಮೂಲಕ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ.
ಬಸ್ ನಲ್ಲಿ ಸಿಲುಕಿರುವ ಪ್ರಯಾಣಿಕರನ್ನು ಹೊರತೆಗೆಯಲು ಸಾರ್ವಜನಿಕರು ಹರಸಹಾಸ ಪಡುತ್ತಿದ್ದು ಘಟನಾ ಸ್ಥಳಕ್ಕೆ ಪೋಲೀಸರು ದೌಡಾಯಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ