Breaking News

ದಾಖಲೆ ನಿರ್ಮಿಸಿದ ಬೆಳಗಾವಿಯ ಗಣೇಶ್ ವಿಸರ್ಜನೆ ಮೆರವಣಿಗೆ….!

ಬೆಳಗಾವಿಯಲ್ಲಿ ಮೇಘಾ ಇವೆಂಟ್ ಸಕ್ಸೆಸ್

ಬೆಳಗಾವಿ- ಬೆಳಗಾವಿಯ ಗಣೇಶ ಹಬ್ನ ಐತಿಹಾಸಿಕ ಮತ್ತು ಅಭೂತಪೂರ್ವ, 350 ಕ್ಕೂ ಹೆಚ್ಚು ಸಾರ್ವಜನಿಕ ಗಣೇಶ ಮೂರ್ತಿಗಳನ್ನು ಲಕ್ಷಾಂತರ ಸಮ್ಮುಖದಲ್ಲಿ ಮೆರವಣಿಗೆಯ ಮೂಲಕ ವಿಸರ್ಜನೆ ಮಾಡುವದು ಸುಲಭದ ಮಾತಲ್ಲ,ಇಂತಹ ಕಠಿಣವಾದ ಕೆಲಸವನ್ನು ಬೆಳಗಾವಿ ಜಿಲ್ಲಾಡಳಿತ ಅತ್ಯಂತ ಯಶಸ್ವಿಯಾಗಿ ಶಾಂತಿಯುತವಾಗಿ, ಸುಸಜ್ಜಿತವಾಗಿ ನಡೆಸಿದೆ.

ಗುರುವಾರ ಸಂಜೆ ಬೆಳಗಾವಿಯಲ್ಲಿ ಆರಂಭವಾದ ಗಣೇಶ ವಿಸರ್ಜನಾ ಮೆರವಣಿಗೆ ಶುಕ್ರವಾರ ರಾತ್ರಿ 11 ಗಂಟೆಗೆ ಮುಕ್ತಾಯವಾಗಿದ್ದು 30 ಗಂಟೆಗಳ ಕಾಲ ನಡೆದ ಈ ಮೆರವಣಿಗೆ ಹೊಸ ದಾಖಲೆ ನಿರ್ಮಿಸಿದ್ದು, ಇದನ್ನು ಬೆಳಗಾವಿ ಜಿಲ್ಲಾಡಳಿತ ಅತ್ಯಂತ ಅಚ್ಚುಕಟ್ಟಾಗಿ,ಯಾವುದೇ ರೀತಿಯ ತೊಂದರೆಗಳು ಎದುರಾಗದಂತೆ ನಿಭಾಯಿಸಿ ಜನಮೆಚ್ಚುಗೆಗೆ ಪಾತ್ರವಾಗಿದೆ.

ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ದೂರದೃಷ್ಟಿ ಮತ್ತು ಮುಂದಾಲೋಚನೆಯ ಪರಿಣಾಮ ಈ ವರ್ಷ ಗಣೇಶ ಉತ್ಸವದ ಪೂರ್ವಸಿದ್ಧತೆಯ ಸಭೆ ಎರಡು ತಿಂಗಳ ಮುಂಚೆಯೇ ನಡೆಸಿ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಎಲ್ಲ ಅಧಿಕಾರಿಗಳಿಗೆ ಸೂಚನೆ ನೀಡಿದ ಹಿನ್ನಲೆಯಲ್ಲಿ
ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅಧಿಕಾರಿಗಳಲ್ಲಿ ಸಮನ್ವಯತೆ ತಂದು ಅಧಿಕಾರಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡುವದಲ್ಲದೇ ಸಿದ್ಧತೆಗಳನ್ನು ಖುದ್ದಾಗಿ ಪರಶೀಲನೆ ಮಾಡಿ ಶ್ರೀಗಣೇಶನಿಗೆ ಅದ್ಧೂರಿ ವಿದಾಯ ಹೇಳುವ ಮೂಲಕ ಜಿಲ್ಲಾಡಳಿತ ಜನಪರವಾಗಿದೆ ಅನ್ನೋದನ್ನು ಸಾಭೀತು ಮಾಡಿದ್ದಾರೆ.

*ಬೆಳಗಾವಿ ಮಹಾನಗರ ಪಾಲಿಕೆ*

ಬೆಳಗಾವಿ ಮಹಾನಗರ ಪಾಲಿಕೆ ಗಣೇಶ ಹಬ್ಬಕ್ಕೆ ಅಗತ್ಯ ಅನುದಾನವನ್ನು ಸೂಕ್ತ ಸಮಯದಲ್ಲಿ ಬಿಡುಗಡೆ ಮಾಡಿ, ಬೆಳಗಾವಿ ಮಹಾನಗರ ಪಾಲಿಕೆಯ ಆಯುಕ್ತ ಅಶೋಕ ದುಡಗುಂಟಿ ಅವರು ಕಳೆದ ಎರಡು ವಾರಗಳಿಂದ ಓಡಾಡಿ ಕೆಲಸ ಮಾಡಿದ್ದಾರೆ. ಜೊತೆಗೆ ಮೆರವಣಿಗೆಯ ಮಾರ್ಗದ,ದುರಸ್ಥಿ,ಕುಡಿಯುವ ನೀರಿನ ವ್ಯವಸ್ಥೆ, ಪ್ರೇಕ್ಷಕರ ಗ್ಯಾಲರಿ ನಿರ್ಮಾಣ ಹಾಗೂ ಕಪಿಲೇಶ್ವರ ಹೊಂಡ ಸೇರಿದಂತೆ ನಗರದ ಎಲ್ಲ ಹೊಂಡಗಳಲ್ಲಿ ದೊಡ್ಡ,ದೊಡ್ಡ ಮೂರ್ತಿಗಳ ವಿಸರ್ಜನೆಗೆ ಕ್ರೇನ್ ವ್ಯವಸ್ಥೆ ಸೇರಿದಂತೆ ಎಲ್ಲ ಅನಕೂಲತೆಗಳನ್ನು ಅತ್ಯಂತ ಶ್ರದ್ಧೆಯಿಂದ ಕಲ್ಪಿಸುವ ಮೂಲಕ ವಿನಾಯಕನ ಕೃಪೆಗೆ ಪಾತ್ರರಾಗಿದ್ದಾರೆ. ಮೂವತ್ತು ಗಂಟೆಗಳ ಕಾಲ ಪಾಲಿಕೆ ಆಯುಕ್ತ ಅಶೋಕ ದುಡಗುಂಟಿ, ಹಾಗೂ ಪಾಲಿಕೆಯ ಎಲ್ಲ ಅಧಿಕಾರಿಗಳು ಸಿಬ್ಬಂಧಿಗಳು ಪೌರ ಕಾರ್ಮಿಕರು ನಗರ ಸೇವಕರು ಶ್ರಮಿಸುವ ಮೂಲಕ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.

ಪೋಲೀಸರಿಗೆ ಬಿಗ್ ಸಲ್ಯುಟ್

30 ಗಂಟೆಗಳ ಕಾಲ ನಡೆದ ಮೆರವಣೆಗೆ ಅತ್ಯಂತ ಶಾಂತಿಯುತವಾಗಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಸಾವಿರಾರು ಜನ ಪೋಲೀಸ್ ಸಿಬ್ಬಂಧಿಗಳು ನಿದ್ದೆ ಮಾಡದೇ ಹಗಲು ರಾತ್ರಿ ಕರ್ತವ್ಯ ನಿಭಾಯಿಸಿದ್ದು, ನಗರ ಪೋಲೀಸ್ ಆಯುಕ್ತ ಸಿದ್ರಾಮಪ್ಪ, ಡಿಸಿಪಿ ರೋಹನ್ ಜಗದೀಶ್ ಹಾಗು ಎಲ್ಲ ಎಸಿಪಿ, ಸಿಪಿಐ,ಪಿಎಸ್ಐ ಗಳು ಹಾಗೂ ಸಾವಿರಾರು ಪೋಲೀಸರು ವಿಶ್ರಾಂತಿ ಪಡೆಯದೇ ನಿರಂತರವಾಗಿ ಪಹರೆ ಮಾಡುವ ಮೂಲಕ ಅಪ್ರತಿಮ ಸೇವೆ ಮಾಡಿದ್ದು ಅವರ ಸೇವೆಗೊಂದು ಬಿಗ್ ಸಲ್ಯುಟ್.

ಶಾಕ್ ಇಲ್ಲ ಈ ಬಾರಿ ಹೆಸ್ಕಾಂ ರಾಕ್‌….

ಗಣೇಶ ವಿಸರ್ಜನೆ ಮೆರವಣಿಗೆ ಸಂಧರ್ಭದಲ್ಲಿ ಪ್ರತಿ ಬಾರಿಯೂ ವಿದ್ಯುತ್ ಅವಘಡಗಳು ನಡೆದು ಹಲವಾರು ಜನ ಪ್ರಾಣ ಕಳೆದುಕೊಂಡ ಕಹಿ ಘಟನೆಗಳು ನಡೆದಿರುವದನ್ನು ಗಂಭೀರವಾಗಿ ಪರಗಣಿಸಿದ ಹೆಸ್ಕಾಂ ಈ ಬಾರಿ ಯಾವುದೇ ರೀತಿಯ ಕಹಿ ಘಟನೆಗಳಿಗೆ ಆಸ್ಪದ ನೀಡಲಿಲ್ಲ ಹಗಲು ರಾತ್ರಿ ಶ್ರಮಿಸಿ ಗಣೇಶ ವಿಸರ್ಜನೆ ಮೆರವಣೆಯ ಮಾರ್ಗದ ವಿದ್ಯುತ್ ತಂತಿಗಳನ್ನು ತೆರವು ಮಾಡುವ ಮೂಲಕ ವಿಶೇಷವಾದ ಸೇವೆ ಮಾಡಿದ್ದಾರೆ.
ಹೆಸ್ಕಾಂ MD ಮಹ್ಮದ್ ರೋಷನ್ ಹಾಗೂ ತಾಂತ್ರಿಕ ನಿರ್ದೇಶಕ ಎಸ್ ಸೊಸಾಲಟ್ಟಿ ಅವರ ಮಾರ್ಗದರ್ಶನದಲ್ಲಿ ಚೀಪ್ ಇಂಜಿನಿಯರ್ ಬಿ.ಪ್ರಕಾಶ್,ಹಾಗೂ ಹೆಸ್ಕಾಂ ಅಧಿಕಾರಿಗಳಾದ ಪ್ರವೀಣ ಚಿಕಾಡೆ,ಸುನೀಲಕುಮಾರ್,ಎಸ್ ಜಿ ಹಮ್ಮಣ್ಣವರ,ವಿನೋದ್ ಕರೂರ್,ಅಶ್ವೀನ್ ಶಿಂಧೆ,ಅಂಗಡಿ,ಸಿದ್ರಾಮ್ ಕಾಂಬಳೆ,ಶೀತಲ ಸನದಿ,ಪ್ರವೀಣ ಮರಗಾಳೆ,ಕಳ್ಳಿಮನಿ,ಹೈಬತ್ತಿ,ಜಗದೀಶ್ ಮೋಹಿತೆ,ಪವನ್ ಕುಮಾರ್,ಹಂದಿಗುಂದಿ,ಇಕ್ಬಾಲ್ ತಹಶೀಲದಾರ್ ಸೇರಿದಂತೆ ನೂರಾರು ಜನ ಪವರ್ ಮೆನ್ ಗಳು ಶ್ರಮಿಸಿದ್ದು ವಿನಾಯಕ ಕೃಪೆಗೆ ಇವರೂ ಪಾತ್ರರಾಗಲಿ, ಎಂದು ಹಾರೈಸುತ್ತೇವೆ.

ಒಟ್ಟಾರೆ ಈ ಬಾರಿಯ ಬೆಳಗಾವಿಯ  ಗಣೇಶ ಹಬ್ಬ ಅದ್ಧೂರಿಯಾಗಿ,ಐತಿಹಾಸಿಕವಾಗಿ, ಶಾಂತಿಯುತವಾಗಿ ನಡೆಯಲು ಪರೋಕ್ಷವಾಗಿ ಅಪರೋಕ್ಷವಾಗಿ ಶ್ರಮಿಸಿದ ಎಲ್ಲರಿಗೂ ಬೆಳಗಾವಿ ಸುದ್ದಿ ಡಾಟ್ ಕಾಮ್ ಬಳಗದ ವತಿಯಿಂದ ಸಲಾಂ ಹಾಗೂ ಅನಂತ ಅನಂತ ಧನ್ಯವಾದಗಳು…

 

Check Also

ಮಂತ್ರಿಗಿರಿ ರೇಸ್ ನಲ್ಲಿ ಬೆಳಗಾವಿಯ ಜಾತ್ಯಾತೀತ ಕುಟುಂಬದ, ಶಾಸಕ!

ಬೆಳಗಾವಿ ಯಾರಿಗೆ ಸೇರಿದ್ದು ಎಂದು ವಿಚಾರಣೆ ಮಾಡಲು ಕೇಂದ್ರ ಸರ್ಕಾರಗಳು ರಚಿಸಿದ ಫಜಲ್ ಅಲಿ,ಆಯೋಗ,ಮಹಾಜನ್ ಆಯೋಗ ಬೆಳಗಾವಿಗೆ ಬಂದಾಗ ಎಲ್ಲ …

Leave a Reply

Your email address will not be published. Required fields are marked *