ಬೆಳಗಾವಿ-ಬೆಳಗಾವಿಯ ಮ್ಯಾಂಗೋ ನೆನಪು ಮಾಡಿದ್ರೆ ಸಾಕು ಬಾಯಲ್ಲಿ ನೀರು ಬರುತ್ತೆ,ಪಕ್ಕದ ರತ್ನಾಗಿರಿ ಆಫುಸ್ ಮಾವು ಈಗ ಬೆಳಗಾವಿ ಮಾರುಕಟ್ಟೆಗೆ ಬಂದಿದೆ ಒಂದು ಡಝನ್ ಆಫುಸ್ ಬಾಕ್ಸ್ 7200 ₹ ಗೆ ಮಾರಾಟವಾಗಿದೆ.
ಬೆಳಗಾವಿ ಫ್ರುಟ್ ಮಾರ್ಕೆಟ್ಟಿನ ಮಾವಿನ ಹಣ್ಣಿನ ಮಾರಾಟಗಾರ ದೇಸಾಯಿ ಹಾಗೂ ಅಕ್ಷಯ ಚವ್ಹಾಣ ಮತ್ತು ಅಬ್ದುಲ್ ಭಾಯಿ ಅವರ ಅಂಗಡಿಗಳಲ್ಲಿ ಆಪುಸು ಮಾವಿನ ಪರಿಮಳ ಘಮಘಮಿಸುತ್ತಿದೆ. ಮಾರುಕಟ್ಟೆಗೆ ಈಗ ಮಾವು ಬರೋದು ಶುರುವಾಗಿದೆ.
ಬೆಳಗಾವಿ ಮಾರುಕಟ್ಟೆಗೆ ಬಂದಿರುವ ಹಣ್ಣುಗಳ ರಾಜ ಆಫುಸು ಮಾವಿನ ಬಾಕ್ಸ್ ಗಳಿಗೆ ಗುಲಾಬಿ ಹೂವಿನಿಂದ ಅಲಂಕರಿಸಿ ಈ ಮಾವಿನ ಬಾಕ್ಸ್ ಗಳನ್ನು ಸವಾಲು ಮಾಡುತ್ತಾರೆ ಆರು ಮಾವಿನ ಹಣ್ಣುಗಳನ್ನು ಹೊಂದಿದ ಒಂದು ಬಾಕ್ಸ್ 3600 ಗೆ ಮಾರಾಟವಾಗಿದೆ. ಅಂದ್ರೆ ಒಂದು ಡಝನ್ ಮಾವಿನ ದರ 7200 ₹
ಬರ್ತಾ ಬರ್ತಾ ಮಾವಿನ ದರ ಇಳಿಯುತ್ತದೆ ಈ ಬಾರಿ ಮಾವಿನ ಇಳುವರಿ ಹೆಚ್ಚಾಗಿದೆ.ಮಾವಿನ ಮರಗಳು ಈ ಬಾರಿ ದಾಖಲೆ ಪ್ರಮಾಣದಲ್ಲಿ ಹೂವು ಬಿಟ್ಟಿವೆ. ಹೀಗಾಗಿ ಮಾವು ಈಬಾರಿ ಕೈಗೆಟಕುವ ದರದಲ್ಲಿ ಸಿಗಲಿದೆ ಎನ್ನುವ ವಿಶ್ವಾಸ ವ್ಯಕ್ತವಾಗಿದೆ.
ಬೆಳಗಾವಿ ಮಾರುಕಟ್ಟೆಗೆ ಪಕ್ಕದ ರತ್ನಾಗಿರಿ,ಮಾಲವನ್,ಸೇರಿದಂತೆ ಮಹಾರಾಷ್ಟ್ರದ ಉತ್ತಮ ತಳಿಯ ಮಾವಿನ ಹಣ್ಣು ಬೆಳಗಾವಿ ಮಾರುಕಟ್ಟೆಗೆ ಬರುತ್ತದೆ.