Breaking News

ಎಂಇಎಸ್ ನಾಯಕರ ವಿರುದ್ಧ ಕೇಸ್….

ಬೆಳಗಾವಿ-ಕರಾಳ‌ ದಿನ ಆಚರಿಸಿದ ನಾಡದ್ರೋಹಿ ‌ಎಂಇಎಸ್‌ ನಾಯಕರಿಗೆ ಬೆಳಗಾವಿ ಪೊಲೀಸರ ‌ಶಾಕ್ ಕೊಟ್ಟಿದ್ದಾರೆ.ರಾಜ್ಯೋತ್ಸವಕ್ಕೆ ಪ್ರತಿಯಾಗಿ ಕರಾಳ‌ ದಿನ ಆಚರಿಸಿ ಉದ್ಧಟತನ ಪ್ರದರ್ಶಿಸಿದ್ದ ಎಂಇಎಸ್‌ ನಾಯಕರ ವಿರುದ್ಧ ಕೇಸ್ ಹಾಕಿದ್ದಾರೆ.

ಕರಾಳ ದಿನ ಆಚರಿಸಿದ 18 ಎಂಇಎಸ್ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲು ಮಾಡಿರುವ ಬೆಳಗಾವಿ ಪೋಲೀಸರು.ಅನುಮತಿ ಇಲ್ಲದೇ ಕರಾಳ ದಿನ ಆಚರಿಸಿದ ಪುಂಡರ ವಿರುದ್ಧ.ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ಆಗಿದೆ.

ನಾಡದ್ರೋಹಿ ಘೋಷಣೆ ಕೂಗಿ ಉದ್ಧಟತನ ಮೆರೆದಿದ್ದ ನಾಡದ್ರೋಹಿಗಳು,ಅನುಮತಿ ಇಲ್ಲದಿದ್ದರೂ ನಗರದಲ್ಲಿ ಕರಾಳ ದಿನ ಆಚರಿಸಿದ್ದರು.ಮಾಲೋಜಿರಾವ್ ಅಷ್ಟೇಕರ್, ಮನೋಹರ ಕಿಣೇಕರ, ರಂಜಿತ್ ಚವ್ಹಾಣ,ಸರಿತಾ ಪಾಟೀಲ, ಸಾರಿಕಾ ಪಾಟೀಲ, ಅಮರ, ಯಳ್ಳೂರಕರ್ ಪ್ರಕಾಶ ಮರಗಾಲಿ,ರವಿ ಸಾಳುಂಕೆ, ಅಂಕುಶ ಕೇಸರಕರ್ ಸೇರಿದಂತೆ 18ಜನರ ವಿರುದ್ಧ ಕೇಸ್ ದಾಖಲಾಗಿದೆ.

Check Also

ಲೋಕಸಭೆಯಲ್ಲಿ ಬೆಳಗಾವಿ ಗಡಿ ಕುರಿತು ಶಿವಸೇನೆ ಕ್ಯಾತೆ

ಬೆಳಗಾವಿ- ಬೆಳಗಾವಿ ಗಡಿವಿವಾದದ ಕುರಿತು ನಿರಂತರವಾಗಿ ಕಾಲು ಕೆದರಿ ಜಗಳ ತೆಗೆಯುವ ಉದ್ಧವ ಠಾಕ್ರೆ ನೇತ್ರತ್ವದ ಶಿವಸೇನೆ,ಲೋಕಸಭೆಯಲ್ಲಿ ಕರ್ನಾಟಕ ಮಹಾರಾಷ್ಟ್ರ …

Leave a Reply

Your email address will not be published. Required fields are marked *