Breaking News

ಜಗದೀಶ್ ಶೆಟ್ಟರ್ ಗೆ, ಈಗ ಬೀಗರ ಕ್ಷೇತ್ರ ಬೆಳಗಾವಿಯೇ ಗತಿ…!!

ಬೆಳಗಾವಿ- ಬಿಜೆಪಿ ಮುಖಂಡ,ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರಿಗೆ ಧಾರವಾಡ ಅಥವಾ ಹಾವೇರಿಯಿಂದ ಲೋಕಸಭಾ ಕ್ಷೇತ್ರದಿಂದ ಸ್ಪರ್ದಿಸುವ ಒಲವು ಇತ್ತು,ಆದ್ರೆ ಈ ಎರಡೂ ಕ್ಷೇತ್ರಗಳಿಂದ ಬಿಜೆಪಿ ಅಭ್ಯರ್ಥಿಗಳು ಘೋಷಣೆಯಾಗಿದ್ದು ಜಗದೀಶ್ ಶೆಟ್ಟರ್ ಅವರಿಗೆ ಈಗ ಬೀಗರ ಕ್ಷೇತ್ರ ಬೆಳಗಾವಿಯೇ ಗತಿ ಎಂದು ಹೇಳಲಾಗುತ್ತಿದೆ.

ಜಗದೀಶ್ ಶೆಟ್ಟರ್ ಅವರು ಲೋಕಸಭೆಗೆ ಸ್ಪರ್ದೆ ಮಾಡುವದು ಖಚಿತವಾದ್ರೆ ಅವರಿಗೆ ಬೆಳಗಾವಿ ಕ್ಷೇತ್ರವೇ ಉಳಿದಿರುವ ದಾರಿ, ಅವರು ನಿಲ್ತಾರೋ ಅಥವಾ ಅವರ ಸೊಸೆ ಸುರೇಶ್ ಅಂಗಡಿ ಪುತ್ರಿ ಶ್ರದ್ಧಾ ಶೆಟ್ಟರ್ ಅವರನ್ನು ಕಣಕ್ಕಿಳಿಸಲು ಸಮ್ಮತಿ ನೀಡ್ತಾರೋ ಎನ್ನುವದು ನಿಗೂಢವಾಗಿದ್ದು ಈ ಕ್ಷೇತ್ರದ ಮೇಲೆ ಮಾಜಿ ಸಂಸದ ರಮೇಶ್ ಕತ್ತಿ, ಮಾಜಿ ಶಾಸಕ ಸಂಜಯ ಪಾಟೀಲ,ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ ಅವರು ಬೆಳಗಾವಿ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಪಡೆಯಲು ದೆಹಲಿಯಲ್ಲಿ ಎಲ್ಲಿಲ್ಲದ ಕಸರತ್ತು ನಡೆಸಿದ್ದಾರೆ.

ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯ ಘೋಷಣೆಯ ವಿಚಾರ ಈಗ ಬಿಜೆಪಿ ನಾಯಕರಿಗೆ ಕಗ್ಗಂಟಾಗಿದೆ,ಈ ಕ್ಷೇತ್ರದ ಅಭ್ಯರ್ಥಿ ಕೊನೆಯ ಘಳಿಗೆಯಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ ಅಲ್ಲಿಯವರೆಗೂ ಗುದ್ದಾಟ ಮುಂದುವರೆಯುವ ಲಕ್ಷಣಗಳು ಕಾಣಿಸುತ್ತಿವೆ.

ಬೆಳಗಾವಿಯ ಬಿಜೆಪಿ ನಾಯಕರು ಬೇರೆ ಜಿಲ್ಲೆಯ ಅಭ್ಯರ್ಥಿ ಬೇಡ, ಎನ್ನುವ ಬೇಡಿಕೆ ಇಟ್ಟಿರುವ ಬೆನ್ನಲ್ಲಿಯೇ ಮಾಜಿ ಮಂತ್ರಿ ಮುರುಗೇಶ್ ನಿರಾಣಿ ಅವರು ಬೆಳಗಾವಿ ಜಿಲ್ಲೆಗೆ ಎಂಟ್ರಿ ಹೊಡೆದಿದ್ದಾರೆ. ಅವರೂ ಸಹ ಬೆಳಗಾವಿ ಟಿಕೆಟ್ ಗಾಗಿ ದೆಹಲಿಯಲ್ಲಿ ಲಾಭಿ ನಡೆಸಿದ್ದಾರೆ.ಅವರ ಸಹೋದರ ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ ಅವರು ಬೆಳಗಾವಿ ಜಿಲ್ಲೆಯ ಬಿಜೆಪಿ ನಾಯಕರನ್ನು ಭೇಟಿಯಾಗಿ ಹೋಗಿದ್ದಾರೆ.

ಲಕ್ಷ್ಮೀ ಹೆಬ್ಬಾಳಕರ್ ಪುತ್ರ ಮೃನಾಲ ಹೆಬ್ಬಾಳಕರ್ ಅವರಿಗೆ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಘೋಷಣೆಯಾದ್ರೆ ಈ ಕ್ಷೇತ್ರದಿಂದ ಪ್ರಬಲ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬಿಜೆಪಿ ನಾಯಕರು ತಂತ್ರ ರೂಪಿಸಿದ್ದಾರೆ ಎಂದು ಹೇಳಲಾಗುತ್ತಿದ್ದು ,ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ರಾಜಕೀಯ ಪಕ್ಷಗಳು ಬೆಳಗಾವಿ ಕ್ಷೇತ್ರದಲ್ಲಿ ಕಾದು ನೋಡುವ ತಂತ್ರವನ್ನು ಅನುಸರಿಸುತ್ತಿವೆ.ಈ ಕ್ಷೇತ್ರದಲ್ಲಿ ಮೊದಲು ಯಾವ ಪಕ್ಷ ತನ್ನ ಅಭ್ಯರ್ಥಿ ಯನ್ನು ಘೋಷಣೆ ಮಾಡುತ್ತದೆ ಎನ್ನುವದನ್ನು ಕಾದು ನೋಡಬೇಕಾಗಿದೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *