ಬೆಳಗಾವಿ- ಬೆಳಗಾವಿ ಮಹಾನಗರದಲ್ಲಿ ಭಾಷಾವೈಷಮ್ಯದ ವಿಷಬೀಜ ಬಿತ್ತಿ,ರಾಜಕೀಯ ಮಾಡುತ್ತ ಬಂದಿರುವ ನಾಡದ್ರೋಹಿ ಎಂಇಎಸ್ ಈಗ ಬೆಳಗಾವಿಯಲ್ಲಿ ಡಿಸೆಂಬರ್ 4 ರಿಂದ ನಡೆಯುತ್ತಿರುವ ಚಳಿಗಾಲದ ಅಧಿವೇಶನಕ್ಕೆ ಪ್ರತಿಯಾಗಿ ಮರಾಠಿ ಮಹಾ ಮೇಳಾವ್ ನಡೆಸಲು ನಿರ್ಧರಿಸಿದೆ.
ಒಂದುಕಡೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನದ ಸಿದ್ಧತೆ ನಡೆಸಿದ್ರೆ ಇನ್ನೊಂದು ಕಡೆ ಎಂಇಎಸ್ ಕಿರಿಕ್ ಶುರುವಾಗಿದೆ.ಅಧಿವೇಶನಕ್ಕೆ ಪ್ರತಿಯಾಗಿ ಮರಾಠಿ ಮಹಾಮೇಳಾವ್ ನಡೆಸಲು ನಿರ್ಧರಿಸಿರುವ ಎಂಇಎಸ್ ನಾಯಕರು ಅದಕ್ಕಾಗಿ ಖಾನಾಪೂರ ಮತ್ತು ಬೆಳಗಾವಿಯಲ್ಲಿ ಸಮೀತಿಗಳನ್ನು ರಚಿಸಿ ಮೇಳಾವ್ ನಡೆಸುವದಾಗಿ ಮಾದ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.
ಮರಾಠಿ ಮೇಳಾವ್ ನಡೆಸುವ ದಿನಾಂಕ ಮತ್ತು ಸ್ಥಳವನ್ನು ಇನ್ನುವರೆಗೆ ನಿಗದಿ ಮಾಡಿಲ್ಲ.ಶೀಘ್ರದಲ್ಲೇ ದಿನಾಂಕ ಮತ್ತು ಸ್ಥಳವನ್ನು ನಿಗದಿ ಮಾಡುವದಾಗಿ ಎಂಇಎಸ್ ಮುಖಂಡ ಮಾಲೋಜಿರಾವ್ ಅಷ್ಡೇಕರ್ ಹೇಳಿದ್ದಾರೆ.
ಕಳೆದ ಬಾರಿ ಬೆಳಗಾವಿ ಅಧಿವೇಶನದ ಸಂಧರ್ಭದಲ್ಲಿ ಎಂಇಎಸ್ ಮೇಳಾವ್ ನಡೆಸಲು ಮುಂದಾಗಿತ್ತು ಆದ್ರೆ ಸರ್ಕಾರ ಅದಕ್ಕೆ ಅನುಮತಿ ನೀಡಿರಲಿಲ್ಲ.ಅಂದಿನ ಡಿಐಜಿ ಆಗಿದ್ದ ಅಲೋಕ ಕುಮಾರ್ ಅವರು ಎಂಇಎಸ್ ಮೇಳಾವ್ ಗೆ ಬ್ರೇಕ್ ಹಾಕಿದ್ದರು.