ಬೆಳಗಾವಿ-ಚಾರಣಕ್ಕೆ ಹೋಗಿ ಕಾಡಿನಲ್ಲಿ ಕಣ್ಮರೆಯಾಗಿದ್ದ ಬೆಳಗಾವಿಯ ಜಿಎಸ್ಎಸ್ ಕಾಲೇಜಿನ ಒಂಬತ್ತು ಜನ ವಿದ್ಯಾರ್ಥಿಗಳನ್ನು ಅರಣ್ಯ ಇಲಾಖೆಯ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದೆ.
ಬೆಳಗಾವಿಯ ಜಿಎಸ್ಎಸ್ ಕಾಲೇಜಿನ 9 ವಿದ್ಯಾರ್ಥಿಗಳು ಚಾರಣಕ್ಕೆ ಹೋಗಿ ಶುಕ್ರವಾರ ರಾತ್ರಿ ಕಣ್ಮರೆಯಾಗಿದ್ದರು ಕಾಡಿ ನಲ್ಲಿ ಹಾದಿ ತಪ್ಪಿಸಿಕೊಂಡು ಕಾಡಿನಲ್ಲೇ ಸಿಲುಕಿದ್ದ ಒಂಬತ್ತು ಜನ ವಿಧ್ಯಾರ್ಥಿಗಳು ಶನಿವಾರ ಬೆಳಗ್ಗೆ ಸುರಕ್ಷಿತವಾಗಿ ಪ್ರತ್ಯಕ್ಷರಾಗಿದ್ದಾರೆ.
ಕರ್ನಾಟಕ-ಗೋವಾ ಗಡಿಭಾಗದಲ್ಲಿರುವ ಜಾವಾಣಿ ಫಾಲ್ಸ್ ನೋಡಲು ವಿದ್ಯಾರ್ಥಿಗಳು ಹೋಗಿದ್ದರು.ಕಣಕುಂಬಿ ಅರಣ್ಯ ಪ್ರದೇಶದ ಮೂಲಕ ಜಾವಾಣಿ ಫಾಲ್ಸ್ ನೋಡಲು ಹೋದವರು ಕಣ್ಮರೆಯಾಗಿದ್ದರು.ಜಾವಾಣಿ ಜಲಪಾತ,ಪಾರವಾಡ ಗ್ರಾಮದಿಂದ ಮೂರು ಕಿ.ಮೀ ದೂರದಲ್ಲಿದೆ ವಿಧ್ಯಾರ್ಥಿಗಳು ಬೈಕ್ ಮೇಲೆ ಪಾಲ್ಸ್ ಗೆ ತೆರಳಿದ್ದರು.ಬಳಿಕ ಕಾಲು ದಾರಿಯಲ್ಲೇ ಜಾವಾಣಿ ಫಾಲ್ಸ್‌ವರೆಗೆ ಹೋಗಿ ಎಂಜಾಯ್ ಮಾಡಿದ್ದ ಯುವಕರು,ಸಂಜೆಯ ಹೊತ್ತಿಗೆ ಮರಳಿ ಬರುವಾದ ದಾರಿ ಗೊತ್ತಾಗದೇ ದಟ್ಟ ಕಾಡಿನಲ್ಲೇ ಯುವಕರು ಕಣ್ಮರೆಯಾಗಿದ್ದರು.
ತಕ್ಷಣವೇ ಫೋನ್ ಮೂಲಕ ಕಾಡಿನಲ್ಲಿ ಕಣ್ಮರೆಯಾಗಿರುವ ಮಾಹಿತಿ ಸ್ನೇಹಿತರಿಗೆ ರವಾನೆ ಮಾಡಿದ್ದರು.ನಂತರ ರಾತ್ರಿಯಿಡಿ ಕರ್ನಾಟಕ ಹಾಗೂ ಗೋವಾ ಅರಣ್ಯ ಇಲಾಖೆ ಸಿಬ್ಬಂದಿ ಜಂಟಿ ಕಾರ್ಯಾಚರಣೆ ಶುರು ಮಾಡಿದ್ದರು.ರಾತ್ರಿ 8 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ 30 ಸಿಬ್ಬಂದಿಯಿಂದ ಕಾರ್ಯಾಚರಣೆ ನಡೆದಿತ್ತು.ನಂತರ ವಿದ್ಯಾರ್ಥಿಗಳನ್ನು ರಕ್ಷಿಸಿ ಸುರಕ್ಷಿತವಾಗಿ ಅರಣ್ಯ ಇಲಾಖೆಯ ತಂಡ ಹೊರಗೆ ಕರೆತಂದಿದ್ದಾರೆ.
ಖಾನಾಪುರ ಎಸಿಎಫ್ ಸಂತೋಷ ಚಹ್ವಾನ್ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆದಿತ್ತು.ಕಣಕುಂಬಿ ಆರ್‌ಎಫ್‌ಒ ಶಿವಕುಮಾರ್, ಭೀಮಗಡ ಆರ್‌ಎಫ್ಒ ರಾಕೇಶ,ಖಾನಾಪುರ ಆರ್‌ಎಫ್ಒ ನಾಗರಾಜ, ಡಿಆರ್‌ಎಫ್‌ಒ ವಿನಾಯಕ ಪಾಟೀಲ,ಗೋವಾದ ಮಹಾದಾಯಿ ವೈಲ್ಡ್ ಲೈಫ್ ಡಿಎಫ್‌ಒ ಆನಂದ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿತ್ತು. ಅಕ್ರಮ ಅರಣ್ಯ ಪ್ರದೇಶ ಪ್ರವೇಶ ಆರೋಪದಡಿ ಗೋವಾ ಅರಣ್ಯ ಇಲಾಖೆಯಿಂದ ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲು ದಾಖಲಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ