ಹಾಡಹಗಲೇ, ರಿವಾಲ್ವರ್ ತೋರಿಸಿ ದರೋಡೆಗೆ ಯತ್ನ…
ಬೆಳಗಾವಿ-ಹಾಡಹಗಲೇ ರಿವಾಲ್ವರ್ ತೋರಿಸಿ ಚಿನ್ನಾಭರಣ ದರೋಡೆಗೆ ಯತ್ನಿಸಿದ ಘಟನೆ,ಬೆಳಗಾವಿಯ ಶಾಹುನಗರದಲ್ಲಿ ನಡೆದಿದೆ.
ಇಂದು ಬೆಳಗ್ಗೆ 10-00 ಗಂಟೆಗೆ ಶಾಹುನಗರದ ಸಂತೋಷಿ ಜ್ಯುವೆಲರ್ಸ್ ಮಳಿಗೆಗೆ ನುಗ್ಗಿದ ದರೋಡೆಕೋರರುಮಳಿಗೆ ಮಾಲೀಕ ಪ್ರಶಾಂತ ಹೊನರಾವ್ ಅವರಿಗೆ ಪಿಸ್ತೂಲ್ ತೋರಿಸಿ ಬೆದರಿಸಿದ್ದಾರೆ,ಇದಕ್ಕೆ ಬೆದರದೇ ದರೋಡೆಕೋರರ ಜೊತೆಗೆ ಕಾದಾಡಿದ ಮಳಿಗೆ ಮಾಲೀಕ ಪ್ರಶಾಂತ ದರೋಡೆಕೋರರಿಗೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದಾನೆ.
ಹೊಡೆದಾಟದ ವೇಳೆ ಪ್ರಶಾಂತ ಕುತ್ತಿಗೆಗೆ ಪಿಸ್ತೂಲಿನಿಂದ ಗುದ್ದಿದ ಆಗುಂತಕರು ಮಳಿಗೆ ಮಾಲೀಕನ ಪ್ರತಿರೋಧಕ್ಕೆ ಬೆದರಿ,ಈ ವೇಳೆ ತಕ್ಷಣವೇ ಮಳಿಗೆಯಿಂದ ಪರಾರಿಯಾದ ದರೋಡೆಕೋರರು ಹಾಡಹಗಲೇ ದರೋಡೆಗೆ ಯತ್ನಿಸಿದ್ದಾರೆ.
ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಸಿದ್ರಾಮಪ್ಪ, ಡಿಸಿಪಿ ರೋಹನ್ ಜಗದೀಶ ಭೇಟಿ ಪರಿಶೀಲನೆ ಮಾಡಿದ್ದಾರೆ.ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
 ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
				 
		 
						
					 
						
					 
						
					