Breaking News
Home / Breaking News / ಊಹಾಪೋಹಗಳಿಗೆ ಪುಲ್ ಸ್ಟಾಪ್ ಇಟ್ಟ ಸಂಸದೆ ಮಂಗಲಾ ಅಂಗಡಿ

ಊಹಾಪೋಹಗಳಿಗೆ ಪುಲ್ ಸ್ಟಾಪ್ ಇಟ್ಟ ಸಂಸದೆ ಮಂಗಲಾ ಅಂಗಡಿ

ಮೌನ ಮುರಿದು,ಖಡಕ್ ಸ್ಟೇಟ್ ಮೆಂಟ್ ಕೊಟ್ಟ ಮಂಗಲಾ ಅಂಗಡಿ….

ಬೆಳಗಾವಿ- ಬೆಳಗಾವಿ ಸಂಸದೆ ಮಂಗಲಾ ಅಂಗಡಿ ಅವರು ಮೌನ ಮುರಿದು ತಮ್ಮ ನಿರ್ಧಾರವನ್ನು ಮಾದ್ಯಮಗಳ ಎದುರು ಮಂಡಿಸಿದ್ದಾರೆ. ಬೆಳಗಾವಿ ಲೋಕಸಭಾ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಗೆ ಶಾಕ್ ಕೊಟ್ಟಿದ್ದಾರೆ.

ಇತ್ತೀಚಿಗೆ ಬೆಳಗಾವಿ ನಗರದಲ್ಲಿ ಮಾದ್ಯಮಗಳ ಜೊತೆ ಮಾತನಾಡಿ ಊಹಾಪೋಹಗಳಿಗೆ ಪುಲ್ ಸ್ಟಾಪ್ ಇಟ್ಟ ಸಂಸದೆ ಮಂಗಲಾ ಅಂಗಡಿ ಹಲವಾರು ವಿಚಾರಗಳನ್ನು ಮಾದ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.ಲೋಕಸಭಾ ಚುನಾವಣೆ ಸಪೀಪಿಸುತ್ತಿದ್ದಂತೆ,ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಹಲವಾರು ಜನ ಆಕಾಂಕ್ಷಿಗಳು ಬಿಜೆಪಿ ಟಿಕೆಟ್ ಗಾಗಿ ಲಾಭಿ ನಡೆಸುತ್ತಿರುವ ಬೆನ್ನಲ್ಲಿಯೇ ಮಂಗಲಾ ಅಂಗಡಿ ನಾನು ಹಾಲಿ ಸಂಸದೆ ಟಿಕೆಟ್ ನನಗೇ ಸಿಗುತ್ತದೆ ಎನ್ನುವ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ

ಪ್ರಶ್ನೆ….
ಮಂಗಲಾ ಅಂಗಡಿಗೆ ಈ ಭಾರಿ ಲೋಕಸಭಾ ಟಿಕೆಟ್ ಕೈ ತಪ್ಪುತ್ತೆ ಅನೋ ವಿಚಾರ

ಉತ್ತರ….
ಟಿಕೆಟ್ ತಪ್ಪುತ್ತೆ ಅನೋದು ಮಾದ್ಯಮಗಳ ಸೃಷ್ಟಿ ಅಷ್ಟೇ
ಆ ತರ ಏನಿಲ್ಲ, ಇನ್ನೂ ಸಾಕಷ್ಟು ಸಮಯವಿದೆ.
ನಾನು ಟಿಕೆಟ್ ಕೇಳುವ ಪ್ರಶ್ನೆಯೇ ಬರಲ್ಲ, ನಾನು ಹಾಲಿ ಸಂಸದೆ ನನಗೆ ಟಿಕೆಟ್ ನೀಡ್ತಾರೆ.

ಪ್ರಶ್ನೆ….
ಪುತ್ರಿಯರಿಗೆ ಟಿಕೆಟ್ ಕೇಳ್ತೀರಾ ಅನೋ ವಿಚಾರ

ಉತ್ತರ…
ಅಂತಹ ವಿಚಾರ ಮಾಡಿಲ್ಲ, ಮುಂದೆ ಏನೇನೂ ಪ್ರಸಂಗ ಬರುತ್ತೆ ನೋಡೋಣ.

ಪ್ರಶ್ನೆ….
ಅಂಗಡಿ ಕುಟುಂಬಕ್ಕೆ ಟಿಕೆಟ್ ಬದಲಾವಣೆ ಚರ್ಚೆ ವಿಚಾರ

ಉತ್ತರ…
ಟಿಕೆಟ್ ಬದಲಾವಣೆ ಚರ್ಚೆ ಆಗಿಲ್ಲ, ಇದು ಮಾಧ್ಯಮಗಳ ಸೃಷ್ಟಿ.
ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳು ಬಹಳಷ್ಟು ಜನ ಇರ್ತಾರೆ.

ಪ್ರಶ್ನೆ….
ಕಾಂಗ್ರೆಸ್ ಸೇರ್ಪಡೆ ವಿಚಾರ

ಉತ್ತರ…
ಕಾಂಗ್ರೆಸ್ ಸೇರುದು ಸುಳ್ಳು
ಟಿಕೆಟ್ ಸಿಕ್ರೂ ಸಿಗದೇ ಇದ್ರೂ ಬಿಜೆಪಿಯಲ್ಲಿ ನಾನು ಮುಂದುವರೆಯುವೆ.
ಯಾರಿಗೆ ಟಿಕೆಟ್ ನೀಡಿದ್ರೂ ನಾನು ಬಿಜೆಪಿಯೇ ಮಾಡುತ್ತೇನೆ.
ಟಿಕೆಟ್ ತಪ್ಪುತ್ತೆ ಅನೋದು ಊಹಾಪೋಹಗಳಷ್ಟೇ ನನ್ನ ಜತೆಗೆ ಯಾರು ನಾಯಕರು ಮಾತನಾಡಿಲ್ಲ.

ಪ್ರಶ್ನೆ….
ದೆಹಲಿ ನಾಯಕರನ್ನ ಭೇಟಿಯಾಗಿ ಮಗಳಿಗೆ ಟಿಕೆಟ್ ಕೇಳಿರುವ ಚರ್ಚೆ ವಿಚಾರ

ಉತ್ತರ…
ಆ ತರ ಕೇಳಿಲ್ಲ, ಹಿಂದೆ ಮಗಳಿಗೆ ಟಿಕೆಟ್ ನೀಡುವಂತೆ ಕೇಳಿದ್ವಿ,
ನಮ್ಮ ಕುಟುಂಬಕ್ಕೆ ಟಿಕೆಟ್ ನೀಡಬೇಕು ಅಂತಾ ಕೇಳಿದ್ವಿ, ಇವಾಗ ಕೇಳಿಲ್ಲ.
ಈ ಬಾರಿಯೂ ನನಗೆ ಟಿಕೆಟ್ ಸಿಗುವ ವಿಶ್ವಾಸವಿದೆ

ಪ್ರಶ್ನೆ…..
ಲೋಕಸಭೆ ಕುಟುಂಬದ ಬೇರೆದವರಿಗೆ ಟಿಕೆಟ್ ಸಿಗುತ್ತಾ ಅನೋ ವಿಚಾರ

ಉತ್ತರ….
ನೋಡೋಣ ವಿಚಾರ ಮಾಡಿ ಹೇಳುತ್ತೇನೆ.
ನಾಯಕರು ಯಾವ ನಿರ್ಧಾರ ತೆಗೆದುಕೊಳ್ಳುತ್ತಾರೆ ನೋಡಬೇಕು.ನಾವು ಇನ್ನೂ ಏನು ಮಾತನಾಡಿಲ್ಲ ಎಂದ ಮಂಗಲ ಅಂಗಡಿ

 

Check Also

ನಿಶ್ಚಲಾನಂದನಾಥ ಸ್ವಾಮೀಜಿಯವರ ಆಶೀರ್ವಾದ ಪಡೆದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ

ಕುಮಟಾ: ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಆದಿಚುಂಚನಗಿರಿ ಮಹಾಸಂಸ್ಥಾನದ ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ …

Leave a Reply

Your email address will not be published. Required fields are marked *