ಬೆಳಗಾವಿ-ಕಳ್ಳರ ಹಾವಳಿಗೆ ಕುಂದಾನಗರಿ ಬೆಳಗಾವಿ ಬೆಚ್ಚಿದೆ.ನಿರಂತರ ಸರಣಿ ಕಳ್ಳತನ ಪ್ರಕರಣಕ್ಕೆ ಹೈರಾಣಾದ ಬೆಳಗಾವಿ ಜನತೆ ಸ್ವಯಂ ರಕ್ಷಣೆಗೆ ಮುಂದಾಗಿದ್ದಾರೆ.
ಕಳ್ಳರ ಹಾವಳಿಯಿಂದ ರಕ್ಷಿಸಿಕೊಳ್ಳಲು ಕೈಯಲ್ಲಿ ಕೋಲು,ದೊಣ್ಣೆ ಹಿಡಿದು ಬೆಳಗಾವಿಯ ಜನ ಅಹೋರಾತ್ರಿ ಗಸ್ತು ಶುರು ಮಾಡಿದ್ದಾರೆ.ಸ್ವಯಂ ರಕ್ಷಣೆಗಾಗಿ ದೊಣ್ಣೆ,ಕುಡಗೋಲು, ಕಬ್ಬಿನದ ಸಲಾಕೆ ಹಿಡಿದುಕೊಂಡು ಕಾಲೋನಿಯಲ್ಲಿ ಕಾವಲು ಕಾಯ್ತಿದ್ದಾರೆ.ನಿರಂತರ ಕಳ್ಳತನ ಪ್ರಕರಣಕ್ಕೆ ಬೇಸತ್ತ ಸಾರ್ವಜನಿಕರು ಕೈಯಲ್ಲಿ ಕೋಲು ಹಿಡಿದಿದ್ದಾರೆ.
ಕಳೆದ ಮೂರು ದಿನಗಳಲ್ಲಿ 14ಕಳ್ಳತನ ಪ್ರಕರಣ ಬೆಳಕಿಗೆ ಬಂದಿವೆ.ಬೆಳಗಾವಿಯ ಪಾರಿಜಾತ ನಗರ, ಸಮೃದ್ಧಿ ನಗರ, ಸಾಯಿ ಕಾಲೋನಿ, ಆನಂದ ನಗರ,ಕೇಶವ ನಗರ,ವಡಗಾಂವ, ಅಂಬೇಡ್ಕರ್ ನಗರ ಕನಕದಾಸ ಕಾಲೋನಿ ಸೇರಿ ಹಲವೆಡೆ ಕಳ್ಳತನ ಪ್ರಕರಣಗಳು ನಡೆದಿವೆ.
ಒಬ್ಬನೇ ಆರೋಪಿ ಕಳ್ಳತನ ಮಾಡುತ್ತಿರುವ ಶಂಕೆ ವ್ಯಕ್ತವಾಗಿದೆ.ಕಳೆದೆರೆಡು ದಿನಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿರುವ ಖದೀಮ, ಈವರೆಗೆ ಅಂದಾಜು 30ಲಕ್ಷಕ್ಕೂ ಅಧಿಕ ಹಣ, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾನೆ. ಈ ಕಳ್ಳ,ಪೊಲೀಸರಿಗೂ ಸವಾಲಾಗಿದ್ದಾನೆ.ಸದ್ಯ ಕಳ್ಳನ ಬಂಧನಕ್ಕೆ ವಿಶೇಷ ತಂಡ ರಚಿಸಿ ಬೆಳಗಾವಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.ಎಸಿಪಿ ಸದಾಶಿವ ಕಟ್ಟಿಮನಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.ಬೆಳಗಾವಿ ಟಿಳಕವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ ಘಟನೆ ನಡೆದಿದೆ.