ಬೆಳಗಾವಿ- ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಡೆಯುತ್ತಿರುವ ರಾಜಕೀಯ ಗುದ್ದಾಟ ಈಗ ರಾಜ್ಯಪಾಲರ ಅಂಗಳಕ್ಕೆ ಬಂದಿದೆ. ಬೆಳಗಾವಿ ಮೇಯರ್ ಶೋಭಾ ಸೋಮನಾಚೆ,ಅವರು ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ವಿರುದ್ಧ ದೂರು ನೀಡಿ ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೆ.
ಸಚಿವ ಸತೀಶ ಜಾರಕಿಹೊಳಿ ಅವರು ಇಂದು ಬುಧವಾರ ಬೆಳಗಾವಿ ಪಾಲಿಕೆಯಲ್ಲಿ ನಡೆದಿರುವ ಬ್ರಷ್ಟಾಚಾರದ ಬಗ್ಗೆ ಸಭೆ ಕರೆದ ಬೆನ್ನಲ್ಲಿಯೇ ಮೇಯರ್ ರಾಜ್ಯಪಾಲರಿಗೆ ಬರೆದಿರುವ ಪತ್ರವನ್ನು ಬಹಿರಂಗ ಪಡಿಸಲಾಗಿದೆ.
ಪಾಲಿಕೆಯಲ್ಲಿ ಈಗ 12 ಗಂಟೆಗೆ ಸಭೆ ಕರೆದಿದ್ದಾರೆ. ಸಭೆ ನಡೆಯುವ ಮುನ್ನವೇ ಮೇಯರ್ ರಾಜ್ಯಪಾಲರಿಗೆ ಬರೆದಿರುವ ಪತ್ರ ಮಾದ್ಯಮಗಳಿಗೆ ಬಿಡುಗಡೆಯಾಗಿದೆ.
ರಾಜ್ಯಪಾಲರಿಗೆ ಪತ್ರ ಬರೆದ ಬೆಳಗಾವಿ ಮೇಯರ್ ಶೋಭಾ ಸೋಮನಾಚೆ. ಪತ್ರದಲ್ಲಿಪಾಲಿಕೆ ಆಯುಕ್ತ ಅಶೋಕ ದುಡಗುಂಟಿ ಮೇಲೆ ಕ್ರಮ ವಹಿಸಲು ಪಾಲಿಕೆ ನಿರ್ಣಯ ಮಾಡಿದೆ.ಆಯುಕ್ತರ ವಿರುದ್ರ ಯುಪಿಎಸ್ಸಿಗೆ ಪತ್ರ ಬರೆದರೇ ಪಾಲಿಕೆ ವಿಸರ್ಜನೆ ಬಗ್ಗೆ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.ಸಚಿವರ ಹಸ್ತಕ್ಷೇಪದಿಂದ ಮಹಿಳೆಯಾದ ನನಗೆ ಒತ್ತಡ, ಕಿರುಕುಳ ಆಗುತ್ತಿದೆ.ಸ್ವತಂತ್ರ, ನಿರ್ಭಿತಿಯಿಂದ ನಿಷ್ಪಕ್ಷಪಾತವಾಗಿ ಕೆಲಸ ಮಾಡಲುಸಾಧ್ಯವಾಗುತ್ತಿಲ್ಲ.ಸಚಿವರ ಹೇಳಿಕೆಯಿಂದ 58ಜನ ಪಾಲಿಕೆ ಸದಸ್ಯರು ಅತಂತ್ರರಾಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ಬೆಳಗಾವಿ ಪಾಲಿಕೆಯನ್ನು ವಿಸರ್ಜನೆ ಮಾಡೋ ಉದ್ದೇಶ ಇದೆ,ಇದನ್ನು ಗಂಭೀರವಾಗಿ ಪರಿಗಣಿಸಿ ನಿಮ್ಮ ಜೊತೆಗೆ ಚರ್ಚೆ ಮಾಡಲು 37 ಜನ ಪಾಲಕೆ ಸದಸ್ಯರು ಚರ್ಚೆ ಮಾಡಲು ಬರುತ್ತೇವೆ.ಚರ್ಚೆ ಮಾಡಲು ಸಮಯ, ದಿನಾಂಕ ನಿಗದಿ ಮಾಡಲು ಮೇಯರ್ ಶೋಭಾ ಸೋಮನಾಚೆ ರಾಜ್ಯಪಾಲರಿಗೆ ವಿನಂತಿ ಮಾಡಿ ಪತ್ರ ಬರೆದಿದ್ದಾರೆ.