ಬೆಳಗಾವಿ- ಬೆಳಗಾವಿ ನಗರದಲ್ಲಿ ನಕಲಿ ವೈದ್ಯರ ಮತ್ತು ನಕಲಿ ಕ್ಲಿನಿಕ್ ಗಳ ಹಾವಳಿ ಹಚ್ಚಾಗಿದ್ದು ಬೆಳಗಾವಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಆರೋಗ್ಯಾಧಿಕಾರಿಗಳು ಬೆಳಗಾವಿಯಲ್ಲಿ ಬಿರುಸಿನ ಕಾರ್ಯಾಚರಣೆ ನಡೆಸಿದ್ದಾರೆ.
ಬೆಳಗಾವಿ ಭಡಕಲ್ ಗಲ್ಲಿಯ ಶಿವಾ ಕ್ಲಿನಿಕ್ ನೋಂದಣಿ ರದ್ದುಗೊಳಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದು
ನಿಯಮ ಉಲ್ಕಂಘಿಸಿದ ಡಾ.ಎಸ್.ಎ.ದೇವನಗಾವಿ ಇವರಿಗೆ ದಂಡ ವಿಧಿಸಲಾಗಿದೆ.
ಬೆಳಗಾವಿಯ ಭಡಕಲ್ ಗಲ್ಲಿಯ ಶಿವಾ ಕ್ಲಿನಿಕ್ ನಲ್ಲಿ ತೆಳ್ಳಗೆ ಇದ್ದವರಿಗೆ ದಪ್ಪು ಮಾಡಲು, ಮತ್ತು ದಪ್ಪು ಇದ್ದವರಿಗೆ ತೆಳ್ಳಗೆ ಮಾಡಲು,ಜೊತೆಗೆ ಅನೇಕ ಗುಪ್ತ ರೋಗಗಳಿಗೆ ಗುಪ್ತವಾಗಿಯೇ ಅವೈಜ್ಞಾನಿಕ ಔಷಧಿಗಳನ್ನು ನೀಡುತ್ತಿರುವ ವಿಷಯ ಬಹಳ ದಿನ ಗುಪ್ತವಾಗಿ ಉಳಿಯಲಿಲ್ಲ ಇದೇ ಭಡಕಲ್ ಗಲ್ಲಿಯ ಶಿವಾ ಕ್ಲಿನಿಕ್ ಮಾಲೀಕ ಸಾಂಬ್ರಾ ರಸ್ತೆಯ ಪೋತದಾರ ಶಾಲೆಯ ಬಳಿ ಪ್ರತಿದಿನ ಕತ್ತೆ ಹಾಲು ಕೊಡುವ ವಿಚಾರವೂ ಈಗ ಬೆಳಕಿಗೆ ಬಂದಿದೆ. ಕತ್ತೆ ಹಾಲು ಹಲವಾರು ರೋಗಗಳಿಗೆ ಔಷಧಿಯಾಗಿದೆ.ಕತ್ತೆ ಹಾಲು ಸೇವಿಸಿದ್ರೆ ರೋಗಗಳಿಂದ ಗುಣಮುಖರಾಗುತ್ತಾರೆ ಎಂದು ಪ್ರತಿದಿನ ಬೆಳಗ್ಗೆ ಜನರಿಗೆ ಕತ್ತೆ ಹಾಲು ಕೊಟ್ಟು ಜನರಿಗೆ ಮೋಸ ಮಾಡಲಾಗುತ್ತಿದೆ. ಎನ್ನುವ ಸುದ್ದಿ ಸಾಕಷ್ಟು ಪ್ರಚಾರ ಪಡೆದುಕೊಂಡಿದೆ. ಈ ಬಗ್ಗೆಯೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಗಮನ ಹರಿಸುವದು ಅಗತ್ಯವಾಗಿದೆ.
ಶಿವಾ ಕ್ಲಿನಿಕ್ ನಲ್ಲಿ ಕೊಡುತ್ತಿರುವ ಅನೇಕ ಔಷಧಿಗಳು ಆರೋಗ್ಯಕ್ಕೆ ಮಾರಕವಾಗಿವೆ ಎನ್ನಲಾಗಿದ್ದು ಶಿವಾ ಕ್ಲಿನಿಕ್ ನಡೆಸುತ್ತಿರುವ ಮಾಲೀಕ ಬೇರೆ ಹೆಸರಿನಲ್ಲಿ ಅನೇಕ ಕ್ಲಿನಿಕ್ ಗಳನ್ನು ನಡೆಸುತ್ತಿದ್ದಾನೆ ಈ ಬಗ್ಗೆಯೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.