ಬೆಳಗಾವಿ-ಚುನಾವಣೆ ಬಂದಾಗ,ಭಾಷಾ ವೈಷಮ್ಯದ ವಿಷ ಬೀಜ ಬಿತ್ತಿ,ರಾಜಕೀಯ ಬೇಳೆ ಬೇಯಿಸುತ್ತ ಬಂದಿರುವ ನಾಡದ್ರೋಹಿ ಎಂಇಎಸ್ ನಾಯಕರು ಈಗ ಮತ್ತೆ ಬಾಲ ಬಿಚ್ಚಿದ್ದಾರೆ, ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಮತ್ತು ಕಾರವಾರ ಎರಡೂ ಕ್ಷೇತ್ರಗಳಿಂದ ಸ್ಪರ್ದೆ ಮಾಡುವ ನಿರ್ಧಾರ ಕೈಗೊಂಡಿದ್ದಾರೆ.
ಬೆಳಗಾವಿಯ ಮರಾಠಾ ಮಂದಿರದಲ್ಲಿ ಸಭೆ ಸೇರಿದ ಎಂಇಎಸ್ ನಾಯಕರು ಸಂಘಟನೆಯ ಅಸ್ತಿತ್ವಕ್ಕೆ ಲೋಕಸಭೆ ಚುನಾವಣೆಗೆ ನಿಲ್ಲಬೇಕು.ಈ ಬಾರಿ ಎಂಇಎಸ್ ಅಭ್ಯರ್ಥಿಯನ್ನು ಬೆಳಗಾವಿ ಮತ್ತು ಕಾರವಾರ ಎರಡೂ ಕ್ಷೇತ್ರಗಳಿಂದ ಕಣಕ್ಕಿಳಿಸಬೇಕು ಎಂದು ಎಂಇಎಸ್ ಕಾರ್ಯಕರ್ತರು ಸಭೆಯಲ್ಲಿ ಒತ್ತಾಯಿಸಿದ್ರು,ಇದಕ್ಕೆ ಒಪ್ಪಿಗೆ ಸೂಚಿಸಿದ ಎಂಇಎಸ್ ನಾಯಕರು ಮುಂದಿನವಾರ ಇನ್ನೊಂದು ಬಾರಿ ಸಭೆ ಸೇರುತ್ತೇವೆ ಲೋಕಸಭೆಗೆ ಸ್ಪರ್ದೆ ಮಾಡುವ ಎಂಇಎಸ್ ಆಕಾಂಕ್ಷಿಗಳು ಅರ್ಜಿ ಸಲ್ಲಿಸುವಂತೆ ಎಂಇಎಸ್ ನಾಯಕರು ಸೂಚಿಸಿದ್ರು.ಬೆಳಗಾವಿ ಕ್ಷೇತ್ರದಿಂದ ರಣಜೀತ್ ಚವ್ಹಾನ್ ಪಾಟೀಲ,ಶಿವಾಜಿ ಮಂಡೋಳ್ಕರ್,ಶುಭಂ ಶೆಳಕೆ ಅವರನ್ನು ಕಣಕ್ಕಿಳಿಸುವ ವಿಚಾರವನ್ನು ಸಭೆಯಲ್ಲಿ ಕಾರ್ಯಕರ್ತರು ಪ್ರಸ್ತಾಪ ಮಾಡಿದರು.
ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಎಂಇಎಸ್ ಸ್ಪರ್ದೆ ಮಾಡುವ ನಿರ್ಧಾರ ಕೈಗೊಂಡಿದ್ದು,ಕಾಂಗ್ರೆಸ್ ಮತ್ತು ಬಿಜೆಪಿಗೆ ಬ್ಲ್ಯಾಕ್ ಮೇಲ್ ಮಾಡುವ ತಂತ್ರವನ್ನು ಎಂಇಎಸ್ ನಾಯಕರು ಅನುಸರಿಸುತ್ತಿದ್ದಾರೆ.ಕಳೆದ ಬಾರಿ ಚುನಾವಣೆಯಲ್ಲಿ ಶುಭಂ ಶಿಳಕೆ ಬೆಳಗಾವಿ ಕ್ಷೇತ್ರದಿಂದ. ಸ್ಪರ್ದೆ ಮಾಡಿ ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ಪಡೆದು ರಾಜಕೀಯ ಪಕ್ಷಗಳಿಗೆ ಕಿರಿಕಿರಿ ಮಾಡಿದ್ದರು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಂಇಎಸ್ ಅಭ್ಯರ್ಥಿ ಶುಭಂ ಶಿಳಕೆ ಅವರ ಚುನಾವಣಾ ವೆಚ್ಚ ಭರಿಸಲು ಎಂಇಎಸ್ ನಾಯಕರು ಮುಗ್ದ ಮರಾಠಿ ಭಾಷಿಕ ರಿಂದ ಚಂದಾ ವಸೂಲಿ ಮಾಡಿದ್ದರು. ಈ ಬಾರಿಯೂ ಎಂಇಎಸ್ ನಾಯಕರು ಚಂದಾ ವಸೂಲಿ ಮಾಡುವ ಸಾಧ್ಯತೆ ಇದ್ದು ಚುನಾವಣಾ ಅಧಿಕಾರಿಗಳು ಇದಕ್ಕೆ ಬ್ರೇಕ್ ಹಾಕುವದು ಅಗತ್ಯವಾಗಿದೆ.