ಬೆಳಗಾವಿ- ವಾಹನಸವಾರರ ಮೇಲೆ ದಾಳಿ ಮಾಡುವದು,ಮಕ್ಕಳಿಗೆ ಕಾಟ ಕೊಡುವದು ಮನೆಯ ಹಿತ್ತಲಲ್ಲಿ ಇರುವ ಗಿಡಗಳ ಮೇಲೆ ಜೋತಾಡುವದು, ಮನೆಗೆ ನುಗ್ಗಿ ಮಾಡಿಟ್ಡ ಅಡುಗೆಯನ್ನು ಚೆಲ್ಲಾಪಿಲ್ಲಿ ಮಾಡುವದರ ಜೊತೆಗೆ ಗ್ರಾಮದಲ್ಲಿ ರಂಪಾಟ ನಡೆಸಿದ ಮಂಗಗಳನ್ನು ಬಲೆಗೆ ಬೀಳಿಸುವ ಕಾರ್ಯಾಚರಣೆ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ತಾವಂಶಿ ಗ್ರಾಮದಲ್ಲಿ ನಡೆದಿದೆ.
ತಾವಂಶಿ ಗ್ರಾಮದಲ್ಲಿ ಇತ್ತೀಚಿಗೆ ಮಂಗಗಳ ಕಾಟ ಹೆಚ್ಚಾಗಿತ್ತು, ಇದು ಮಳೆಗಾಲ, ಹಂಚಿನ ಮನೆಗಳಗಳ ಛಾವಣಿಗಳ ಮೇಲೆ ಥೈ..ಥೈ ಕುಣಿತ, ಊರಿನ ಗಿಡಗಳ ಮೇಲೆ ಜಿಗಿತ ಹೀಗೆ ಹತ್ತು ಹಲವಾರು ರೀತಿಯಲ್ಲಿ ತಾವಂಶಿ ಗ್ರಾಮದ ಜನರ ನಿದ್ದೆಗೆಡಿಸಿದ್ದ ಕಪಿ ಸೇನೆಯನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಬಲೆಗೆ ಬೀಳಿಸಿ ಮಂಗಗಳನ್ನು ಕಾಡಿಗೆ ಬಿಟ್ಟಿದ್ದಾರೆ.
ಹಲವಾರು ದಿನಗಳಿಂದ ಮಂಗಗಳ ಕಾಟದಿಂದ ಬೇಸತ್ತು ಹೋಗಿದ್ದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.