Breaking News

ಹತ್ತು ದಿನ ಬೆಳಗಾವಿ ಮಹಾನಗರದಲ್ಲಿ ರಾಜ ಕಳೆ..!!

ಬೆಳಗಾವಿ-ಡಿಸೆಂಬರ್ 4 ರಿಂದ ಬೆಳಗಾವಿಯ ಸುವರ್ಣವಿಧಾನಸೌಧದಲ್ಲಿ ಹತ್ತು ದಿನಗಳ ಕಾಲ ಚಳಿಗಾಲದ ಅಧಿವೇಶನ ನಡೆಯಲಿದೆ.ಗಂಟು ಮೂಟೆ ಕಟ್ಟಿಕೊಂಡು ಸರ್ಕಾರ ಹತ್ತು ದಿನ ಬೆಳಗಾವಿಯಲ್ಲಿ ಠಿಖಾನಿ ಹೂಡಲಿದೆ.

ಬೆಳಗಾವಿಯ ಸುವರ್ಣವಿಧಾನಸೌಧಕ್ಕೆ ಈಗ ರಾಜಕಳೆ,ಯಾಕಂದ್ರೆ ಅಧಿವೇಶನಕ್ಕೆ ಭರ್ಜರಿ ತಯಾರಿ ನಡೆದಿದೆ.ಅಧಿವೇಶನಕ್ಕೆ ಬರುವ ಗಣ್ಯರಿಗೆ ಅಧಿಕಾರಿಗಳಿಗೆ,ಬೆಂಗಳೂರಿನಿಂದ ಬರುವ ಪತ್ರಕರ್ತರಿಗೆ ಊಟ,ವಸತಿ,ವಾಹನ ಸೇರಿದಂತೆ ಎಲ್ಲ ರೀತಿಯ ಸವಲತ್ತುಗಳನ್ನು ಒದಗಿಸುವ ಕಾರ್ಯ ಭರದಿಂದ ಸಾಗಿದೆ.ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಪ್ರತಿದಿನ ತಮ್ಮ ಕಚೇರಿಯಲ್ಲಿ ಅಧಿಕಾರಿಗಳ ಸಭೆ ನಡೆಸಿ,ಸಿದ್ಧತೆಗಳನ್ನು ಪರಶೀಲನೆ ಮಾಡುತ್ತಿದ್ದು ಅಧಿವೇಶನದಲ್ಲಿ ಯಾವುದೇ ರೀತಿಯ ಕೊರತೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ.

ಅಧಿವೇಶನದ ತಯಾರಿ ಮಾಡಲು ಬಹುತೇಕ ಎಲ್ಲ ಇಲಾಖೆಗಳ ಅಧಿಕಾರಿಗಳು ಫೀಲ್ಡ್ ಗೆ ಇಳಿದಿದ್ದಾರೆ.ಸುವರ್ಣವಿಧಾನಸೌಧದ ಅಂಗಳದಲ್ಲಿ ಈಗಿನಿಂದಲೇ ಅಧಿವೇಶನದ ಭರಾಟೆ ಕಾಣುತ್ತಿದೆ.ಸ್ವಚ್ಛತಾ ಕಾರ್ಯಗಳು ನಡೆದಿವೆ.ಸೌಧದ ಎದುರಿನ ಗಾರ್ಡನ್ ದಲ್ಲಿ ಇನ್ನಷ್ಟು ಹೂವಿನ ಗಿಡಗಳನ್ನು ಹಚ್ಚಿ ಮೇಕಪ್ ಮಾಡಲಾಗುತ್ತಿದೆ.ಬಂದೋಬಸ್ತಿಗೆ ಬರುವ ಪೋಲೀಸರಿಗೆ ಊಟ ವಸತಿ ಒದಗಿಸಲು ವಿಶೇಷ ಕಾಳಜಿ ವಹಿಸಲಾಗಿದೆ. ಪ್ರತಿಭಟನಾಕಾರರಿಗೆ ಸ್ಥಳಾವಕಾಶ ಮಾಡಿ ಕೊಡಲಾಗುತ್ತಿದೆ. ಇಷ್ಟೆಲ್ಲಾ ತಯಾರಿ ಬೆಳಗಾವಿಯಲ್ಲಿ ನಡೆಯುತ್ತಿದೆ.

ಹತ್ತು ದಿನಗಳ ಕಾಲ ಬೆಳಗಾವಿ ಮಹಾನಗರದಲ್ಲಿ ಗಣ್ಯರ ಓಡಾಟ,ಸೈರನ್ ಸದ್ದು,ಮಂತ್ರಿಗಳ ಸಂಚಾರದಿಂದ ಬೆಳಗಾವಿಯಲ್ಲಿ ಹತ್ತು ದಿನಗಳ ಕಾಲ ರಾಜ ಪರ್ವ.ಸೌಧದಲ್ಲಿ ಸುವರ್ಣಪರ್ವ ನೋಡಲು ಸಿಗಲಿದೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *