ಬೆಳಗಾವಿ, ಡವರಿ ಕೇಸ್ ಗೆ ಟ್ವಿಸ್ಟ್ ಕೌಂಟರ್ ಕೇಸ್ ದಾಖಲು….!!!
ಬೆಳಗಾವಿ – ಗಂಡ ಮೋಸ ಮಾಡಿದ್ದಾನೆ ವರದಕ್ಷಣೆ ಕಿರುಕಳ ಕೊಟ್ಟಿದ್ದಾನೆ, ಗಂಡನ ಮಾವ ಲೈಂಗಿಕ ಕಿರುಕಳ ಕೊಟ್ಟಿದ್ದಾನೆ, ಎಂದು ಆರೋಪಿಸಿದ ಮಹಿಳೆ ಆತ್ಮಹತ್ಯೆಗೆ ಯತ್ಮಿಸಿದ ಘಟನೆ ದೊಡ್ಡ ಸುದ್ಧಿಯಾಗಿತ್ತು ಆದ್ರೆ ಇದಕ್ಕೆ ಪ್ರತಿಯಾಗಿ ಗಂಡನ ಕುಟುಂಬಸ್ಥರು ಮಹಿಳೆ ಅನ್ಯ ಯುವಕರ ಜೊತೆ ಮೋಜು ಮಾಡಿರುವ ಪೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವದರ ಜೊತೆಗೆ ಮಹಿಳೆಯ ವಿರುದ್ದ ಪ್ರತಿದೂರು ದಾಖಲಿಸಿದ್ದಾರೆ.
ವರದಕ್ಷಿಣೆ ಕಿರುಕುಳ ಆರೋಪಿಸಿ ಮಹಿಳೆ ಆತ್ಮಹತ್ಯೆ ಯತ್ನಿಸಿ ಗಂಡನ ವಿರುದ್ದ ಕೇಸ್ ಹಾಕಿದ ಮಹಿಳೆ ಬೆಳಗಾವಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.ಪ್ರಕರಣ ಸಂಬಂಧ ಪ್ರತಿದೂರು ದಾಖಲಿಸಿದ ಆತ್ಮಹತ್ಯೆ ಯತ್ನಿಸಿದ ಮಹಿಳೆಯ ಮಾವ, ಮಹಿಳೆಯ ವಿರುದ್ದ ಗಂಭೀರ ಆರೋಪಗಳನ್ನು ಮಾಡುವದರ ಜೊತೆಗೆ ಅದಕ್ಕೆ ಸಾಕ್ಷಿಯಾಗಿ ಈ ಮಹಿಳೆ ಅನ್ಯ ಯುವಕರ ಜೊತೆಗಿರುವ ಪೋಟೋಗಳನ್ನು ರಿಲೀಸ್ ಮಾಡಿದ್ದಾನೆ.
ಗಂಡನ ವಿರುದ್ದ ವರದಕ್ಷಿಣೆ ಕಿರುಕಳದ ಆರೋಪ ಮಾಡಿರುವ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ
ಈ ಪ್ರಕರಣದಲ್ಲಿ ಬಿಜೆಪಿ ಮುಖಂಡನೊಬ್ಬನ ಹೆಸರು ತಳಕು ಹಾಕಿಕೊಂಡಿದೆ.ಬೆಳಗಾವಿಯ ಕ್ಯಾಂಪ್ ಠಾಣೆಯಲ್ಲಿ ಬಿಜೆಪಿ ಮುಖಂಡನ ವಿರುದ್ಧ ಕೇಸ್ ದಾಖಲಾಗಿದೆ.ಆತ್ಮಹತ್ಯೆ ಯತ್ನಿಸಿದ್ದ ಮಹಿಳೆಯ ಮಾವ ತಮ್ಣಣ್ಣರಿಂದ ದೂರು ನೀಡಲಾಗಿದೆ.
ಮಹಿಳೆಯ ವಿರುದ್ಧ ಕೌಂಟರ್ ಕೇಸ್ ದಾಖಲಿಸಿದ ಮಹಿಳೆಯ ಪತಿ ಗಣೇಶ ತಂದೆ ತಮ್ಮಣ್ಣ.ಬಿಜೆಪಿ ಮುಖಂಡ , ಹಾಗೂ ವಿವಾಹಿತೆ ಮಹಿಳೆ ಇಬ್ಬರ ವಿರುದ್ಧ ದೂರು ದಾಖಲಿಸಿದ್ದಾರೆ.ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಗಣೇಶ ಪೋಷಕರು.ಸ್ಕೂಲ್ ಮೇಟ್ಸ್ ಆಗಿದ್ದ ಗಣೇಶ ಹಾಗೂ ಕನ್ವಿಕಾ, ಶಾಲಾ ದಿನಗಳಲ್ಲೇ ಇಬ್ಬರ ನಡುವೆ ಸ್ನೇಹ ಇತ್ತು
ಪರಸ್ಪರ ಪ್ರೀತಿ ಮಾಡ್ತಾ ಇದ್ರು, ಮದುವೆ ಮಾಡಿಕೊಳ್ಳುವಂತೆ,ಬಿಜೆಪಿ ಮುಖಂಡನೊಬ್ಬ ಕಿರುಕುಳ ನೀಡಿದ್ದ ಎಂದ ಆರೋಪ ಮಾಡಲಾಗಿದ್ದು
ಹುಡುಗನ ಪೋಷಕರಿಗೆ ಜೀವ ಬೆದರಿಕೆ ಹಾಕಿ ವಿವಾಹ ಮಾಡಿಸಿದ್ದ ಎಂದು ಆರೋಪಿಸಲಾಗಿದೆ.
ಮದುವೆ ನಂತರವೂ ಆತ್ಮಹತ್ಯೆಗೆ ಯತ್ನಿಸಿರುವ ಮಹಿಳೆ, ಸಿಗರೆಟ್, ಮದ್ಯ ಸೇವಿಸುತ್ತಿದ್ದಳೆಂದು ದೂರಿನಲ್ಲಿ ಆರೋಪಿಸಲಾಗಿದೆ.ಗಾಂಜಾ, ಸಿಗರೇಟ್, ಮದ್ಯದ ಬಾಟಲಿ ಜೊತೆಗೆ ಕನ್ವಿಕಾ ಇರುವ ಫೋಟೊಗಳು ರಿಲೀಸ್ ಮಾಡಿದ ಗಣೇಶ ಪೋಷಕರು.ಅನ್ಯ ಯುವಕರ ಜತೆಗೆ ಈ ಮಹಿಳೆ ಅಕ್ರಮ ಸಂಬಂಧ ಹೊಂದಿರುವ ಬಗ್ಗೆಯೂ ಆರೋಪ ಮಾಡಿದ್ದಾರೆ.
ಗಂಡ ಗಣೇಶ ಹಾಗೂ ಪೋಷಕರಿಗೆ ಮಾಹಿತಿ ನೀಡದೇ ಎರಡ್ಮೂರು ದಿನ ಈ ಮಹಿಳೆ ಟ್ರಿಪ್‌ಗೆ ಹೋಗ್ತಿದ್ಲಂತೆ
ಎಲ್ಲಿಗೆ ಹೋಗಿದ್ದೆ ಎಂದು ಗಂಡ ಗಣೇಶ ಪ್ರಶ್ನೆ ಮಾಡಿದ್ದಕ್ಕೆ ಬಿಜೆಪಿ ಮುಖಂಡನ ಸಹಚರರರಿಂದ ಪೋಷಕರಿಗೆ ಧಮ್ಕಿ ಹಾಕಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆತ್ಮಹತ್ಯೆಗೆ ಯತ್ನಿಸಿರುವ ಈ ಮಹಿಳೆ ಅನ್ಯ ಯುವಕರ ಜೊತೆ ಆಕ್ರಮ ಸಂಬಂಧ ಇದ್ರೂ ಬಿಜೆಪಿ ಮುಖಂಡನೊಬ್ಬ ಜೀವ ಬೆದರಿಕೆ ಹಾಕಿ ಗಣೇಶನ ಜೊತೆ ಮದುವೆ ಮಾಡಿಸಿದ್ದ, ಮನೆಯಲ್ಲಿ ಹೇಳದೇ ಕೇಳದೇ ಎರಡ್ಮೂರು ದಿನ ಟ್ರಿಪ್ ಗೆ ಹೋಗಿದ್ಯಾಕೆ ? ಎಂದು ಪ್ರಶ್ನೆ ಮಾಡಿದ್ದಕ್ಕೆ ಬಿಜೆಪಿ ಮುಖಂಡ ನಮಗೆ ಜೀವ ಬೆದರಿಕೆ ಹಾಕಿದ್ದ, ಎಂದು ಗಂಡನ ಮನೆಯವರು ಪ್ರತಿ ದೂರಿನಲ್ಲಿ ಆರೋಪಗಳ ಸುರಿಮಳೆಗೈದಿದ್ದಾರೆ.
ಬೆಳಗಾವಿಯಲ್ಲಿ ನಡೆದ ಡವರಿ ಹರ್ಯಾಶ್ಮೆಂಟ್ ಕೇಸ್ ಈಗ ಡವ್ ಕೇಸ್ ಆಗಿ ಪರಿವರ್ತನೆ ಆಗಿದೆ.