ಗಾಯಗೊಂಡಿರುವ ಅಂಗನವಾಡಿ ಸಹಾಯಕಿ….
ಆರೋಪಿ ……..
ಬೆಳಗಾವಿ ವಂಟಮೂರಿ ಗ್ರಾಮದಲ್ಲಿ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು ಅಂಗನವಾಡಿ ಮಕ್ಕಳು ಹೂವು ಕಿತ್ತಿದ್ದಾರೆ ಎಂದು ಅಂಗನವಾಡಿ,ಸಹಾಯಕಿ ಮೇಲೆ ರಾಕ್ಷಸಿ ವರ್ತನೆ ತೋರಿದ ದುಷ್ಟ ಆಕೆಯ ಮೂಗನ್ನೆ ಕತ್ತರಿಸಿದ ಘಟನೆ ನಡೆದಿದೆ.
ಬೆಳಗಾವಿ ತಾಲೂಕಿನ ಬಸುರ್ತೆ ಗ್ರಾಮದಲ್ಲಿ ಈ ನಡೆದ ಘಟನೆ.ಅಂಗನವಾಡಿ ಸಹಾಯಕಿ
ಸುಗಂಧಾ ಮೋರೆ(50) ಸಾವು ಬದುಕಿನ ಮಧ್ಯೆ ನರಳಾಡುತ್ತಿದ್ದಾರೆ. ಅಂಗನವಾಡಿ ಮಕ್ಕಳು ಪಕ್ಕದ ಮನೆಯಲ್ಲಿ ಹೂ ಕಿತ್ತರೂ ಎಂದು ಅಂತಾ ಮೂಗು ಕಿತ್ತು ಅಟ್ಟಹಾಸ ಮೆರದಿದ್ದಲ್ಲದೆ, ಅಂಗನವಾಡಿ ಸಹಾಯಕಿಗೆ ಥಳಿಸಿ ಕುಡಗೋಲಿನಿಂದ ಮಾರಣಾಂತಿಕ ಹಲ್ಲೆ ಮಾಡಿ ಬಳಿಕ ಮೂಗು ಕಟ್ ಆಗಿ ಶ್ವಾಸಕೋಶದಲ್ಲಿ ರಕ್ತ ಹೋಗಿ ಅಂಗನವಾಡಿ ಸಹಾಯಕಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಮಕ್ಕಳು ಆಡವಾಡುತ್ತ ಮಲ್ಲಿಗೆ ಹೂ ಕಿತ್ತಿದ್ದಕ್ಕೆ ಅಂಗನವಾಡಿ ಸಹಾಯಕಿ ಮೇಲೆ ಹಲ್ಲೆ ಮಾಡಿದ್ದಾರೆ.
ಮಕ್ಕಳ ಮಾಡಿದ ತಪ್ಪಿಗೆ ಸಹಾಯಕಿಗೆ ಮಹಿಳೆ ಅನ್ನೋದನ್ನೂ ಮರೆತು ಹಲ್ಲೆ ಮಾಡಿದ ಪಾಪಿಗಳು ಅದೇ ಗ್ರಾಮದ ಕಲ್ಯಾಣಿ ಮೋರೆ ಎಂಬಾತನಿಂದ ದುಷ್ಕೃತ್ಯ ಮಾಡಿದ್ದಾನೆ. ಜ.1ರಂದು ಅಂಗನವಾಡಿ ಕೇಂದ್ರದ ಮುಂದೆ ಈ ಘಟನೆ ನಡೆದಿದೆ.
ದಿನೇ ದಿನೇ ಹೆಚ್ಚುತ್ತಿರುವ ರಾಕ್ಷಸಿ ವರ್ತನೆ ಕಂಡು ಬೆಚ್ಚಿ ಬಿದ್ದ ಬೆಳಗಾವಿ ಜನರು. ಮೂಗ ಗಂಡನನೊಂದಿಗೆ ಅಂಗನವಾಡಿ ಸಹಾಯಕಿಯಾಗಿ ಜೀವನ ಕಟ್ಟಿಕೊಳ್ಳುತ್ತಿದ್ದ ಮಹಿಳೆ.
ಸದ್ಯ ಬೆಳಗಾವಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.ಈ ಕುರಿತು ಕಾಕತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆದರೂ ಇಲ್ಲಿಯ ವರೆಗೂ ಅರೋಪಿ ಕಲ್ಯಾಣಿ ಬಂಧಿಸದ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ..
ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಹಲ್ಲೆಗೊಳಗಾದ ಅಂಗನವಾಡಿ ಸಹಾಯಕಿಯ ರಕ್ಷಣೆಗೆ ಧಾವಿಸುವದು ಅಗತ್ಯವಾಗಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ

