ಸುವರ್ಣಸೌಧ ನಿರ್ಮಾಣದಿಂದ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಕೂಗು ಕ್ಷೀಣ: ಸಭಾಪತಿ ಬಸವರಾಜ್ ಹೊರಟ್ಟಿ
ಬೆಳಗಾವಿ, ನ.7(ಕರ್ನಾಟಕ ವಾರ್ತೆ): ಗಡಿ ಜಿಲ್ಲೆಯಾಗಿರುವ ಬೆಳಗಾವಿಯಲ್ಲಿ ಸುವರ್ಣ ವಿಧಾನಸೌಧ ನಿರ್ಮಾಣದಿಂದ ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಕೂಗು ಕ್ಷೀಣವಾಗಿದೆ ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಅಭಿಪ್ರಾಯಪಟ್ಟರು.
ಸುವರ್ಣ ವಿಧಾನಸೌಧದಲ್ಲಿ ಮಂಗಳವಾರ(ನ.7) ಅಧಿವೇಶನ ಪೂರ್ವಸಿದ್ಧತೆ ಪರಿಶೀಲನೆ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.
ಗಡಿಜಿಲ್ಲೆಯಲ್ಲಿ ವಿಧಾನಸೌಧ ನಿರ್ಮಾಣದಿಂದ ಕನ್ನಡಕ್ಕೆ ಸ್ಫೂರ್ತಿ ಬಂದಂತಾಗಿದೆ. ಅನೇಕ ಸರಕಾರಿ ಕಚೇರಿಗಳು ಕೂಡ ಸ್ಥಳಾಂತರಗೊಂಡಿವೆ. ಇದರಿಂದ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ಕೂಗು ಸದ್ಯಕ್ಕೆ ಇಲ್ಲದಂತಾಗಿದೆ ಎಂದು ಹೇಳಿದರು.
****
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ