Breaking News

ಬೆಳಗಾವಿಯಲ್ಲಿ ನಿರ್ಮಾಣವಾಗಲಿದೆ ಆರು, ಅಂತಸ್ಥಿನ ಭವ್ಯ ಸರಕಾರಿ ಕಟ್ಟಡ…!!

ಬೆಳಗಾವಿ: 145×71 ಅಳತೆಯ 6 ಅಂತಸ್ಥಿನ ಭವ್ಯ ಸರಕಾರಿ ಕಟ್ಟಡ…ಕಟ್ಟಡದ ಸುತ್ತ ನಾಲ್ಕೂ ಕಡೆ ದ್ವಿಪಥ ರಸ್ತೆ… ಪ್ರವೇಶ ದ್ವಾರದ ಮುಂದೆ ಸುಂದರ ಉದ್ಯಾನವನ…ನೂರಾರು ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ…!
ಇದು ಯಾವುದೋ ದೆಹಲಿ, ಬೆಂಗಳೂರಿನಲ್ಲಿನ ಸರಕಾರಿ ಕಟ್ಟಡ ವರ್ಣನೆಯಲ್ಲ. ನಮ್ಮ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ತಲೆ ಎತ್ತಲಿರುವ ಸರಕಾರಿ ಕಚೇರಿಗಳ ಸಂಕೀರ್ಣ.

ಹೌದು, ಹೃದಯಭಾಗದಲ್ಲಿರುವ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಆರು ಅಂತಸ್ತಿನ ಭವ್ಯ ಹೆಟೆಕ್ ಕಟ್ಟಡ ತಲೆ ಎತ್ತಲಿದೆ. ಕಟ್ಟಡಕ್ಕೆ ಸರಕಾರದಿಂದ ಅನುಮೋದನೆಯೂ ಸಿಕ್ಕಿದ್ದು, ಶೀಘ್ರದಲ್ಲಿಯೇ ಟೆಂಡರ್ ಪ್ರಕ್ರಿಯೆ ನಡೆಯಲಿದೆ.
ಈ ಕಟ್ಟಡಕ್ಕಾಗಿ ಈಗಿನ ಜಿಲ್ಲಾಧಿಕಾರಿ ಕಚೇರಿಯ ಕಟ್ಟಡ, ಆವರಣದ ಸ್ವಲ್ಪ ಭಾಗ, ಬ್ರಿಟಿಷರ ಕಾಲದಲ್ಲಿ ನಿರ್ಮಾಣವಾದ ಸಬ್ ರಿಜಿಸ್ಟರ್ ಕಚೇರಿ, ಡಿವೈಎಸ್ಪಿ ಕಚೇರಿ ಕಟ್ಟಡ ಸೇರಿದಂತೆ ಸುತ್ತಮುತ್ತಲಿನ ಕೆಲವು ಕಟ್ಟಡಗಳನ್ನು ನೆಲಸಮಗೊಳಿಸಲು ನಿರ್ಧರಿಸಲಾಗಿದೆ. ಈಗಾಗಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಮೀಕ್ಷೆಯನ್ನೂ ನಡೆಸಿ ಯೋಜನಾ ವರದಿ ಸಲ್ಲಿಸಿದ್ದು, ಸರಕಾರದ ಅನುಮೋದನೆಯೂ ಸಿಕ್ಕಿದೆ.

ಪ್ರಸ್ತಾವಿತ ಕಟ್ಟಡದ 145×71 ಅಳತೆಯ ಜಾಗದಲ್ಲಿ ನಿರ್ಮಾಣವಾಗಲಿದ್ದು, 100 ರಿಂದ 150 ಕೋಟಿ ರೂ.ವೆಚ್ಚ ತಗುಲಬಹುದು ಎಂದು ಅಂದಾಜಿಸಲಾಗಿದೆ.
ಕಟ್ಟಡದ ಸುತ್ತ ನಾಲ್ಕು ಕಡೆ ದ್ವಿಪಥ ರಸ್ತೆ, ದ್ವಾರದಲ್ಲಿ ಸುಂದರ ಉದ್ಯಾನವನ ತಲೆ ಎತ್ತಲಿದ್ದು, ನೂರಾರು ವಾಹನಗಳನ್ನು ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆ ಇರಲಿದೆ. ಉತ್ತರಕ್ಕೆ ಪ್ರವೇಶ ದ್ವಾರ ಇರಲಿದ್ದು, ಮುಖ್ಯ ಪ್ರವೇಶ ದ್ವಾರದ ಹೊರತಾಗಿ ಹೆಚ್ಚುವರಿಯಾಗಿ ಮತ್ತೆರಡು ಪ್ರವೇಶ ದ್ವಾರಗಳು ಇರಲಿವೆ. ಹಿಂಭಾಗದ ಪ್ರವೇಶ ದ್ವಾರ ಚವಾಟ್ ಗಲ್ಲಿಗೆ ಹೋಗುವ ರಸ್ತೆಯನ್ನು ಸಂಪರ್ಕಿಸಲಿದೆ.

ಎರಡು ಅಂತಸ್ತಿನ ನೆಲಮಾಳಿಗೆ ಇರಲಿದ್ದು, 4 ಮಹಡಿಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸೇರಿದಂತೆ ಸರಕಾರದ ವಿವಿಧ ಕಚೇರಿಗಳು ಒಳಗೊಂಡಂತೆ 6 ಅಂತಸ್ತು ಇರಲಿವೆ.
ಈಗಿನ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಮಹತ್ವದ ದಾಖಲೆಗಳು ಇದ್ದು, ಅವುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಸಿದ್ಧತೆ ನಡೆದಿದೆ.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *