ಬೆಳಗಾವಿ- ಬೆಳಗಾವಿ ತಾಲ್ಲೂಕಿನ ವಂಟಮೂರಿ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಮಹಿಳೆಯನ್ನು ವಿವಸ್ತ್ರಗೊಳಿಸಿದ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಗಣಿಸಿದೆ.ಈಗಾಗಲೇ ಈ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳನ್ನು ಬಂಧಿಸಲಾಗಿದ್ದು,ಸಂತ್ರಸ್ತ ಮಹಿಳೆಗೆ ಸರ್ಕಾರ ಐದು ಲಕ್ಷರೂ ಪರಿಹಾರ ಘೋಷಿಸಿದ್ದು ಈ ಪ್ರಕರಣದಲ್ಲಿ ನಿರ್ಲಕ್ಷ್ಯ ಮಾಡಿದ ಕಾರಣ ಕಾಕತಿ ಠಾಣೆಯ ಪಿಎಸ್ಐ ಯನ್ನು ಅಮಾನತು ಮಾಡಲಾಗಿದೆ.
ಕಾಕತಿ ಪಿಐ ವಿಜಯಕುಮಾರ ಸಿನ್ನೂರ ಅಮಾನತು ಮಾಡಲಾಗಿದೆ.ಮಹಿಳೆ ವಿವಸ್ತ್ರ ಪ್ರಕರಣ ಕೊನೆಗೂ ಬೇಜವಾಬ್ದಾರಿತನ ತೋರಿದ್ದ ಪಿಐ ಸಸ್ಪೆಂಡ್ ಆಗಿದ್ದು,ವಂಟಮೂರಿ ಪ್ರಕರಣದಲ್ಲಿ ಪೊಲೀಸ್ ಇಲಾಖೆಗೆ ಹೈಕೋರ್ಟ್ ಚಾಟಿ ಬಿಸಿದೆ.ಕಾಕತಿ ಪಿಐ ವಿಜಯಕುಮಾರ ಸಿನ್ನೂರ ಒಬ್ಬ ಪೊಲೀಸ್ ಅಧಿಕಾರಿಯಾಗಿ ಜವಾಬ್ದಾರಿಯುತವಾಗಿ ನಡೆದುಕೊಳ್ಳದ ಹಿನ್ನಲೆಯಲ್ಲಿ,ಉದ್ದೇಶ ಪೂರ್ವಕವಾಗಿ ಬೇಜವಾಬ್ದಾರಿ ತೋರಿಸಿದ್ದಕ್ಕೆ ಅವರನ್ನು ಕರ್ತವ್ಯ ಲೋಪ ಎಸಗಿದ ಆರೋಪದ ಮೇಲೆ ಸೇವೆಯಿಂದ ಅಮಾನತ್ತು ಮಾಡಲಾಗಿದೆ.
ಈ ಪ್ರಕರಣದಲ್ಲಿ ಪೊಲೀಸರು ಸರಿಯಾಗಿ ಕೆಲಸ ಮಾಡಿದ್ದರೆ ಈ ಪ್ರಕರಣ ದೊಡ್ಡದಾಗಿ ಆಗುತ್ತಿರಲಿಲ್ಲ ಎಂದು ಪೊಲೀಸ್ ಇಲಾಖೆಗೆ ಹೈಕೋರ್ಟ್ ಚಾಟಿಬಿಸಿದೆ.ಅಧಿಕಾರಿಯ ಕರ್ತವ್ಯಲೋಪದ ಬಗ್ಗೆ ವರದಿ ಕೂಡಾ ಹೈಕೊರ್ಟ ಕೇಳಿತ್ತು. ಇದರಿಂದಾಗಿ ಇಲಾಖೆಗೆ ಕಳಂಕ ಬಂದ ಹಿನ್ನಲೆಯಲ್ಲಿ ಉದ್ದೇಶ ಪೂರ್ವಕವಾಗಿ ಬೇಜವಾಬ್ದಾರಿ ತೋರಿದ್ದ ಅಧಿಕಾರಿ.ಕಾಕತಿ ಪಿಐ ಸಿನ್ನೂರ ಅವರನ್ನು ಅಮಾನತ್ತು ಮಾಡಲಾಗಿದೆ ಎಂದು ತಿಳಿದು ಬಂದಿದೆ.