ಬೆಳಗಾವಿ- ಬೆಳಗಾವಿ ನಗರ ಮತ್ತು ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ರೈಲು ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ನಡೆಸುವಂತೆ ಬೆಳಗಾವಿ ಸಂಸದೆ ಮಂಗಲಾ ಅಂಗಡಿ ಅವರು ಇಂದು ದೆಹಲಿಯ ರೈಲು ಭವನದಲ್ಲಿ ಕೇಂದ್ರದ ರೈಲು ಮಂತ್ರಿಗಳನ್ನು ಭೇಟಿಯಾಗಿ ಮನವಿ ಮಾಡಿಕೊಂಡರು.
ಬೆಳಗಾವಿಯ ತಿಲಕವಾಡಿಯ ರೇಲ್ವೆ ಮೂರನೇಯ ಗೇಟ್ ಬಳಿ ನಿರ್ಮಿಸುತ್ತಿರುವ ರೇಲ್ವೆ ಮೇಲ್ಸೆತುವೆ ಕಾಮಗಾರಿ ಏಕಪಥದ ಸೇತುವೆ ಕಾಮಗಾರಿ ಮುಕ್ತಾಯವಾಗಿದ್ದು ಇನ್ನೊಂದು ಪಥದ ಸೇತುವೆಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು.ಈ ಕಾಮಗಾರಿ ವಿಳಂಬದಿಂದ ನಗರದಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತಿದೆ.ಎಂದು ಎಂಪಿ ಮಂಗಲಾ ಅಂಗಡಿ ಅವರು, ಕೇಂದ್ರದ ರೇಲ್ವೆ ಸಚಿವ ಅಶ್ವಿನ್ ವೈಷ್ಣವ ಅವರ ಗಮನಕ್ಕೆ ತಂದರು.
ಧಾರವಾಡ- ಕಿತ್ತೂರು- ಬೆಳಗಾವಿ ಹೊಸ ರೈಲು ಮಾರ್ಗದ ಕಾಮಗಾರಿ ಆರಂಭಗೊಂಡಿದ್ದು,ಈ ಕಾಮಗಾರಿಯನ್ನು ಸಮರೋಪಾದಿಯಲ್ಲಿ ನಡೆಸಿ,ಈ ಕಾಮಗಾರಿಯನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸುಂತೆ ಮನವಿ ಮಾಡಿಕೊಂಡ ಮಂಗಲಾ ಅಂಗಡಿ,ಪಂಡರಪೂರ,ಮತ್ತು ಶಿರಡಿ ಪುಣ್ಯಕ್ಷೇತ್ರಗಳಿಗೆ ಹೋಗಲು ಬೆಳಗಾವಿಯ ಭಕ್ತರಿಗೆ ಅನಕೂಲವಾಗುವಂತೆ ಬೆಳಗಾವಿ-ಸಂಕೇಶ್ವರ-ಕೊಲ್ಹಾಪೂರದವರೆಗೆ ಹೊಸ ರೈಲು ಮಾರ್ಗ ನಿರ್ಮಿಸಿ ಈ ಮಾರ್ಗದಿಂದ ಪಂಡರಪೂರ ಮತ್ತು ಶಿರಡಿಯವರೆಗೆ ರೈಲು ಸಂಚಾರವನ್ನು ಆರಂಭಿಸುವಂತೆ ಮಂಗಲಾ ಅಂಗಡಿ ಕೇಂದ್ರ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈಗ ಸದ್ಯಕ್ಕೆ ಬೆಳಗಾವಿ-ಪೂನಾ,ಮತ್ತು ಬೆಳಗಾವಿ ಕೊಚ್ಛಿ ನಡುವೆ ಹೊಸ ರೈಲು ಸಂಚಾರ ಆಂಭಿಸುವಂತೆ ಮನವಿ ಮಾಡಿಕೊಳ್ಳಲಾಗಿದೆ.