ಬೆಳಗಾವಿ- ನಿನ್ನೆ ಶನಿವಾರ ಬಾರ್ ಗೆ ರಜೆ ಇದ್ದು ರಾತ್ರಿ ಊಟ ಮಾಡಿ ಮಲಗುವಾಗ ಜಗಳಾಡಿಕೊಂಡ ಬಾರ್ ಕಾರ್ಮಿಕರು ಓರ್ವನ ಕತ್ತು ಸೀಳಿ ಮರ್ಡರ್ ಮಾಡಿ,ಕಟ್ಟಡದ ಎರಡನೇಯ ಮಹಡಿಯಿಂದ ಎಸೆದ ಘಟನೆ ಘಟಪ್ರಭಾದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಸಂಜು ಎಂಬಾತ ಕಳೆದ ಒಂದು ತಿಂಗಳಿನಿಂದ ಘಟಪ್ರಭಾದ ಬಾರ್ ನಲ್ಲಿ ಕೆಲಸ ಮಾಡುತ್ತಿದ್ದ ನಿನ್ನೆ ಬಾರ್ ಗೆ ರಜೆ ಇತ್ತು ರಾತ್ರಿ ಕಾರ್ಮಿಕರ ನಡುವೆ ಯಾವುದೋ ಕಾರಣಕ್ಕೆ ಜಗಳ ಆಗಿದೆ ಇದು ವಿಕೋಪಕ್ಕೆ ಹೋಗಿ,ಮೂವರು ಸೇರಿಕೊಂಡು ಸಂಜು ಎಂಬಾತನ ಕತ್ತು ಸೀಳಿದ್ದಾರೆ.ನಂತರ ಆತನನ್ನು ಎರಡನೇಯ ಮಹಡಿಯಿಂದ ಎಸೆದಿದ್ದಾರೆ ಎಂದು ಗೊತ್ತಾಗಿದೆ.
ಬಾರ್ ಆವರಣದಲ್ಲಿ ಸಂಜು ಎಂಬ ಕಾರ್ಮಿಕನ ಶವ ದೊರೆತಿದೆ,ಸ್ಥಳಕ್ಕೆ ಪೋಲೀಸರು ದೌಡಾಯಿಸಿ ಬಾರ್ ನಲ್ಲಿದ್ದ ಮೂವರು ಯುವಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ