.ಬೆಳಗಾವಿ: ಹಣಕಾಸಿನ ವ್ಯವಹಾರಕ್ಕೆ ಯೋಧರಿಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ತಿರುಗಿ ರಿವಾಲ್ವರ್ ನಿಂದ ಹಾರಿಸಿದ ಗುಂಡು ಯೋಧನ ಹೊಟ್ಟೆಗೆ ತಗುಲಿ ಗಂಭೀರ ಗಾಯಗೊಂಡ ಘಟನೆ ಗೋಕಾಕ ತಾಲೂಕಿನ ಅಂಕಲಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ನಡೆದಿದೆ.
ಗೋಕಾಕ ತಾಲೂಕಿನ ರಾಜನಕುಟ್ಟೆ ಗ್ರಾಮದ ನಂಜುಂಡಿ ಲಕ್ಷ್ಮಣ ಬೂದಿಹಾಳ(32) ಗುಂಡು ಹಾರಿಸಿದ್ದು, ಅದೇ ಗ್ರಾಮದ ಬಸಪ್ಪ ಮೈಲಪ್ಪ ಬಂಬರಗಾ(32) ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇಬ್ಬರೂ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ರಜೆಯ ಮೇಲೆ ಗ್ರಾಮಕ್ಕೆ ಆಗಮಿಸಿದ್ದರು. ಹಣಕಾಸಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಇಬ್ಬರ ಮಧ್ಯೆ ಮಂಗಳವಾರ ಮಾತಿನ ಚಕಮಕಿ ನಡೆದು ವಿಕೋಪಕ್ಕೆ ತಿರುಗಿದ್ದು, ಯೋಧ ನಂಜುಂಡಿ ಲೈಸನ್ಸ್ ಪಡೆದು ಕಾಶ್ಮೀರದಲ್ಲಿ ಖರೀದಿಸಿದ್ದ ರಿವಾಲ್ವರ್ ನಿಂದ ಗುಂಡು ಹಾರಿಸಿದ್ದಾನೆ. ಗುಂಡು ಬಸಪ್ಪನ ಹೊಟ್ಟೆಯ ಭಾಗಕ್ಕೆ ತಗುಲಿದ್ದು, ಅಸ್ವಸ್ಥಗೊಂಡ ಅವರನ್ನು ಸ್ಥಳೀಯರು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ. ಅಂಕಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Ankalagi ps limits
Fire arm incident has taken place , where in accused Nanjundi shot victim Basappa with a licensed double barrel gun (taken in kashmir) in his stomach due to money lending issue.
Now victim is being taken to higher centre for further treatment after stabilising him in local hospital.
Victim: Basappa Mailappa Bambarga Age about 32 Working in Indian army
Accused: Nanjundi Laxman Budihal age about 32 Working in Indian army
Both are resident of Rajanakatte, Gokak (tq), Belagavi District
Accused has been secured.