ಚಿಕ್ಕೋಡಿ-( ಬೆಳಗಾವಿ ಸುದ್ದಿ). ಕೃಷ್ಣಾ ನದಿ ತೀರದಲ್ಲಿ ಪ್ರವಾಹದ ಆತಂಕ ಶುರುವಾಗಿದೆ. ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಮಳೆ ಅಬ್ಬರ ಹೆಚ್ವಾಗಿದೆ.ಜೊತೆಗೆ ಬೆಳಗಾವಿ ಜಿಲ್ಲೆಯಲ್ಲೂ ಧಾರಾಕಾರವಾಗಿ ಮಳೆ ಸುರಿಯುತ್ತಲೇ ಇದ್ದು, ಕೃಷ್ಣಾ ನದಿಗೆ ಅಡ್ಡಲಾಗಿದ್ದ ಜಮಖಂಡಿ-ಮೀರಜ್ ರಾಜ್ಯ ಹೆದ್ದಾರಿ ಬಂದ್ ಆಗಿದೆ.
ಕುಡಚಿ ಉಗಾರಖುರ್ದ್ ಮದ್ಯದ ಸಂಪರ್ಕ ಕಲ್ಪಿಸುವ ಸೇತುವೆ ಸಂಪೂರ್ಣವಾಗಿ ಮುಳುಗಡೆಯಾಗಿದೆ.ಸಂಪೂರ್ಣವಾಗಿ ಮುಳುಗಡೆಯಾದ ಕುಡಚಿಯ ಬೃಹತ್ ಸೇತುವೆ ರಸ್ತೆಯ ಎರಡೂ ಕಡೆಗಳಲ್ಲಿ ಬ್ಯಾರಿಕೇಡ್ ಹಾಕಲಾಗಿದ್ದು ಈ ರಸ್ತೆಯಲ್ಲಿ ಸಂಚಾರ ಬಂದ್ ಆಗಿದೆ.ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕುಡಚಿ ಸೇತುವೆ ಇದಾಗಿದ್ದುಕರ್ನಾಟಕ ಮತ್ತು ಮಹಾರಾಷ್ಟ್ರದ ಸಂಪರ್ಕ ಕೊಂಡಿಯಾಗಿರೋ ಸೇತುವೆ ಮುಳುಗಡೆಯಾಗಿದೆ.
ನಿತ್ಯ ನೂರಾರು ಬಸ್ ಹಾಗೂ ವಾಹನಗಳು ಈ ಸೇತುವೆ ಮೂಲಕ ಓಡಾಡುತ್ತವೆ. ಪ್ರಮುಖ ರಾಜ್ಯ ಹೆದ್ದಾರಿ ಇದಾಗಿದೆ.ಸೇತುವೆ ಬಳಿ ಬ್ಯಾರಿಕೇಡ್ ಹಾಕಿ ಬಂದೋಬಸ್ತ ಮಾಡಿದ ಪೊಲೀಸರು. ಕುಡಚಿ ಠಾಣಾ ಪೊಲೀಸರಿಂದ ಸೇತುವೆಗೆ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ.
ಕೃಷ್ಣಾ ನದಿ ಉಕ್ಕಿ ಹರಿಯುತ್ತಿದೆ. ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ ಸಧ್ಯ 1 ಲಕ್ಷ 45 ಸಾವಿರ ಕ್ಯೂಸೇಕ್‌ನಷ್ಟು ಕೃಷ್ಣಾ ನದಿಯ ಒಳಹರಿವು ಇದೆ. ಕೋಯ್ನಾ ಜಲಾಶಯದಿಂದ ದಿಢೀರ್ ಅಂತಾ ನೀರು ಬಿಡುಗಡೆ ಆದ್ರೆ ಕೃಷ್ಣಾ ನದಿಯ ತೀರದಲ್ಲಿ ಪ್ರವಾಹದ ಆತಂಕ ಶುರುವಾಗುವ ಸಾಧ್ಯತೆ ಇದೆ.
ಈಗ ಸದ್ಯಕ್ಕೆ ಪ್ರವಾಹದ ಪರಿಸ್ಥಿತಿ ಕಾಣುತ್ತಿದೆ ನದಿಯ ನೀರು ಪಾತ್ರ ಬಿಟ್ಟು ಹೊರಗೆ ಹರಿಯಲು ಆರಂಭಿಸಿದೆ. ಕೃಷ್ಣಾ ನದಿಯ ಒಳ ಹರಿವು ಸುಮಾರು 1.50 ಲಕ್ಷ ಕ್ಯುಸೆಕ್ಸ್ ಇದೆ ಅಷ್ಟೇ ಪ್ರಮಾಣದಲ್ಲಿ ಆಲಮಟ್ಟಿ ಜಲಾಶಯದಿಂದ ನೀರು ಬಿಡುತ್ತಿರುವದರಿಂದ ಸದ್ಯಕ್ಕೆ ಪ್ರವಾಹದ ಆತಂಕ ಇಲ್ಲ.