ಬೆಳಗಾವಿ -ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಮಾಜಿ ಶಾಸಕ ಸಂಜಯ ಪಾಟೀಲ ಅವರು ಅವಮಾನಿಸಿದ ಪ್ರಕರಣ ಈಗ ಪೋಲೀಸ್ ಠಾಣೆಯ ಮೆಟ್ಟಲೇರಿದೆ. ನಿನ್ನೆ ರಾತ್ರಿ ಲಕ್ಷ್ಮೀ ಹೆಬ್ಬಾಳಕರ್ ಬೆಂಬಲಿಗರು ತಮ್ಮ ನಿವಾಸಕ್ಕೆ ಮುತ್ತಿಗೆ ಹಾಕಿ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದಾರೆ ಎಂದು ಮಾಜಿ ಶಾಸಕ ಸಂಜಯ ಪಾಟೀಲ ಲಕ್ಷ್ಮೀ ಹೆಬ್ಬಾಳಕರ್ ಹಾಗೂ ಅವರ ಬೆಂಬಲಿಗ ಮಹಿಳೆಯರ ಮೇಲೆ ದೂರು ಸಲ್ಲಿಸಿದ್ದಾರೆ.
ಸಂಜಯ ಪಾಟೀಲ ಅವರ ಮನೆ ಮುಂದೆ ಕಾನೂನು ಬಾಹಿರವಾಗಿ ಪ್ರವೇಶಿಸಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಂಜಯ ಪಾಟೀಲ ಅವರ ಆಪ್ತರ ಮೇಲೆ ಗೂಂಡಾ ಗರದಿ ನಡೆಸಲು ಕಾರಣಿ ಕರ್ತರಾದವರ ಹಾಗೂ ಅದಕ್ಕೆ ಪ್ರಚೊದನೆ ನೀಡಿ ಅಧಿಕಾರ ದುರಪಯೋಗ ಪಡೆಸಿಕೊಂಡಿದ್ದಾರೆ ಎಂದು ಆರೋಪಿಸಿರುವ ಸಂಜಯ ಪಾಟೀಲ, ಸಚಿವೆ ಲಕ್ಷ್ಮಿ ಹೆಬ್ಬಾಳಕರ ಸೇರಿ ಅವರ ಬೆಂಬಲಿಗರ ಮೇಲೆ ದೂರು ಸಲ್ಲಿಸಿದ್ದಾರೆ.
ಸಂಜಯ ಪಾಟೀಲರು ಬೆಳಗಾವಿಯ ಶಹಾಪೂರ ಪೋಲೀಸ್ ಠಾಣೆಯಲ್ಲಿ ಸಲ್ಲಿಸಿದ ದೂರಿನಲ್ಲಿ ಹೆಬ್ಬಾಳಕರ್ ಬೆಂಬಲಿಗರು ಕೈಯಲ್ಲಿ ಗಾಜಿನ ಬಾಟಲಿ ಮತ್ತು ಇನ್ನಿತರ ಮಾರಣಾಂತಿಕ ಸಾಮುಗ್ರಿಗಳನ್ನು ತೆಗೆದುಕೊಂಡು ಬಂದು ಮನೆಯಲ್ಲಿಯ ಕಿಮ್ಮತ್ತಿನ ಸಾಮುಗ್ರಿಗಳನ್ನು ಒಡೆದು ಹಾಕಿ,ಮನೆಯ ಸಿಬ್ಬಂಧಿಯ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮಾಜಿ ಶಾಸಕ ಸಂಜಯ ಪಾಟೀಲ ಶಹಾಪೂರ ಪೋಲೀಸ್ ಠಾಣೆಗೆ ಖುದ್ದಾಗಿ ತೆರಳಿ ದೂರು ದಾಖಲಿಸಿದ್ದಾರೆ.