Breaking News

ಬೆಳಗಾವಿಯಲ್ಲಿ ರಾಜ್ಯಪಾಲರನ್ನು ಭೇಟಿಯಾದ ಬಿಜೆಪಿ ನಿಯೋಗ..

ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆ ಆಡಳಿತದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ,ಸಚಿವ ಸತೀಶ ಜಾರಕಿಹೊಳಿ ವಿರುದ್ಧ ಬಿಜೆಪಿ ನಿಯೋಗ ರಾಜ್ಯಪಾಲರಿಗೆ ದೂರು ನೀಡಿದೆ.

ಬೆಳಗಾವಿಯ ವಿಶ್ವೇಶರಯ್ಯ ತಾಂತ್ರಿಕ ವಿಶ್ವವಿದ್ಯಾಯದಲ್ಲಿ
ರಾಜ್ಯಪಾಲರ ಭೇಟಿಗೆ ವಿಲ್ ಚೇರ್ ನಲ್ಲಿ ಬಂದ ಮೇಯರ್ ಶೋಭಾ ಸೋಮನಾಚೆ.ಬೆಳಗಾವಿ ವಿಟಿಯು ಗೆಸ್ಟ್ ಹೌಸ್ ನಲ್ಲಿ ರಾಜ್ಯಪಾಲರನ್ನು ಭೇಟಿಯಾಗಿ ದೂರು ಸಲ್ಲಿಸಿದ್ದಾರೆ.ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಭೇಟಿಯಾಗಿ ಸತೀಶ್ ಜಾರಕಿಹೊಳಿ ಅವರ ವಿರುದ್ಧ ದೂರು ಸಲ್ಲಿಸಿದ್ದಾರೆ.

ಶಾಸಕ ಅಭಯ ಪಾಟೀಲ್, ಮಾಜಿ ಶಾಸಕ ಅನಿಲ್ ಬೆನಕೆ, ಮಾಜಿ ಎಂಎಲ್ಸಿ ಮಹಾಂತೇಶ ಕವಟಗಿಮಠ
ಪಾಲಿಕೆಯ ಬಹುತೇಕ ಬಿಜೆಪಿ ಪಾಲಿಕೆ ಸದಸ್ಯರು ರಾಜ್ಯಪಾಲರನ್ನು ಭೇಟಿ ಮಾಡಿದ್ದಾರೆ.ಪಾಲಿಕೆ ಆಡಳಿತದಲ್ಲಿ ಸಚಿವರು ಹಸ್ತಕ್ಷೇಪ ಮಾಡುತ್ತಿದ್ದಾರೆ.ಸಚಿವರ ಹಸ್ತಕ್ಷೇಪದಿಂದ ನಿರ್ಭಿತವಾಗಿ ಕೆಲಸ ಮಾಡಲು ಆಗುತ್ತಿಲ್ಲ.
ಪಾಲಿಕೆ ಆಯುಕ್ತರ ಅಶೋಕ ದುಡಗುಂಟಿ ವಿರುದ್ಧವು ನಿಯೋಗ ದೂರು ನೀಡಿದೆ.ಪಾಲಿಕೆ ಸದಸ್ಯ ರಾಜು ಭಾತಕಾಂಡೆ ಮನೆಯ ಮೇಲೆ ದಾಳಿ ಮಾಡಲಾಗಿದೆ.ಎಂದು ರಾಜ್ಯಪಾಲರಿಗೆ ದೂರು ನೀಡಲಾಗಿದೆ.

ರಾಜ್ಯಪಾಲರಿಂದ ಬುಲಾವ್….

ಬಿಜೆಪಿ ನಿಯೋಗ ರಾಜ್ಯಪಾಲರಿಗೆ ದೂರು ಸಲ್ಲಿಸಿ ಹೋದ ಬಳಿಕ,ರಾಜ್ಯಪಾಲರು ಬೆಳಗಾವಿ ಡಿಸಿ, ಪಾಲಿಕೆ ಆಯುಕ್ತ, ಪೊಲೀಸ್ ಆಯುಕ್ತರನ್ನು ಕರೆಯಿಸಿ ಪಾಲಿಕೆಯಲ್ಲಿ ನಡೆಯುತ್ತಿರುವ ನಡುವಳಿಗಳ ಕುರಿತು ಮಾಹಿತಿ ಪಡೆದಿದ್ದಾರೆ. ಇತ್ತೀಚಿಗೆ ಪಾಲಿಕೆಯಲ್ಲಿ ನಡೆದಿರುವ ಎಲ್ಲ ಘಟನೆಗಳ ಕುರಿತು ತಕ್ಷಣ ವರದಿ ನೀಡುವಂತೆ ನಿರ್ದೇಶನ ನೀಡಿದ್ದಾರೆ ಎಂದು ತಿಳಿದು ಬಂದಿದೆ.ಮೂರು ಜನ ಅಧಿಕಾರಿಗಳ ಜೊತೆಗೆ ರಾಜ್ಯಪಾಲರ ಚರ್ಚೆ ಮಾಡಿದ್ದಾರೆ.

ಪ್ರತ್ಯೇಕ ದೂರು..

ಬಿಜೆಪಿ ನಿಯೋಗ ಭೇಟಿ ವೇಳೆಯಲ್ಲಿ ರಾಜ್ಯಪಾಲರಿಗೆ ಪ್ರತ್ಯೇಕ ವಾಗಿ ಮೂರು ದೂರುಗಳನ್ನು ಸಲ್ಲಿಸಲಾಗಿದೆ.
ಮೇಯರ್ ಶೋಭಾ ಸೋಮನಾಚೆ, ಬಿಜೆಪಿ ಜಿಲ್ಲಾಧ್ಯಕ್ಷ ಅನಿಲ್ ಬೆನಕೆ, ಪಾಲಿಕೆ ಸದಸ್ಯ ಸಂದೀಪ್ ಜಿರಗ್ಯಾಳ ದೂರು ನೀಡಿದ್ದು ವಿಶೇಷವಾಗಿದೆ.

ಶಾಸಕ ಅಭಯ ಪಾಟೀಲ ಹೇಳಿಕೆ…

ಬಿಜೆಪಿ ನಿಯೋಗ ರಾಜ್ಯಪಾಲರಿಗೆ ದೂರು ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಅಭಯ್ ಪಾಟೀಲ್ರಾಜ್ಯಪಾಲರ ಭೇಟಿಗೆ ಅವಕಾಶ ಕೇಳಿದ್ರೆ 15 ರಿಂದ 20 ದಿನ ಬೇಕು.ರಾಜ್ಯಪಾಲರು ಬೆಳಗಾವಿ ಪಾಲಿಕೆ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.
ಕೆಲ ಪೊಲೀಸ್ ಅಧಿಕಾರಿಗಳನ್ನು ರಾಜ್ಯಪಾಲರೇ ಹೊರ ಹಾಕಿದರು.ಮೂರು ದೂರುಗಳನ್ನು ನಾವು ರಾಜ್ಯಪಾಲರಿಗೆ ನೀಡಿದ್ದವೆ.ನಾಳೆ ಈ ಕುರಿತು ‌ನಾವು ಸುದ್ದಿಗೋಷ್ಠಿ ಮಾಡುತ್ತೆವೆ.135 ಜನ ಪೌರ ಕಾರ್ಮಿಕರ ನೇಮಕಾತಿಯ ಕುರಿತು ನಾಳೆ ಹೇಳ್ತಿವಿ.ರಾಜ್ಯಪಾಲರು 10 ನಿಮಿಷ ಟೈಂ ನೀಡಿ ಎಲ್ಲ ಮಾಹಿತಿ ಕೇಳಿದ್ದಾರೆ.ಸೋಷಿಯಲ್ ಮೀಡಿಯಾ ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಬಂದಿರುವ ಮಾಹಿತಿ ಕೇಳಿದ್ದಾರೆ.ಮೇಯರ್ ಹಾಗೂ ಬೆನಕೆಯವರು ಹಾಗೂ ನಗರ ಸೇವಕ‌ ಜೀರಿಗ್ಯಾಳವರು ಕಂಪ್ಲೇಟ್ ನೀಡಿದ್ದಾರೆ.ನಿನ್ನೆ ನಮ್ಮ ಕಾರ್ಪೋರೆಟರ ಮನೆಯ ಮೇಲೆ ಹಲ್ಲೆಯಾಗಿದೆ.
ಇಲ್ಲಿಯವರೆಗೆ ಆರೋಪಿಗಳ ಅರೆಸ್ಟ್ ಆಗಿಲ್ಲ.ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆ ಎಲ್ಲಿದೆ ?ಜಿದ್ದಾ ಜಿದ್ದಿ ನಾವು ಮಾಡುತ್ತಿಲ್ಲ ಕಾನೂನು ಪ್ರಕಾರ ಎನಿದೆ ಅದನ್ನೆ ಮಾಡ್ತಿದ್ದೆವೆ.ನಿಮಗೆ ಅದು ಟೈಪಿಂಗ್ ಮಿಸ್ಟೇಕ್ ಅನಿಸಬಹುದು ಕಾರ್ಪೋರೇಷನ್ ಸೂಪರ್ ‌ಸೀಡ್ ಮಾಡಲು ನೀವು ಹೀಗೆ ಮಾಡ್ತಿದ್ದಿರಿ.
ಹೆಸರು ಹೇಳದೆ ಸಚಿವ ಸತೀಶ ಜಾರಕಿಹೊಳಿ ವಿರುದ್ದ ಶಾಸಕ ಅಭಯ ಪಾಟೀಲ ಟಾಂಗ್ ಕೊಟ್ಟಿದ್ದಾರೆ.

ಯುಪಿಎಸ್ಸಿಗೆ ದೂರು ಬರೆದ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಶಾಸಕ ಅಭಯ ಪಾಟೀಲ,ನಾವು ಬರೆಯುತ್ತೆವೆ ಕಾಯ್ದೆ ಒಳೆಗೆ ಅವಕಾಶ ಇರಲಿಲ್ಲ ಎಂದರೆ ಅದು ರಿಜೆಕ್ಟ್ ಆಗುತ್ತೆ.ಠರಾವು ಪಾಸ್ ಮಾಡಿದ್ದು ರಾಜ್ಯ ಸರ್ಕಾಕ್ಕೆ ಹೋಗಿದೆಯಾ ಇಲ್ವಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು
ಅದಕ್ಕೆ ಆಯುಕ್ತರೆ ಉತ್ತರ ನೀಡಬೇಕು ಎಂದರು

ದಲಿತ ಅಧಿಕಾರಿಗಳಿಗೆ ಅಭಯ್ ಪಾಟೀಲ್ ರಿಂದ ತೊಂದರೆ ಆಗುತ್ತಿದೆ ಎಂಬ ಸತೀಶ ಹೇಳಿಕೆ ವಿಚಾರ.ನಮ್ಮಲ್ಲಿಯೂ ಸಹ ಏಳು ಜನ ಕಾರ್ಪೋರೇಟರ್ಸ್ ದಲಿತರೇ ಇದ್ದಾರೆ.
ಭಾರತೀಯ ಜನತಾ ಪಾರ್ಟಿಯಿಂದ ಆರಿಸಿ ಬಂದಿದ್ದಾರೆ ಎಂದ ಆಭಯ್.ಕಡತ ಮಿಸ್ ಆದ ಕುರಿತು ಪೊಲೀಸರಿಗೆ ದೂರು ನೀಡಿದ ವಿಚಾರ.ದೂರು ಯಾರು ನೀಡಿದ್ದಾರೆ ಎಂದು ಮರು ಪ್ರಶ್ನೆ ಮಾಡಿದ ಅಭಯ್.ಕೆಳಗಿನ ಮಟ್ಟದ ರಾಜಕೀಯ ಮಾಡಲು ನಮಗೆ ಬರಲ್ಲ ಎಂದ ಅಭಯ್.3 ಗಂಟೆಗೆ ಮೇಯರ್ ಮನೆಗೆ ಹೋಗಿ ನೋಟಿಸ್ ನೀಡಿ 5 ಗಂಟೆಗೆ ವಿಚಾರಣೆ ಬನ್ನಿ ಅಂತಾರೆ .
ಇದು ಬೆಳಗಾವಿಯ 5 ಲಕ್ಷ ಜನರಿಗೆ ಮಾಡಿದ ಅಪಮಾನ ಎಂದ ಅಭಯ್ ಪಾಟೀಲ್ ಕಿಡಿಕಾರಿದ್ದಾರೆ.

Check Also

ಸಂಘ ದೋಷ, ಗೆಳೆಯನ ಜೊತೆ ಸೇರಿ ಗಂಡನ ಮರ್ಡರ್ ಮಾಡಲು ಸುಫಾರಿ ಕೊಟ್ಟ ಹೆಂಡತಿ…..!!!

ಬೆಳಗಾವಿ-ಅದೊಂದು ಸುಖ ಸಂಸಾರವಾಗಿತ್ತು ಸಾಲಕ್ಕಾಗಿ ಆ ಸಂಘ ಈ ಸಂಘವೆಂದು ಅಲೆದಾಡಿದ ಮನೆಯ ಯಜಮಾನಿ ಯುವಕನ ಜೊತೆ ಗೆಳೆತನ ಮಾಡಿ …

Leave a Reply

Your email address will not be published. Required fields are marked *