ಬೆಳಗಾವಿ-ಟ್ರ್ಯಾಕ್ಟರ್ ಚಾಲಕನ ಹುಚ್ಚಾಟಕ್ಕೆ 14 ತಿಂಗಳ ಮಗು ಬಲಿಯಾದ ಘಟನೆ,ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ತೊಲಗಿ ಗ್ರಾಮದಲ್ಲಿ ನಡೆದಿದೆ.
ಮನೆ ಮುಂದೆ ಆಟ ಆಡುತ್ತಿದ್ದ ವಿಕ್ರಂ ಚಂದ್ರಶೇಖರ ನಾಯ್ಕರ್ (14) ಟ್ರ್ಯಾಕ್ಟರ ಹರಿದು ಸಾವನ್ನೊಪ್ಪಿದ್ದಾನೆ.ಸೌಂಡ್ ಹಚ್ಚಿಕೊಂಡು ವೇಗವಾಗಿ ಟ್ರ್ಯಾಕ್ಟರ್ ಚಲಾವಣೆ ಮಾಡುವಾಗ,ಮನೆ ಮುಂದೆ ಆಟ ಆಡುತ್ತಿದ್ದ ಮಗು ಮೇಲೆ ಟ್ರ್ಯಾಕ್ಟರ್ ಹಾಯ್ದು ಮಗು ಚಾಲಕನ ಹುಚ್ಚಾಟಕ್ಕೆ ಬಲಿಯಾಗಿದೆ.
ಚಾಲಕ ಯುವರಾಜ ರಂಗನ್ನವರ ಹುಚ್ಚಾಟಕ್ಕೆ ಉಸಿರು ಚೆಲ್ಲಿದ 14 ತಿಂಗಳ ಪುಟ್ಟ ಮಗು,ತಕ್ಷಣವೇ ಮಗುವನ್ನು ಗಮನಿಸಿದ ಆಸ್ಪತ್ರೆಗೆ ಕರೆದೊಯ್ದ ಕುಟುಂಬಸ್ಥರು,ಆಸ್ಪತ್ರೆಗೆ ಸಾಗಿಸುವ ಮುನ್ನವೇ ಮಾರ್ಗಮಧ್ಯೆ ಬಾಲಕ ವಿಕ್ರಮ ಮೃತಪಟ್ಟಿದ್ದಾನೆ.ಖಾನಾಪುರ ತಾಲೂಕಿನ ನಂದಗಡ ಠಾಣೆಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
