ಬೆಳಗಾವಿ
ಟಿಪ್ಪರ್ ಹಾಗೂ ಕಾಲೇಜು ಬಸ್ ನಡುವೆ ಅಪಘಾತ ನಡೆದಿದ್ದು, ಸುಮಾರು 40 ಕ್ಕೂ ವಿದ್ಯಾರ್ಥಿಗಳಿಗೆ ಗಾಯವಾದ ಘಟನೆಯ ಶುಕ್ರವಾರ ಸಂಜೆ ಭೂತರಾಮನಹಟ್ಟಿಯ ಕಿರು ಮೃಗಾಲಯದಲ್ಲಿ ಎದುರು ನಡೆದಿದೆ.
ಕೊಲ್ಹಾಪುರದಿಂದ ಪ್ರವಾಸಕ್ಕೆಂದು ಬಂದಿದ್ದ ವಿದ್ಯಾರ್ಥಿಗಳು ಧಾರವಾಡ ವಿಶ್ವವಿದ್ಯಾಲಯ ನೋಡಿಕೊಂಡು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಮೀಪ ಇರುವ ರಾಣಿ ಚನ್ನಮ್ಮ ಕಿರು ಮೃಗಾಲಯಕ್ಕೆ ಭೇಟಿ ನೀಡಿ ಮರಳಿ ಕೊಲ್ಲಾಪುರಕ್ಕೆ ತೆರಳುವಾಗ ಅಪಘಾತ ಸಂಭವಿಸಿದೆ.
ಗಾಯಾಳು ವಿದ್ಯಾರ್ಥಿಗಳು ಬೆಳಗಾವಿ ಬೀಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದೆ. ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ ನಡೆದಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ