Breaking News

ಅವರು ದಾನ ಮಾಡಿದ್ದು 17 ಗುಂಟೆ, ಅದರ ಬೆಲೆ 5 ಕೋಟಿ….!!

*ಭೂ- ದಾನಿ ಮರೆಪ್ಪ ಅವರ ಕಾರ್ಯ ಶ್ಲಾಘನೀಯ- ಶಾಸಕ ಬಾಲಚಂದ್ರ ಜಾರಕಿಹೊಳಿ ಪ್ರಶಂಸೆ*

*ಮೂಡಲಗಿಯಲ್ಲಿ ಐದು ಕೋಟಿ ರೂಪಾಯಿ ವೆಚ್ಚದ ಚರ್ಚ್ ನಿರ್ಮಾಣಕ್ಕೆ ಗುದ್ದಲಿ ಪೂಜೆ ನೆರವೇರಿಸಿದ ಬಾಲಚಂದ್ರ ಜಾರಕಿಹೊಳಿ*

*ಚರ್ಚ್ ನಿರ್ಮಾಣಕ್ಕೆ ೧೭ ಗುಂಟೆ ನಿವೇಶನ ದಾನ ಮಾಡಿದ ಮರೆಪ್ಪ ಮರೆಪ್ಪಗೋಳ ದಂಪತಿ*

ಮೂಡಲಗಿ- ದಿನೇ ದಿನೇ ಅಭಿವೃದ್ಧಿ ಹೊಂದುತ್ತಿರುವ ಮೂಡಲಗಿಯಂತಹ ಪಟ್ಟಣ ಪ್ರದೇಶದಲ್ಲಿ ದುಡ್ಡು ನೀಡಿದರೂ ನಿವೇಶನಗಳು ಸಿಗದ ಇಂದಿನ ದಿನಗಳಲ್ಲಿ ಚರ್ಚ ನಿರ್ಮಾಣಕ್ಕೆ ೧೭ ಗುಂಟೆ ನಿವೇಶನವನ್ನು ದಾನ ಮಾಡಿ ಸಮಾಜಕ್ಕೆ ಮಾದರಿಯಾದ ಮರೆಪ್ಪ ಮರೆಪ್ಪಗೋಳ ಅವರ ಸಾಮಾಜಿಕ ಕಾರ್ಯಕ್ಕೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಪ್ರಶಂಸೆಯನ್ನು ವ್ಯಕ್ತಪಡಿಸಿದರು.

ಪಟ್ಟಣದ ರಾಜೀವ ಗಾಂಧಿ ನಗರದಲ್ಲಿ ಸುಮಾರು ೫ ಕೋ. ರೂ. ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಚರ್ಚ್ ನಿರ್ಮಾಣ ಕಾಮಗಾರಿಗೆ ಬುಧವಾರದಂದು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಸಾಮಾಜಿಕ ಕಳಕಳಿಯುಳ್ಳ ಮರೆಪ್ಪ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಅವರ ಕುಟುಂಬ ಸದಸ್ಯರನ್ನು ಅಭಿನಂದಿಸಿದರು.

ಮೂಡಲಗಿಯಲ್ಲಿ ಕ್ರೈಸ್ತ ಬಾಂಧವರು ಚರ್ಚ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗಿರುವ ಚರ್ಚ್ ಕಟ್ಟಡವನ್ನು ಮರು ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಇದಕ್ಕಾಗಿ ಸುಮಾರು ಐದು ಕೋ. ರೂ. ಗಳ ಕ್ರಿಯಾ ಯೋಜನೆಯನ್ನು ರೂಪಿಸಿದ್ದಾರೆ. ಇದರ ಜೊತೆಗೆ ಬಾಂಧವರ ಮದುವೆ ಮತ್ತು ಮತ್ತಿತರ ಕಾರ್ಯಕ್ರಮಗಳಿಗೆ ಅನುಕೂಲವಾಗಲು ಸಮುದಾಯ ಭವನವನ್ನು ನಿರ್ಮಿಸಲು ಮುಂದಾಗಿದ್ದಾರೆ. ಕ್ರೈಸ್ತ ಬಾಂಧವರ ಬೇಡಿಕೆಯಂತೆ ಈ ಮಹತ್ವಪೂರ್ಣ ಕಾಮಗಾರಿ ನಿರ್ಮಾಣಕ್ಕೆ ಸರಕಾರದಿಂದ ೩ ಕೋ. ರೂ. ಗಳನ್ನು ಬಿಡುಗಡೆ ಮಾಡಿಸಲಾಗುವುದು. ಈ ಸಂಬಂಧ ಈಗಾಗಲೇ ಸರಕಾರಕ್ಕೆ ಪತ್ರವನ್ನು ಬರೆದಿದ್ದು, ಲೋಕಸಭಾ ಚುನಾವಣೆಯ ಬಳಿಕ ಕಾಮಗಾರಿಗೆ ಅನುದಾನವು ಬಿಡುಗಡೆಯಾಗಲಿದೆ. ಉಳಿದ ಹಣವನ್ನು ಸಮಾಜ ಬಾಂಧವರು ವಂತಿಗೆಯ ಮೂಲಕ ಸಂಗ್ರಹಿಸಬೇಕೆಂದು ಅವರು ಹೇಳಿದರು.

ಎಲ್ಲ ಸಮುದಾಯಗಳು ಸಾಮಾಜಿಕ, ಶೈಕ್ಷಣಿಕ, ಆರ್ಥಿಕವಾಗಿ ಮುಂದೆ ಬರಬೇಕಿದೆ. ಕ್ಷೇತ್ರದಲ್ಲಿ ಶಿಕ್ಷಣದ ಅಮೂಲಾಗ್ರ ಬದಲಾವಣೆಗೆ ನಿರಂತರವಾಗಿ ಶ್ರಮಿಸಲಾಗುತ್ತಿದೆ. ಈ ಬಾಂಧವರು ಸಹ ತಮ್ಮ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡಿ ಸಮಾಜದಲ್ಲಿ ಮುಂದೆ ಬರುವಂತೆ ಕೋರಿಕೊಂಡರು.
ನಮ್ಮ ಕ್ಷೇತ್ರದಲ್ಲಿ ಎಲ್ಲ ಸಮಾಜಗಳ ಪರಸ್ಪರ ಸಹೋದರತ್ವ ಮನೋಭಾವನೆಯಿಂದ ಬಾಳುತ್ತಿದ್ದಾರೆ. ಸಾಮರಸ್ಯವನ್ನು ಕಾಪಾಡುವ ಮೂಲಕ ಇತರರಿಗೆ ಮಾದರಿಯಾಗುವ ಕೆಲಸಗಳನ್ನು ಮಾಡುತ್ತಿದ್ದಾರೆ. ಅರಭಾವಿ ಕ್ಷೇತ್ರದಂತಹ ಮತದಾರರನ್ನು ಪಡೆದಿರುವುದು ನಾನೇ ಪುಣ್ಯವಂತನೆಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮೂಡಲಗಿ ಚರ್ಚ್ ಸಭಾ ಪಾಲಕ ರೇ. ವಿಜಯಕುಮಾರ, ಭೂ- ದಾನಿ ಮರೆಪ್ಪ ಮರೆಪ್ಪಗೋಳ, ಚಾರ್ಟರ್ಡ್ ಅಕೌಂಟೆಂಟ್ ಸೈದಪ್ಪ ಗದಾಡಿ,
ರವೀಂದ್ರ ಸಣ್ಣಕ್ಕಿ, ರಮೇಶ ಸಣ್ಣಕ್ಕಿ, ರವೀಂದ್ರ ಸೋನವಾಲ್ಕರ, ಪ್ರಭಾಕರ, ಬಂಗೆನ್ನವರ,ಹಣಮಂತ ಹವಳೆಪ್ಪಗೋಳ,ಸಂತೋಷ ಸೋನವಾಲಕರ, ಎಬೇಜೆನರ್ ಕರಬನ್ನವರ, ಹಣಮಂತ ಗುಡ್ಲಮನಿ, ವಿಜಯ ಮೂಡಲಗಿ, ಡಾ. ವೀಣಾ ಕನಕರೆಡ್ಡಿ, ಗಿರೀಶ ಢವಳೇಶ್ವರ, ಡಾ. ಎಸ್.ಎಸ್ ಪಾಟೀಲ, ಡಾ. ಅನೀಲ ಪಾಟೀಲ, ಈರಪ್ಪ ಬನ್ನೂರ, ಅನ್ವರ ನದಾಫ, ರಾಮಣ್ಣ ಬಂಗೆನ್ನವರ, ಸುಭಾಸ ಸಣ್ಣಕ್ಕಿ, ಸಚಿನ್ ಸೋನವಾಲಕರ,
ಶಾಬು ಸಣ್ಣಕ್ಕಿ,ಎಡ್ವಿನ್ ಪರಸನ್ನವರ, ಗಂಗಪ್ಪ ಮೇತ್ರಿ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Check Also

ವೆಲ್ಡಿಂಗ್ ಕಾರ್ಮಿಕನ ಮಗ ಲಕ್ ಪತಿ ಆಗಿದ್ದು ಹೇಗೆ ಎಲ್ಲಿ ಗೊತ್ತಾ…??

ಬಾಗಲಕೋಟೆ-ಸಾಧನೆಗೆ ಬಡತನ ಎಂದಿಗೂ ಅಡ್ಡಿಯಾಗದು. ಸತತ ಪ್ರಯತ್ನ, ಪರಿಶ್ರಮವಿದ್ದರೆ ಬೌದ್ಧಿಕ ಮಟ್ಟ ವೃದ್ಧಿಸಿಕೊಂಡು, ಎಂಥವರು ಸಾಧನೆ ಮಾಡಬಹುದು. ಜ್ಞಾನಕ್ಕೆ ಬೆಲೆ …

Leave a Reply

Your email address will not be published. Required fields are marked *